ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ನಾಲ್ಕನೇ ಹಂತದ 17 ನೇ ಭಾನುವಾರದ ಶ್ರಮದಾನ
ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ4ನೇ ಹಂತದ17ನೇ ಭಾನುವಾರದ ಶ್ರಮದಾನಕಾರ್ಯಕ್ರಮ ದಿನಾಂಕ 25-2-2018 ಭಾನುವಾರ ಬೆಳಿಗ್ಗೆ 7:30 ಗಂಟೆಯಿಂದ10:30ರ ತನಕ ಕದ್ರಿ ಬಂಟ್ಸ್ ಹಾಸ್ಟೆಲ್‍ರಸ್ತೆಯಲ್ಲಿ ಜರುಗಿತು.
ಪ್ರಧಾನಿಯವರಿಂದ ಪ್ರಶಂಸೆ ಪಡೆದ ಪುಣೆಯ ನಿವೃತ್ತ ಶಿಕ್ಷಕ ಶ್ರೀ ಚಂದ್ರಕಾಂತಕುಲಕರ್ಣಿ ಹಾಗೂ ವಿಶಿಷ್ಠ ಚೇತನ ಶ್ರೀ ಜಗನ್ ಇವರುಗಳು ಸ್ವಾಮಿಜಿತಕಾಮಾನಂದಜಿ ಉಪಸ್ಥಿತಿಯಲ್ಲಿ ಈ ವಾರದಅಭಿಯಾನಕ್ಕೆ ಚಾಲನೆ ನೀಡಿದರು.
ಶ್ರೀ ಚಂದ್ರಕಾಂತಕುಲಕರ್ಣಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿ “ನಾನು ಭಾರತದ ಹಲವು ಪ್ರದೇಶಗಳಲ್ಲಿ ನಡೆಯುತ್ತಿರುವ ಸ್ವಚ್ಛತಾ ಅಭಿಯಾನಗಳನ್ನು ಕಣ್ಣಾರೆಕಾಣುವದೃಷ್ಟಿಯಿಂದ ಸ್ವಯಂ ಪ್ರೇರಿತನಾಗಿ ಸಂಚಾರ ಕೈಗೊಳ್ಳುತ್ತಿರುವೆ. ಕಳೆದ ಎರಡು ದಿನಗಳಿಂದ ನಿತ್ಯಜಾಗೃತಿಅಭಿಯಾನದಲ್ಲಿ ಪಾಲ್ಗೊಂಡುಇಂದು ಶ್ರಮದಾನದಲ್ಲಿಭಾಗಿಯಾಗಿರುವುದು ನನ್ನ ಸೌಭಾಗ್ಯ! ಸ್ವಚ್ಛತೆಗೆ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ನಡೆಯುತ್ತಿರುವ ಈ ಬೃಹತ್‍ಆಂದೋಲನವನ್ನು ಭಾರತದಯಾವುದೇ ಪ್ರದೇಶದಲ್ಲಿಯೂಕಂಡಿಲ್ಲ. ಇದರ ನೇತೃತ್ವ ವಹಿಸಿದ ರಾಮಕೃಷ್ಣ ಮಿಷನ್‍ಗೆಇದರ ಪೂರ್ಣ ಶ್ರೇಯಸ್ಸು ಸಲ್ಲಬೇಕು. ನಾನು ಸ್ವಚ್ಛ ಭಾರತ ನನ್ನಪಿಂಚಣಿ ಮೊತ್ತದ ಮೂರನೇಒಂದು ಭಾಗದಷ್ಟು ಹಣವನ್ನುದಾನಮಾಡಿದಾಗ ಸ್ವತ: ಪ್ರಧಾನಿಯವರೇ ನನ್ನಂತಹಅತಿಸಾಮಾನ್ಯ ವ್ಯಕ್ತಿಯನ್ನು ಗುರುತಿಸಿ,ಕರೆದು ಸಮ್ಮಾನಿಸಿರು.ಈ ಘಟನೆಯು ಭಾರತ ಬದಲಾಗುತ್ತಿರುವುದನ್ನು ಸೂಚಿಸುತ್ತದೆ. ಮುಂದೊಂದು ದಿನ ಮಂಗಳೂರು ನಗರ ಸ್ವಚ್ಛ ಸುಂದರ ನಗರವಾಗುವುದರಲ್ಲಿಯಾವುದೇ ಸಂಶಯವಿಲ್ಲ”ಎಂದು ತಿಳಿಸಿದರು. ಈ ಸಂದರ್ಭದಲ್ಲಿಅಭಿಯಾನದ ಮಾರ್ಗದರ್ಶಿ ಕ್ಯಾ. ಗಣೇಶಕಾರ್ಣಿಕ್, ವಿಠಲದಾಸ ಪ್ರಭು, ಉಮಾಕಾಂತ ಸುವರ್ಣ, ಕಮಲಾಕ್ಷ ಪೈ, ಅಭಿಯಾನದ ಮುಖ್ಯ ಸಂಯೋಜಕ ದಿಲ್‍ರಾಜ್ ಆಳ್ವ ಮುಂತಾದವರು ಉಪಸ್ಥಿತರಿದ್ದರು.
ಶ್ರಮದಾನ: ಸ್ವತ: ಸ್ವಾಮಿಜಿಯವರು ಹಾಗೂ ಗಣ್ಯರು ಪೆÇರಕೆ ಹಿಡಿದು ಒಂದಿಷ್ಟು ಹೊತ್ತುಕದ್ರಿರಸ್ತೆಯಲ್ಲಿ ಸ್ವಚತೆಯನ್ನುಕೈಗೊಂಡರು. ಸ್ವಯಂ ಸೇವಕರುಐದು ಗುಂಪುಗಳನ್ನು ರಚಿಸಿಕೊಂಡು ಸ್ವಚ್ಛತೆಗೆತೊಡಗಿದರು. ಒಂದನೇ ಗುಂಪುರಾಮಚಂದ್ರ ಭಟ್ ನೇತೃತ್ವದಲ್ಲಿ ಬಂಟ್ಸ್ ಹಾಸ್ಟೆಲ್ ವೃತ್ತದಿಂದ ಸಾಗುವ ಕದ್ರಿ ಮುಖ್ಯರಸ್ತೆಯಎಡಭಾಗದರಸ್ತೆ, ಕಾಲುದಾರಿ, ಹೆಚ್ಚುವರಿ ಜಾಗೆಗಳನ್ನು ಹಸನುಗೊಳಿಸಿದರೆ, ಡಾ. ಸತೀಶ್‍ರಾವ್ ಹಾಗೂಇತರ ಹಿರಿಯ ಸದಸ್ಯರುರಸ್ತೆಯ ಬಲಬದಿಯನ್ನು ಸ್ವಚ್ಛ ಮಾಡಿದರು. ಫರೇನ್ಸ್‍ಡಿಸೋಜ್ ಹಾಗೂ ಜಸ್ವತ್‍ಜೊತೆಗೂಡಿ ಸಂತ ಅಲೋಶಿಯಸ್ ಮೇನೆಜ್ ಮೆಂಟ್ ವಿದ್ಯಾರ್ಥಿಗಳು ಮಾರ್ಗವಿಭಾಜಕಗಳ ಬದಿಗಳನ್ನು ಗುಡಿಸಿದರು. ಶ್ರೀಮತಿ ನಳಿನಿ ಭಟ್ ಹಾಗು ಹಿಂದೂ ವಾರಿಯರ್ಸ್‍ಯುವತಿಯರುತ್ಯಾಜ್ಯವನ್ನುಟಿಪ್ಪರ್ ಗೆ ತುಂಬಿಸಿ ಸಹಕರಿಸಿದರು.
ಬಸ್ ತಂಗುದಾಣದ ಸೌಂದರ್ಯೀಕರಣ:ಪ್ರತಿದಿನ ನೂರಾರುಜನಉಪಯೋಗಿಸುವಕದ್ರಿ ನ್ಯಾಚುರಲ್‍ಐಸ್‍ಕ್ರೀಂ ಪಾರ್ಲರ್‍ಎದುರುಗಿನ ಬಸ್ ತಂಗುದಾಣ ಸೂಕ್ತ ನಿರ್ವಹಣೆಇಲ್ಲದೇ ಕಸ, ಧೂಳಿನಿಂದ ತುಂಬಿತ್ತು. ಇದನ್ನು ಗಮನಿಸಿದ ಸ್ವಚ್ಛ ಮಂಗಳೂರಿನ ಯುವಕರು ಮುಖೇಶ್ ಆಳ್ವ ನೇತೃತ್ವದಲ್ಲಿ ಆ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿ ತೊಳೆದು ಸುಂದರವಾಗಿ ಬಣ್ಣ ಹಚ್ಚಿ ಅಂದಗೊಳಿಸಿ ಅಲ್ಲಿ ಸ್ವಚ್ಛತೆಯ ಸಂದೇಶ ಸಾರುವ ಫಲಕವನ್ನೂ ಅಳವಡಿಸಿದ್ದಾರೆ.
ಗಾರ್ಡನ್ ಸ್ವಚ್ಛತೆ: ಬಸ್ ತಂಗುದಾಣದ ಹಿಂಭಾಗದ ಪುಟ್ಟಗಾರ್ಡನ್‍ನಲ್ಲಿ ಹುಲ್ಲು, ಪೆÇದೆ ಗಿಡಗಂಟಿಗಳು ಬೆಳೆದುನಿಂತು ಸ್ವಚ್ಛತೆಗೆ ಸವಾಲಾದಂತಿತ್ತು. ಶಿಶಿರ ಅಮೀನ್, ಸುಜಿತ ಪ್ರತಾಪ ಹಾಗೂ ಇನ್ನಿತರಯುವಕರು ಅನೇಕ ವರ್ಷಗಳಿಂದ ಸ್ವಚ್ಛ ಮಾಡಿರದಿದ್ದ ಆ ಜಾಗವನ್ನುಇಪ್ಪತ್ತುಜನ ಸ್ವಯಂ ಸೇವಕರೊಡಗೂಡಿ ಸುಮಾರುಎರಡೂವರೆ ಗಂಟೆಗಳ ಕಾಲ ಶ್ರಮªಹಿಸಿ ಇಡೀ ಸ್ಥಳವನ್ನು ಹಸನು ಮಾಡಿದರು.
ಫ್ಲೆಕ್ಸ್ ಬ್ಯಾನರ್‍ತೆರವು: ನಗರದಅಂದಗೆಡಿಸುತ್ತಿರುವ ಹಾಗೂ ಪ್ರಯಾಣಿಕರಿಗೆಅಪಾಯವನ್ನುತಂದೊಡ್ಡುತ್ತಿರುವರಸ್ತೆ ಬದಿಯ ಫ್ಲೆಕ್ಸ್ ಬ್ಯಾನರ್‍ಗಳನ್ನು ಕ್ರಿಯಾಶೀಲ ಸಮಾಜ ಸೇವಕ ಸೌರಜ್ ಮಂಗಳೂರು, ಸುಧೀರ ವಾಮಂಜೂರು ಹಾಗೂ ಇನ್ನಿತರಯುವಕರು ಸುಮಾರು ಸಾವಿರಕ್ಕೂಅಧಿಕ ಬ್ಯಾನರ್‍ಗಳನ್ನು ತೆಗೆದರು. ಎಬಿ ಶೆಟ್ಟಿ ವೃತ್ತದಿಂದಕ್ಲಾಕ್‍ಟವರ್, ಹಂಪಣಕಟ್ಟೆ, ಬಲ್ಮಠ, ಕರಂಗಲಪಾಡಿ, ಪಿವಿಎಸ್, ಕದ್ರಿ ಮುಖ್ಯ ರಸ್ತೆಗಳಲ್ಲಿ ತೂಗು ಹಾಕಿದ್ದ ಹಾಗೂ ಕಟ್ಟಿದ್ದ ಬ್ಯಾನರ್ ಗಳನ್ನು ತೆರವುಗೊಳಿಸಿದರು.
ಮುಂದುವರೆದಕಾರ್ಯ:ಕಳೆದ ಭಾನುವಾರ ಸ್ವಚ್ಛತೆ ಮಾಡಲಾಗಿದ್ದಅತ್ತಾವರದಲ್ಲಿ ಈ ದಿನ ಪುನ: ಶ್ರಮದಾನಕೈಗೊಳ್ಳಲಾಯಿತು. ಅತ್ತಾವರ ಪರಿಸರದಲ್ಲಿತ್ಯಾಜ್ಯ ಸುರಿಯುತ್ತಿದ್ದ ಜಾಗಗಳನ್ನು ಕ್ಲೀನ್ ಮಾಡಿಜನರ ಮನೆಗಳಿಗೆ ಅಂಗಡಿಗಳಿಗೆ ಭೇಟಿಯಿತ್ತು ಕಸ ಮಾರ್ಗ ಬದಿಯಲ್ಲಿ ಸುರಿಯದಂತೆ ವಿನಂತಿ ಮಾಡಿದುದರ ಪರಿಣಾಮ ಆ ಜಾಗಸಂಪೂರ್ಣಕಸಮುಕ್ತವಾಗಿತ್ತು. ಇಂದು ಆ ಜಾಗವನ್ನು ಗುಡಿಸಿ, ಉತ್ತಮ ಮಣ್ಣುಹಾಕಿ ಹೂಕುಂಡಗಳನ್ನಿಟ್ಟು ಅಂದಗಾಣುವಂತೆ ಮಾಡಲಾಯಿತು. ಮಹ್ಮದ್ ಶಮೀಮ್,ಮುಬಾರಕ್ ಮತ್ತಿತರರುಆಸಕ್ತಿಯಿಂದಅಭಿಯಾನದಲ್ಲಿ ಭಾಗವಹಿಸಿದರು.