ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 18 ನೇ ಭಾನುವಾರದ ವರದಿ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 18 ನೇ ಭಾನುವಾರದ ವರದಿ

ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 4ನೇ ಹಂತದ 18ನೇ ವಾರದ ಶ್ರಮದಾನವನ್ನು ದಿನಾಂಕ 4-3-2018 ಭಾನುವಾರ ಕಾವೂರು ವೃತ್ತದಲ್ಲಿ ಹಮ್ಮಿಕೊಳ್ಳಲಾಯಿತು. ಶ್ರೀಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಮಠದ ಪೀಠಾಧ್ಯಕ್ಷರಾದ ಪೂಜ್ಯ ಧರ್ಮಪಾಲನಾಥ ಸ್ವಾಮಿಜಿ ಹಾಗೂ ಮಾಜಿ ಮೇಯರ್ ಶ್ರೀ ಹರಿನಾಥ್ ಜಂಟಿಯಾಗಿ ಅಭಿಯಾನವನ್ನು ಶುಭಾರಂಭಗೊಳಿಸಿದರು. ಈ ಸಂದರ್ಭದಲ್ಲಿ ಚೆನೈ ರಾಮಕೃಷ್ಣ ಮಠದ ಬ್ರಹ್ಮಚಾರಿ ಮಾಧವ ಚೈತನ್ಯ , ಬ್ರಹ್ಮಚಾರಿ ಶಿವಕುಮಾರ್ ಉಪಸ್ಥಿತರಿದ್ದರು. ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆಗಮಿಸಿದ ಅತಿಥಿಗಳನ್ನು ಹಾಗೂ ಸ್ವಯಂ ಸೇವಕರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಧರ್ಮಪಾಲನಾಥ ಸ್ವಾಮಿಜಿಯವರು ಶುಭ ಹಾರೈಸಿ ಮಾತನಾಡಿ “ಮನೆಯೊಳಗಿನ ಸ್ವಚ್ಛತೆ ಹಾಗೂ ಮನೆಯ ಹೊರಗಿನ ಸ್ವಚ್ಛತೆಯ ಜೊತೆಗೆ ಮನಸ್ಸು ಸ್ವಚ್ಛವಾದರೆ ದೇಶ ನಿಜವಾಗಿಯೂ ಸ್ವಚ್ಛವಾಗುತ್ತದೆ. ಅಂತಹ ಕಾರ್ಯವನ್ನು ಅತ್ಯಂತ ಉತ್ಕೃಷ್ಟವಾಗಿ ರಾಮಕೃಷ್ಣ ಮಿಷನ್ನಿನಿಂದ ಅಭಿಯಾನದ ರೂಪದಲ್ಲಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾಗಿರುವಂಥದ್ದು. ಪ್ರತಿಯೊಬ್ಬ ಪ್ರಜೆ ಜವಾಬ್ದಾರಿ ಅರಿತು ಇದು ನನ್ನ ಪರಿಸರ, ನನ್ನ ದೇಶ ಅನ್ನುವ ಭಾವ ತಳೆದು ವರ್ತಿಸಿದರೆ ಸ್ವಚ್ಛ ಭಾರತ ಅಭಿಯಾನ ಪರಿಣಾಮಕಾರಿಯಾಗಬಲ್ಲದು. ಇದಕ್ಕೆ ನಿರಂತರ ಜಾಗೃತಿ ಮುಖ್ಯವಾದುದು. ಆ ದಿಸೆಯಲ್ಲಿ ಇಂತಹ ಅಭಿಯಾನಗಳು ಪ್ರಯೋಜನಕಾರಿಯಾಗಬಲ್ಲವು” ಎಂದು ತಿಳಿಸಿದರು

ಕಾವೂರು: ಕಾರ್ಯಕರ್ತರು ಮೊದಲಿಗೆ ಕಾವೂರು ಜಂಕ್ಷನ್ ಸುತ್ತಮುತ್ತ ಶ್ರೀರಾಮಕುಮಾರ್ ಬೇಕಲ್ ಹಾಗೂ ಸಿಂಡಿಕೇಟ್ ಸದಸ್ಯ ಶ್ರೀಹರೀಶ್ ಆಚಾರ್ ಜೊತೆಗೂಡಿ ಸ್ವಚ್ಛತೆಯನ್ನು ಕೈಗೊಂಡರು. ನಂತರ ಬೊಂದೆಲ್‍ನತ್ತ ಸಾಗುವ ಮಾರ್ಗಗಳನ್ನು ಶುಚಿಮಾಡಲಾಯಿತು. ಹಾಗೇ ಏರಪೆÇೀರ್ಟ್ ಕಡೆಗೆ ಸಾಗುವ ರಸ್ತೆಯ ಎರಡೂ ಬದಿಯ ಹುಲ್ಲು ಮಣ್ಣು ಹಾಗೂ ತ್ಯಾಜ್ಯವನ್ನು ತೆಗೆಯಲಾಯಿತು. ಕಾವೂರು ಬಸ್ ತಂಗುದಾಣದ ಸುತ್ತಮುತ್ತಲಿನ ಪರಿಸರ ಹಾಗೂ ಆಟೋ ನಿಲ್ದಾಣವನ್ನು ಶುಚಿಗೊಳಿಸಿ ಆಟೋ ಚಾಲಕರಿಗೆ ಸ್ವಚ್ಛತೆಯ ಕುರಿತು ತಿಳುವಳಿಕೆ ನೀಡಲಾಯಿತು. ಇಮ್ತಿಯಾಜ್ ಶೇಖ್ ಹಾಗೂ ಸ್ವಯಂ ಸೇವಕರು ರಸ್ತೆಗಳ ಮಾರ್ಗವಿಭಾಜಕಗಳನ್ನು ಕಳೆ ಕಸ ತೆಗೆದು ಹಸನು ಮಾಡಿದರು.

ಮರಕಡ: ಸ್ವಯಂ ಸೇವಕರ ಮತ್ತೊಂದು ಗುಂಪು ಅಶೋಕ ಸುಬ್ಬಯ್ಯ ಮಾರ್ಗದರ್ಶನದಲ್ಲಿ ಮರಕಡ ಬಸ್ ತಂಗುದಾಣ ಸುತ್ತಮುತ್ತ ಸ್ವಚ್ಛತೆಯನ್ನು ಕೈಗೊಂಡಿತು. ಮರಕಡ ಬಸ್ ತಂಗುದಾಣವನ್ನು ಶುಚಿಗೊಳಿಸಿ ತೊಳೆದು ಸುಂದರವಾಗಿ ಸುಣ್ಣ ಬಣ್ಣವನ್ನು ಹಚ್ಚಿ ಅಂದ ಮಾಡಲಾಯಿತು. ಜೊತೆಗೆ ಹರಿದು ಹೋದ ಫಲಕವನ್ನು ತೆಗೆದು ಸ್ವಚ್ಛತೆಯ ಸಂದೇಶವುಳ್ಳ ನೂತನ ಫಲಕವನ್ನು ಅಳವಡಿಸಲಾಯಿತು. ತದನಂತರ ಬಸ್ ನಿಲ್ದಾಣದ ಸುತ್ತಮುತ್ತ ಬೆಳೆದಿದ್ದ ಹುಲ್ಲು ಕತ್ತರಿಸಿ ಗುಡಿಸಿ ಶುಚಿ ಮಾಡಲಾಯಿತು. ಕೃಷ್ಣ ಪ್ರಸಾದ ಶೆಟ್ಟಿ, ಗಣೇಶ್ ಪ್ರಸಾದ ಶೆಟಿ,್ಟ ಆನಂದ ಅಡ್ಯಾರ್ ಮತ್ತಿತರ ಕಾರ್ಯಕರ್ತರು ಶ್ರಮದಾನ ಕೈಗೊಂಡರು.

ಮನೆ ಭೇಟಿ: ಶ್ರೀ ದುರ್ಗಾಪರಮೇಶ್ವರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕ ಸಂತೋಷ ಆಳ್ವ ಮಾರ್ಗದರ್ಶನದಲ್ಲಿ ಕಾವೂರು ಕಾಲನಿ ಮತ್ತು ಕಾವೂರು ಕಟ್ಟೆಯ ಪರಿಸರದಲ್ಲಿರುವ ಮನೆಗಳಿಗೆ ನೀಡಿದರು. ಮನೆ ಪರಿಸರದ ಶುಚಿತ್ವ ಕಾಪಾಡುವಂತೆ ಹಾಗೂ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕದಂತೆ ವಿನಂತಿಸಿದರು. ಕೋಡಂಗೆ ಬಾಲಕೃಷ್ಣ ನಾಯ್ಕ್, ನಲ್ಲೂರು ಸಚಿನ್ ಶೆಟ್ಟಿ, ಗಣೇಶ್ ಕಾವೂರು ಮನೆ ಭೇಟಿಯಲ್ಲಿ ಪಾಲ್ಗೊಂಡರು. ಫ್ಲೆಕ್ಸ್ ಬ್ಯಾನರ್ ತೆರವು: ಏರಪೆÇೀರ್ಟ್ ರಸ್ತೆಯಲ್ಲಿ ಹಲವಾರು ಫ್ಲೆಕ್ಸ್ ಬ್ಯಾನರಗಳು ನೇತಾಡಿಕೊಂಡು ನಗರದ ಅಂದಗೆಡಿಸುತ್ತಿದ್ದವು. ಕಳೆದ ವಾರದಂತೆ ಇಂದೂ ಸಹ ಸುಮಾರು ಐನೂರಕ್ಕೂ ಅಧಿಕ ಬ್ಯಾನರ್ ಗಳನ್ನು ತೆರವುಗೊಳಿಸಲಾಯಿತು. ಅಲ್ಲಲ್ಲಿ ಅಂಟಿಸಿದ್ದ ಪೆÇೀಸ್ಟರ್‍ಗಳನ್ನೂ ತೆಗೆದು ಸ್ವಚ್ಛ ಮಾಡಲಾಯಿತು.

108 ಸ್ವಚ್ಛತಾ ಮಂಥನ ಕಾರ್ಯಕ್ರಮಗಳು: ಶಾಲಾ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸಬೇಕೆಂಬ ನಿಟ್ಟಿನಲ್ಲಿ ಯೋಜಿಸಿರುವ ಸ್ವಚ್ಛ ಮನಸ್ಸು ಅಭಿಯಾನದ ಅಡಿಯಲ್ಲಿ ಕಳೆದ ಫೆಬ್ರವರಿ ತಿಂಗಳಿನಲ್ಲಿ “ಸ್ವಚ್ಛತಾ ಮಂಥನ” ಎಂಬ ಕೈಪಿಡಿಯ ಮೇಲೆ ವಿಶೇಷ ಕಾರ್ಯಕ್ರಮಗಳನ್ನು ಆಯಾ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಯಿತು. ಒಟ್ಟು 108 ಪ್ರೌಢಶಾಲೆಗಳಿಂದ ಒಟ್ಟು 10750 ವಿದ್ಯಾರ್ಥಿಗಳು ಭಾಗವಹಿಸಿದರು. ಸುಮಾರು ಐವತ್ತು ಸಂಪನ್ಮೂಲ ವ್ಯಕ್ತಿಗಳು ಹಾಗೂ ಐವತ್ತು ಶಾಲಾ ಸಂಯೋಜಕರ ಸಹಕಾರದಿಂದ “ಸ್ವಚ್ಛತಾ ಮಂಥನ” ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಪ್ರಧಾನ ಸಂಯೋಜಕ ರಂಜನ್ ಬೆಳ್ಳರಪಾಡಿ ನೇತೃತ್ವದಲ್ಲಿ ಸಂತೋಷ ಡಿಸೋಜಾ, ಉಪನ್ಯಾಸಕ ಶ್ರೀವತ್ಸ ನಿರ್ಚಾಲು, ಅರ್ಜುನ ಪೈ , ವೀಣಾ ಎಸ್ ಪಂಡಿತ್ ಹಾಗೂ ಶ್ರೇಯಸ್ ಪಂಡಿತ್ ಕಾರ್ಯಕ್ರಮಗಳನ್ನು ಸಂಯೋಜಿಸಿದರು.


Spread the love