ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 19 ನೇ ಭಾನುವಾರದ ಶ್ರಮದಾನದ ವರದಿ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 19 ನೇ ಭಾನುವಾರದ ಶ್ರಮದಾನದ ವರದಿ

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 19ನೇ ವಾರದ ಶ್ರಮದಾನವನ್ನು ದಿನಾಂಕ 11-3-2018 ಆದಿತ್ಯವಾರ ಬಂದರ್ ನಲ್ಲಿ ಆಯೋಜನೆ ಮಾಡಲಾಗಿತ್ತು. ಬೆಳಿಗ್ಗೆ 7:30 ಕ್ಕೆ ಬಂದರ ಪೆÇೀಲಿಸ್ ಠಾಣೆಯ ಆವರಣದಲ್ಲಿ ಪೆÇೀಲಿಸ್ ಉಪಆಯುಕ್ತ ಉದಯ ನಾಯಕ್ ಹಾಗೂ ಪೆÇೀಲಿಸ್ ಇನಸ್ಪೆಕ್ಟರ್ ಸುರೇಶ್ ಕುಮಾರ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.

ಸ್ವಾಮಿ ಜಿತಕಾಮಾನಂದಜಿ, ನಜೀರ್ ಹುಸೇನ್ , ರಘುವೀರ್ ಪೈ , ಮಸಾಹಿರೊ, ಶ್ರೀಲತಾ ಉಳ್ಳಾಲ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಸಿಪಿ ಉದಯ ನಾಯಕ್ ಮಾತನಾಡಿ “ಸ್ವಚ್ಛತೆ ಸರ್ವರಿಗೂ ಅವಶ್ಯವಾಗಿದೆ. ಇದನ್ನು ಜನಮಾನಸದಲ್ಲಿ ಬಿತ್ತುವಂತಹ ಕಾರ್ಯ ಮಂಗಳೂರಿನಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವುದು ಅಭಿನಂದನಾರ್ಹವಾಗಿದೆ. ಪ್ರತಿ ನಾಗರಿಕ ಸ್ವಚ್ಛತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಬಲ್ಲುದು. ಅಂತಹ ಭಾವನೆ ಆದಷ್ಟು ಬೇಗ ಎಲ್ಲರಲ್ಲೂ ಮೂಡಲಿ, ತನ್ಮೂಲಕ ದೇಶ ಸ್ವಚ್ಛತೆಯತ್ತ ಸಾಗುವಂತಾಗಲಿ” ಎಂದು ಶುಭಹಾರೈಸಿದರು.

ಶ್ರಮದಾನ: ಬಂದರ್À ಪೆÇೀಲಿಸ್ ಠಾಣೆಯ ವೃತ್ತದ ನಾಲ್ಕೂ ರಸ್ತೆಗಳನ್ನು ಸ್ವಚ್ಛ ಮಂಗಳೂರು ಕಾರ್ಯಕರ್ತರು ಡಾ. ಸತೀಶ ರಾವ್ ಹಾಗೂ ಮಹಮ್ಮದ್ ಶಮೀಮ್ ಜೊತೆಸೇರಿ ಶುಚಿಗೊಳಿಸಿ, ಕಾಲುದಾರಿಯನ್ನು ಸ್ವಚ್ಛ ಮಾಡಿದರು. ಮಿಷನ್ ಸ್ಟ್ರೀಟ್, ನೆಲ್ಲಿಕಾಯಿ ರಸ್ತೆ, ಮಹಮದ್ ಅಲಿ ರಸ್ತೆ ಹಾಗೂ ಬೀಬಿ ಅಲಾಬಿ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ಜರುಗಿತು.

ಪೆÇೀಲಿಸರಿಂದ ಸ್ವಚ್ಛತೆ: ಬಂದರು ಠಾಣಾ ಆವರಣದಲ್ಲಿ ಪೆÇೀಲಿಸ್ ಸಿಬ್ಬಂದಿ ಸ್ವಚ್ಛತಾ ಕಾರ್ಯ ಕೈಗೊಂಡರು. ಮೂಲೆಮೂಲೆಗಳಲ್ಲಿದ್ದ ಕಸ ತ್ಯಾಜ್ಯ ತೆಗೆಯುವುದಲ್ಲದೇ ಗಿಡಗಂಟಿಗಳನ್ನು ಕತ್ತರಿಸಿ ತೆರವುಗೊಳಿಸಿದರು, ಹುಲ್ಲು ಕತ್ತರಿಸಿದರು ಹಾಗೂ ಅಗತ್ಯವಿದ್ದಲ್ಲಿ ಜಾಗೆಯನ್ನು ನೀರಿನಿಂದ ತೊಳೆದು ಆವರಣವನ್ನು ಸ್ವಚ್ಛಗೊಳಿಸಿದರು.

ಎಂ.ಪಿ.ಎಲ್ ಸ್ವಚ್ಛತಾ ಕಾರ್ಯ: ಮಂಗಳೂರು ಪ್ರೀಮಿಯಮ್ ಲೀಗ್ ಸದಸ್ಯರು ಸೀರಾಜುದ್ದಿನ್ ನೇತೃತ್ವದಲ್ಲಿ ಬಂದರ್ ಪೆÇೀಲಿಸ್ ಸ್ಟೇಶನ್ ಆವರಣ ಗೋಡೆಯನ್ನು ತಿಕ್ಕಿ ಸ್ವಚ್ಛಗೊಳಿಸಿದರು. ಅನಂತರ ಸತ್ಯನಾರಾಯಣ ಕೆ ವಿ ಮಾರ್ಗದರ್ಶನದಲ್ಲಿ ಕಾಂಪೌಂಡ್‍ಗೆ ಬಣ್ಣ ಹಚ್ಚಿ ಸುಂದರಗೊಳಿಸಿದರು. ಒಂದಿಷ್ಟು ಸದಸ್ಯರು ಸಂಚಾಲಕ ಇಮ್ತಿಯಾಜ್ ಜೊತೆಗೂಡಿ ರಸ್ತೆ ಹಾಗೂ ತೋಡುಗಳನ್ನು ಸ್ವಚ್ಛ ಮಾಡಿದರು. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವತ: ಕಾಂಪೌಂಡಗೆ ಬಣ್ಣಬಳಿಯುತ್ತಿದ್ದುದು ವಿಶೇಷವಾಗಿತ್ತು.

ಮಂಗಳೂರು ಬುಲ್ಸ್ : ಮೋಟರ್ ಸೈಕಲ್ ಕ್ಲಬ್ ಸದಸ್ಯರು ಬೀಬಿ ಅಲಾಬಿ ರಸ್ತೆಯ ಕೆನರಾ ಗೂಡ್ಸ್ ಪಕ್ಕದ ಸ್ಥಳವೊಂದರಲ್ಲಿ ಅನೇಕ ವರ್ಷಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸಿದರು. ಸುಮಾರು ಎರಡು ಟಿಪ್ಪರಗಳಿಷ್ಟಿದ್ದ ತ್ಯಾಜ್ಯವನ್ನು ಜೆಸಿಬಿ ಸಹಾಯದಿಂದ ಅಶ್ವಿತ್ ಕುಮಾರ, ಆಶ್ಲೆಶ ಅತ್ತಾವರ ಹಾಗೂ ಸ್ವಂiÀiಂ ಸೇವಕರು ತೆರವುಗೊಳಿಸಿದರು. ಇದೀಗ ಅಲ್ಲಿ ಅಲಂಕಾರಿಕ ಹೂಕುಂಡಗಳನ್ನಿಟ್ಟು, ಸಾರ್ವಜನಿಕರು ಕಸಹಾಕದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ.

ಮಾರ್ಗಸೂಚಕ ಫಲಕ ನವೀಕರಣ: ಸ್ವಚ್ಛತೆಯೊಂದಿಗೆ ಜನಪಯೋಗಿ ಕಾರ್ಯ ಎಂಬ ಹಿನ್ನಲೆಯಲ್ಲಿ ಮಾರ್ಗಸೂಚಕಗಳೆರಡನ್ನು ಇಂದು ನವೀಕರಿಸಲಾಗಿದೆ. ಬಂದರ್ ಪೆÇೀಲಿಸ್ ಠಾಣಾ ವೃತ್ತದಲ್ಲಿರುವ ಮಿಷನ್ ಸ್ಟ್ರೀಟ್ ಹಾಗೂ ಮಹಮದ್ ಅಲಿ ರಸ್ತೆಯ ನಾಮಫಲಕಗಳ ಬಣ್ಣ ಮಾಸಿ ಹೋಗಿ ಹಲವು ವರ್ಷಗಳೇ ಸಂದಿದ್ದವು. ಇಂದು ಅವಕ್ಕೆ ಬಣ್ಣ ಬಳಿದು ಸುಂದರವಾದ ಅಕ್ಷರಗಳಿಂದ ರಸ್ತೆಯ ಹೆಸರುಗಳನ್ನು ಬರೆಯಿಸಲಾಯಿತು . ಹಾಗೂ ಬಂದರ್ ವ್ಯಾಪ್ತಿಯ ಹಲವು ಕಡೆ ಕಟ್ಟಿದ್ದ ಬ್ಯಾನರ್‍ಗಳನ್ನು ತೆರವುಗೊಳಿಸಲಾಯಿತು.

ಅಲೋಸಿಯಸ್ ಮೆನೇಜಮೆಂಟ್ ಕಾಲೇಜು: ವಿದ್ಯಾರ್ಥಿಗಳು ದೇವಿಕಾ. ಪ್ರೀತಮ್ ಕ್ರಿಸ್ಟಲ್, ಪ್ರಜ್ವಲ್ ಹಾಗೂ ಇತರೆ ಕಾರ್ಯಕರ್ತರು ಬೀಬಿ ಅಲಾಬಿ ರಸ್ತೆ, ಮಿಷನ್ ಸ್ಟ್ರೀಟ್ ರಸ್ತೆಯ ಹಲವು ಮನೆಗಳಿಗೆ ತೆರಳಿ ಸ್ವಚ್ಛತೆಯ ಕರಪತ್ರ ನೀಡಿದರು. ಹಾಗೂ ವಿಶೇಷವಾಗಿ ತ್ಯಾಜ್ಯ ತೆರವುಗೊಳಿಸಿದ ಜಾಗೆಯ ಸುತ್ತಮುತ್ತಲಿನ ಪರಿಸರದಲ್ಲಿ ಜಾಗೃತಿ ಕಾರ್ಯ ಕೈಗೊಂಡರು. ಶ್ರಮದಾನದ ಬಳಿಕ ಸರ್ವರಿಗೂ ಕೆನರಾ ಗೂಡ್ಸ್ ಟ್ರಾನ್ಸ್ ಪೆÇೀರ್ಟ್ ವತಿಯಿಂದ ಬಂದರ್ ಪೆÇೀಲಿಸ್ ಸ್ಟೇಶನ್ನಿನಲ್ಲಿ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಉಪನ್ಯಾಸಕ ಮೆಹಬೂಬ ಖಾನ್, ರಾಜೇಶ್ ಪೂಜಾರಿ, ಬಾಲಕೃಷ್ಣ ಪರ್ಕಳ, ಪ್ರಕಾಶ ಗರೋಡಿ, ಸಂತೋಷ ಕಲಶ ಮತ್ತಿತರರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಪ್ರಧಾನ ಸಂಯೋಜಕ ದಿಲ್‍ರಾಜ್ ಆಳ್ವ ಕಾರ್ಯಕ್ರಮವನ್ನು ಸಂಘಟಿಸಿದರು. ಸ್ವಚ್ಛ ಮಂಗಳೂರು ಅಭಿಯಾನಕ್ಕೆ ಎಂಆರ್‍ಪಿಎಲ್ ಸಂಸ್ಥೆ ಪ್ರಾಯೋಜಕತ್ವ ನೀಡುತ್ತಿದೆ.


Spread the love