ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 28 ನೇ ಶ್ರಮದಾನದ ವರದಿ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 28 ನೇ ಶ್ರಮದಾನದ ವರದಿ

ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 28ನೇ ಶ್ರಮದಾನ ಕಾರ್ಯಕ್ರಮವನ್ನು ನಗರದ ಮಣ್ಣಗುಡ್ಡೆಯಲ್ಲಿ ಆಯೋಜಿಸಲಾಯಿತು. ದಿನಾಂಕ 29-4-2018 ಆದಿತ್ಯವಾರದಂದು ಬೆಳಿಗ್ಗೆÉ 7:30 ಕ್ಕೆ ಮಹಾತ್ಮಾ ಗಾಂಧಿ ಪಾರ್ಕ್ ಬಳಿ ನಿವೃತ್ತ ಬ್ಯಾಂಕ್ ಅಧಿಕಾರಿ ರವೀಂದ್ರನಾಥ್ ನಾಯಕ್ ಹಾಗೂ ಪ್ರವೀಣ ಶೆಟ್ಟಿ ಜಂಟಿಯಾಗಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಹರಾಜ್, ರಾಮಕುಮಾರ್ ಬೇಕಲ್, ಡಾ ಧನೇಶ ಕುಮಾರ್, ರಂಜನ ಬಿ ಯು, ದಿಲ್‍ರಾಜ್ ಆಳ್ವ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರವೀಣ ಶೆಟ್ಟಿ ಮಾತನಾಡಿ“ಸ್ವಚ್ಛತೆ ನಮ್ಮ ಜೀವನದ ಮೂಲಮಂತ್ರವಾಗಬೇಕು. ಸ್ವಚ್ಛತೆಯ ಅರಿವು ಪ್ರತಿಯೊಬ್ಬರಲ್ಲಿ ಮೂಡಿ ಅದನ್ನು ಮತ್ತೊಬ್ಬರಿಗೆ ತಿಳಿಸುವ ಕಾರ್ಯವಾಗಬೇಕಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವ ಪ್ರವೃತ್ತಿ ತೊಲಗಿಸಬೇಕಿದೆ. ಇಂತಹ ಸ್ವಚ್ಛತಾ ಅಭಿಯಾನಗಳು ಈ ತೆರನಾದ ಜಾಗೃತಿ ಮೂಡಿಸುವಲ್ಲಿ ಸಹಾಯ ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ” ಎಂದು ತಿಳಿಸಿದರು.

ಮತ್ತೋರ್ವ ಅತಿಥಿ ರವೀಂದ್ರನಾಥ್ ನಾಯಕ್ ಶುಭಹಾರೈಸಿ “ಈ ರಾಮಕೃಷ್ಣ ಮಿಷನ್ ನಡೆಸುತ್ತಿರುವ ಸ್ವಚ್ಛತಾ ಅಭಿಯಾನ ಜನರ ಸಹಭಾಗಿತ್ವದಿಂದ ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿದೆ. ಇದೊಂದು ಜನಾಂದೋಲನವಾಗಿ ಮಾರ್ಪಟ್ಟಿರುವುದು ಹಾಗೂ ಆ ಮೂಲಕ ನಮ್ಮ ಮಂಗಳೂರಿನ ಜನರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯ ಯುವಜನತೆ ಪಾಲ್ಗೊಳ್ಳುತ್ತಿರುವುದು ಭರವಸೆಯ ಸಂಕೇತವಾಗಿದೆ” ಎಂದು ತಿಳಿಸಿದರು.

ಸ್ವಚ್ಛತೆ: ಒಟ್ಟು ಐದು ತಂಡಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಗಾಂಧಿ ಪಾರ್ಕಿನಿಂದ ಮಣ್ಣಗುಡ್ಡೆ ಗುರ್ಜಿಯತ್ತ ತೆರಳುವ ಒಂದು ಪಾರ್ಶ್ವ ರಸ್ತೆಯಲ್ಲಿ ಸದಾಶಿವ ಕಾಮತ್ ಹಾಗೂ ಆರ್ಟ್ ಆಫ್ ಲಿವಿಂಗ ಸದಸ್ಯರು ಸ್ವಚ್ಛತೆ ನಡೆಸಿದರೆ ಮತ್ತೊಂದು ಬದಿಯಲ್ಲಿ ನಿವೇದಿತಾ ಬಳಗದ ಸದಸ್ಯರು ರಸ್ತೆಯನ್ನು ಗುಡಿಸಿದರು. ನಿಟ್ಟೆ ಫಿಸಿಯೋಥೆರಫಿ ಕಾಲೇಜಿನ ವಿದ್ಯಾರ್ಥಿಗಳು ಸೌಮ್ಯ ಶ್ರೀವತ್ಸ ಮಾರ್ಗದರ್ಶನದಲ್ಲಿ ಉರ್ವಾ ಮಾರ್ಕೆಟ್‍ನತ್ತ ಸಾಗುವ ಮಾರ್ಗಗಳನ್ನು ಸ್ವಚ್ಛ ಮಾಡಿ ಗಾಂಧಿ ಪಾರ್ಕ್ ಸುತ್ತಮುತ್ತಲಿನ ಆವರಣಗೋಡೆಯ ಬದಿಯ ತೋಡುಗಳನ್ನು ಶುಚಿಮಾಡಿ ತ್ಯಾಜ್ಯವನ್ನು ತೆರವು ಮಾಡಿದರು. ಪಾರ್ಕಿನ ಮುಂಭಾಗದ ರಸ್ತೆಯಲ್ಲಿ ಶ್ರೀಮತಿ ವಸಂತಿ ನಾಯಕ್ ಹಾಗೂ ರಾಮಕೃಷ್ಣ ಮಠದ ಭಕ್ತರು ಶ್ರಮದಾನ ಮಾಡಿದರು.

ಕಸದ ರಾಶಿಗೆ ಮುಕ್ತಿ: ಅಲ್ಲಲ್ಲಿ ಕಾಣುವ ತ್ಯಾಜ್ಯ ರಾಶಿಗಳನ್ನು ತೆರವುಗೊಳಿಸಿ ಆ ಸ್ಥಳವನ್ನು ಶುಚಿಯಾಗಿಡುವುದು ಮತ್ತು ಸುಂದರವನ್ನಾಗಿಸುವ ಕಾರ್ಯ ಇಂದು ಮಠದಕಣಿ ರಸ್ತೆಯಲ್ಲಿ ಜರುಗಿತು. ಹಿರಿಯ ಕಾರ್ಯಕರ್ತರಾದ ಶುಭೋಧಯ ಆಳ್ವ ಹಾಗೂ ಮಹ್ಮದ್ ಶಮೀಮ್ ಜೊತೆಗೂಡಿ ಸುಮಾರು ಐವತ್ತು ಜನ ಸೇರಿ ಅಪಾರ ಪ್ರಮಾಣದ ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಿದರು. ಸೀ ಸೈಡ್-ರೋಟರಿ ಕ್ಲಬ್ ಸದಸ್ಯರು ಫೆÇ್ಲರಿಕ್ ಲೊಬೊ ಹಾಗೂ ಸುರೇಶ್ ಎಂ ಎಸ್ ಮಾರ್ಗದರ್ಶನದಲ್ಲಿ ಶ್ರಮದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಮಠದ ಕಣಿ ರಸ್ತೆಯನ್ನು ಡಾ. ರಾಧಾಕೃಷ್ಣ ಕೆ ಹಾಗೂ ಕಾರ್ಯಕರ್ತರು ಸ್ವಚ್ಛಗೊಳಿಸಿದರು. ಜೆಸಿಬಿ ಸಹಾಯದಿಂದ ತ್ಯಾಜ್ಯ ಬೀಳುತ್ತಿದ್ದ ಸ್ಥಳವನ್ನು ಮಣ್ಣು ಹಾಕಿ ಸಮತಟ್ಟು ಮಾಡಿ ಹೂಗಿಡಗಳನ್ನಿಟ್ಟು ಅಂದ ಕಾಣುವಂತೆ ಮಾಡಲಾಯಿತು.

ಸಂಕಲ್ಪ ಕರಪತ್ರ ವಿತರಣೆ: ಒಂದೆಡೆ ಸ್ವಚ್ಛÀತೆಯ ಶ್ರಮದಾನವಾಗುತ್ತಿದ್ದರೆ ಅದೇ ಪರಿಸರದಲ್ಲಿ ನಿಟ್ಟೆ ಫಿಸಿಯೊಥೆರಫಿ ಕಾಲೇಜಿನ ವಿದ್ಯಾರ್ಥಿನಿಯರು ಪ್ರಿಯಾ ನೇತೃತ್ವದಲ್ಲಿ ಮಣ್ಣಗುಡ್ಡೆ, ಮಠದ ಕಣಿ ರಸ್ತೆಯ ಹಲವಾರು ಮನೆ ಹಾಗೂ ಅಂಗಡಿಗಳಿಗೆ ತೆರಳಿ ಸ್ವಚ್ಛತೆಯ ಸಂದೇಶವುಳ್ಳ ಕರಪತ್ರ ನೀಡಿ ಸ್ವಚ್ಛತೆಯ ಮಹತ್ವವನ್ನು ತಿಳಿ ಹೇಳಿದರು. ಅಲ್ಲದೇ ಗಾಂಧಿಪಾರ್ಕನಲ್ಲಿದ್ದ ಸಾರ್ವಜನಿಕರಿಗೂ ಕರಪತ್ರ ನೀಡಿ ಮಾಹಿತಿ ನೀಡಿದರು. ಹಿರಿಯರಾದ ಸುರೇಶ್ ಶೆಟ್ಟಿ ಮಾರ್ಗದರ್ಶಿಸಿದರು.

ಫಲಕಗಳ ನವೀಕರಣ: ಇಂದು ಶ್ರಮದಾನ ಹಮ್ಮಿಕೊಂಡ ಪ್ರದೇಶದಲ್ಲಿದ್ದ ಗುಂಡುರಾವ್ ರಸ್ತೆ, ಗಾಂಧಿನಗರ ಅಡ್ದರಸ್ತೆ 3 ಮತ್ತು 4, ಸಂಘನಿಕೇತನ ರಸ್ತೆ ಹಾಗೂ ಊರ್ವಾ ಮಾರ್ಕೆಟ್ ರಸ್ತೆ ಎಂಬ ಮಾರ್ಗಸೂಚಕ ಫಲಕಗಳು ಬಣ್ಣ ಕಳೆದುಕೊಂಡು ದಾರಿಹೋಕರಿಗೆ ವಿಶೇಷವಾಗಿ ಹೊಸಬರಿಗೆ ನಿಷ್ಫ್ರಯೋಜಕವೆಂಬಂತೆ ತೋರುತ್ತಿದ್ದವು. ಎರಡು ದಿನಗಳಿಂದ ಅವುಗಳನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿ ಹಳದಿ ಬಣ್ಣ ಬಳಿಯಲಾಯಿತು. ಇಂದು ಅದರ ಮೇಲೆ ಸುಂದರ ಅಕ್ಷರಗಳಿಂದ ಮಾರ್ಗಗಳ ಹೆಸರುಗಳನ್ನು ಬರೆಯಿಸಲಾಗಿದೆ.

ರಾಜೇಂದ್ರ ಕಲ್ಬಾವಿ, ಕುದ್ರೋಳಿ ಗಣೇಶ್, ಪೆÇ್ರ. ತಾರಾ ರಾವ್, ಜಯಕೃಷ್ಣ ಬೇಕಲ್ ಸೇರಿದಂತೆ ಅನೇಕರು ಶ್ರಮದಾನದಲ್ಲಿ ಕೈಜೋಡಿಸಿದರು.


Spread the love