Home Mangalorean News Kannada News ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 31 ಹಾಗೂ 32 ನೇ ಸ್ವಚ್ಛತಾ ಶ್ರಮದಾನಗಳ ವರದಿ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 31 ಹಾಗೂ 32 ನೇ ಸ್ವಚ್ಛತಾ ಶ್ರಮದಾನಗಳ ವರದಿ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 31 ಹಾಗೂ 32 ನೇ ಸ್ವಚ್ಛತಾ ಶ್ರಮದಾನಗಳ ವರದಿ

ಮಂಗಳೂರು: ಸ್ವಚ್ಛ ಮಂಗಳೂರು ಅಭಿಯಾನದ 31ನೇ ಶ್ರಮದಾನವನ್ನು ಊರ್ವಾಸ್ಟೋರ್‍ನಲ್ಲಿ ಹಮ್ಮಿಕೊಳ್ಳಲಾಯಿತು. ದಿನಾಂಕ 20-5-2018 ಭಾನುವಾರದಂದು ಬೆಳಿಗ್ಗೆ 7:30 ಕ್ಕೆ ಶ್ರೀಶಾರದಾ ವಿದ್ಯಾಪೀಠ ಆಂಗ್ಲ ಮಾಧ್ಯಮ ಶಾಲೆಯ ಮುಂಭಾಗದಲ್ಲಿ ಶ್ರೀಕಾಂತ ಕೆ. ಪ್ರಾದೇಶಿಕ ಮುಖ್ಯಸ್ಥರು ಫೆಡರಲ್ ಬ್ಯಾಂಕ್ ಮಂಗಳೂರು ಹಾಗೂ ಸಿ ದೇವದಾಸ್ ಕಾಮತ್ ಅಭಿಯಾನವನ್ನು ಶುಭಾರಂಭಗೊಳಿಸಿದರು. ಕ್ಯಾ. ಗಣೇಶ್ ಕಾರ್ಣಿಕ್, ಡಾ.ಧನೇಶ್ ಕುಮಾರ್, ಕಮಲಾಕ್ಷ ಪೈ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

32ನೇ ಶ್ರಮದಾನ : ಸ್ವಚ್ಛ ಮಂಗಳೂರು ಅಭಿಯಾನದ 32ನೇ ಸ್ವಚ್ಛತಾ ಶ್ರಮದಾನವನ್ನು ದಿನಾಂಕ 20-5-2018 ರಂದು ವಾಮಂಜೂರು ಚೆಕ್‍ಪೆÇೀಸ್ಟ್ ಸುತ್ತಮುತ್ತ ಆಯೋಜನೆ ಮಾಡಲಾಗಿತ್ತು. ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅಭಿಯಾನಕ್ಕೆ ಚಾಲನೆ ನೀಡಿದರು. ಸ್ಥಳಿಯ ಮನಪಾ ಸದಸ್ಯೆ ಹೇಮಲತಾ ರಘು ಸಾಲ್ಯಾನ್, ಶ್ರೀ ಬಾಲಕೃಷ್ಣ, ರಿಯಾಜ್ ವಾಮಂಜೂರು, ಚಾರ್ಲ್ಸ್ ಸಾಲಿನ್ಸ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಸ್ವಾಮಿ ಜಿತಕಾಮಾನಂದಜಿ ಈ ಸಂದರ್ಭದಲ್ಲಿ ಮಾತನಾಡಿ: “ನಮ್ಮ ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದು ನಿಲ್ಲುವಂತಾಗಬೇಕು, ಜೊತೆಗೆ ಕಸ ಕಂಡರೆ ಅದನ್ನು ಸ್ವಚ್ಛಗೊಳಿಸಬೇಕೆಂಬ ಮನಸ್ಥಿತಿಯನ್ನು ರೂಢಿಸಿಕೊಂಡಾಗ ಸ್ವಚ್ಛ ಭಾರತ ಸಾಕಾರಗೊಳ್ಳುತ್ತದೆ. ಆ ನಿಟ್ಟಿನಲ್ಲಿ ನಿಧಾನವಾಗಿ ಜನರು ಜಾಗೃತಗೊಳ್ಳುತ್ತಿರುವುದು ಉತ್ತಮ ಸಂಕೇತವಾಗಿದೆ. ಕಳೆದ ಮೂರು ವರ್ಷಗಳಿಂದಲೂ ಅಧಿಕ ಸಮಯದಿಂದ ಜರಗುತ್ತಿರುವ ಈ ಅಭಿಯಾನದ ಉದ್ದೇಶವೂ ಜನರನ್ನು ಜಾಗೃತಿಗೊಳಿಸುವುದೇ ಆಗಿದೆ.” ಎಂದು ತಿಳಿಸಿದರು.

ಊರ್ವಾಸ್ಟೋರ್ ಸ್ವಚ್ಛತೆ: ಫೆಡರಲ್ ಬ್ಯಾಂಕ್‍ನ ಸಿಬ್ಬಂದಿ ಜಾಯ್ಸನ್ ಡಿಸೋಜಾ ಹಾಗೂ ಅಕ್ಷಯಕುಮಾರ ನೇತೃತ್ವದಲ್ಲಿ ಕೊಟ್ಟಾರ ಸಾಗುವ ಮುಖ್ಯರಸ್ತೆಯ ಎರಡೂ ಬದಿಗಳನ್ನು ಹಾಗೂ ಮಾರ್ಗವಿಭಾಜಕಗಳನ್ನು ಶುಚಿಗೊಳಿಸಿದರು. ನಿಟ್ಟೆ ವಿದ್ಯಾರ್ಥಿಗಳು ಉರ್ವಾ ಬಸ್ ನಿಲ್ದಾಣದಿಂದ ಆರಂಭಿಸಿ ಚಿಲಿಂಬಿ ತನಕ ರಸ್ತೆಗಳನ್ನು ಸ್ವಚ್ಛಗೊಳಿಸಿದರು. ಕಾಲುದಾರಿ, ಡಿವೈಡರ್ ಹಾಗೂ ಖಾಲಿಜಾUದಲ್ಲಿದ್ದ ಕಸವನ್ನು ತೆಗೆದು ಸ್ವಚ್ಛಮಾಡಿದರು.

ಉರ್ವಾ ಬಸ್ ಪ್ರಯಾಣಿಕರ ತಂಗುದಾಣವನ್ನು ಮಸಾಹಿರೊ ಮತ್ತಿತರರು ಗುಡಿಸಿ ಸ್ವಚ್ಛಗೊಳಿಸಿದರು. ಅಂಗಡಿಗುಡ್ಡೆಯತ್ತ ಸಾಗುವ ಮಾರ್ಗದ ಬಳಿ ಅನೇಕ ದಿನಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯರಾಶಿಯನ್ನು ದಿಲ್‍ರಾಜ್ ಆಳ್ವ ಹಾಗೂ ಕಾರ್ಯಕರ್ತರು ಜೆಸಿಬಿ ಸಹಾಯದಿಂದ ತೆರವುಗೊಳಿಸಿದರು. ಪುಟ್ ಪಾಥ್ ಮೇಲಿದ್ದ ಮಣ್ಣನ್ನು ತೆಗೆದು ದಾರಿಹೋಕರಿಗೆ ಅನುಕೂಲ ಮಾಡಿಕೊಡಲಾಯಿತು. ಜೊತೆಗೆ ಕಾಲುದಾರಿಗೆ ಸ್ಲಾಬ್‍ನ್ನು ಹಾಕಿ ಸರಿಪಡಿಸಲಾಯಿತು. ಪ್ರತಿವಾರದಂತೆ ಶ್ರಮದಾನದ ಜೊತೆಗೆ ಉರ್ವಾಸ್ಟೋರ್ ಪರಿಸರದ ಮನೆಗಳಿಗೆ ತೆರಳಿ ಸ್ವಚ್ಛತೆಯ ಕುರಿತ ಮಾಹಿತಿ ನೀಡಿ ಜಾಗೃತಿಯನ್ನು ಉಂಟುಮಾಡಲು ಪ್ರಯತ್ನಿಸಲಾಯಿತು.

ಮಂಗಳಮುಖಿಯರಿಂದ ಶ್ರಮದಾನ: ಊರ್ವಾಸ್ಟೋರ್‍ನಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಸುಮಾರು ಇಪ್ಪತ್ತು ಮಂಗಳಮುಖಿಯರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದುದು ವಿಶೇಷವಾಗಿತ್ತು. ಅಂಗಡಿಗುಡ್ಡೆ ಹಾಗೂ ಚಿಲಿಂಬಿಯತ್ತ ಸಾಗುವ ಮುಖ್ಯರಸ್ತೆಗಳನ್ನು ಮಂಗಳಮುಖಿಯರಾದ ರಮ್ಯಾಗೌಡ, ವರ್ಷಾ ಶೆಟ್ಟಿ ಹಾಸನ, ಪಲ್ಲವಿಗೌಡ ಹಾಗೂ ಇತರರು ಶುಚಿಗೊಳಿಸಿ ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಶ್ರಮದಾನ ಮಾಡಿದರು. ಇವರು ಕಾರ್ಯಕರ್ತರಿಂದ ಹಾಗೂ ಸಾರ್ವಜನಿಕರಿಂದ ಭಾರಿ ಮೆಚ್ಚುಗೆಗೆ ಪಾತ್ರವಾದರು.

ವಾಮಂಜೂರಿನಲ್ಲಿ ನೂತನ ಬಸ್ ತಂಗುದಾಣ: 32ನೇ ಸ್ವಚ್ಛತಾ ಅಭಿಯಾನದ ಪ್ರಯುಕ್ತ ವಾಮಂಜೂರ್ ಚೆಕ್ ಪೆÇೀಸ್ಟ್‍ನಲ್ಲಿ ನೂತನ ಬಸ್ ತಂಗುದಾಣವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಯಿತು. ರಘು ಸಾಲ್ಯಾನ್ ಹಾಗೂ ಸುಧೀರ್ ವಾಮಂಜೂರು ಇವರ ವಿಶೇಷ ಆಸಕ್ತಿ ಹಾಗೂ ಕಾಳಜಿಯಿಂದ ನಿರ್ಮಿತವಾದ ಈ ತಂಗುದಾಣವು ಕುಳಿತುಕೊಳ್ಳಲು ಸ್ವತಂತ್ರವಾದ ವಿಶೇಷ ಆಸನಗಳು, ಉತ್ತಮ ಮೇಲ್ಚಾವಣಿ, ಟೈಲ್ಸ್‍ನಿಂದ ಕೂಡಿದ ನೆಲಹಾಸು ಹಾಗೂ ಸ್ವಚ್ಛತೆಯ ಸಂದೇಶವುಳ್ಳ ಫಲಕಗಳಿಂದ ಕೂಡಿದೆ. ಇಂದು ಅದಕ್ಕೆ ಅಂತಿಮ ಸ್ಪರ್ಶ ನೀಡಿ, ಪ್ರಯಾಣಿಕರಿಂದಲೆ ಲೋಕಾರ್ಪಣೆಗೊಂಡಿತು. ಜೊತೆಗೆ ಅಲ್ಲಿನ ಪರಿಸರದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಶ್ರಮದಾನ ಮಾಡಲಾಯಿತು. ಜಯಶಂಕರ ಮಿತ್ರ ಮಂಡಳಿ, ವಾಮಂಜೂರು ಫ್ರೆಂಡ್ಸ್ ಸರ್ಕಲ್ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶ್ರೀಉಮಾನಾಥ್ ಕೋಟೆಕಾರ್ ಕಾರ್ಯಕ್ರಮವನ್ನು ಸಂಘಟನೆ ಮಾಡಿದರು.

ಸಂಜೋ ಜೋಸೆಫ್, ಪ್ರಕಾಶ ಗರೋಡಿ, ಸೀಮಾ ಹಾಜಿ, ಕೆ ನಾಗೇಶ್, ಸತೀಶ್ ಕೆಂಕನಾಜೆ, ಸುಧೀಕ್ಷಾ ಕಿರಣ್ ಕುಮಾರ್ ಸೇರಿದಂತೆ ಅನೇಕರು ಈ ಅಭಿಯಾನಗಳಲ್ಲಿ ಪಾಲ್ಗೊಂಡರು. ಈ ಅಭಿಯಾನಕ್ಕೆ ಎಂ ಆರ್‍ಪಿಎಲ್ ಸಂಸ್ಥೆ ಪ್ರಾಯೋಜಕತ್ವ ನೀಡುತ್ತಿದೆ.

 


Spread the love

Exit mobile version