ರಾಮಕೃಷ್ಣ ಮಿಷನ್ 4ನೇ ಹಂತದ ಸ್ವಚ್ಛತಾ ಅಭಿಯಾನದ ಸಮಾರೋಪ ಸಮಾರಂಭ ಕಾರ್ಯಕ್ರಮ

Spread the love

ರಾಮಕೃಷ್ಣ ಮಿಷನ್ 4ನೇ ಹಂತದ ಸ್ವಚ್ಛತಾ ಅಭಿಯಾನದ ಸಮಾರೋಪ ಸಮಾರಂಭ ಕಾರ್ಯಕ್ರಮ

ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ ಕಳೆದ ನಾಲ್ಕು ವರುಷಗಳಿಂದ ಸ್ವಚ್ಛತೆಗೆ ಸಂಬಂಧಿಸಿದಂತೆ ಸಾರ್ವಜನಿಕರನ್ನು ಜಾಗೃತರನ್ನಾಗಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಭಿಯಾನ ನಡೆಸುತ್ತಿರುವುದು ನಿಮಗೆ ತಿಳಿದ ವಿಚಾರವೇ ಆಗಿದೆ. 2017 ನವೆಂಬರ್ 3 ರಂದು ಆರಂಭವಾದ 4ನೇ ಹಂತದ ಸ್ವಚ್ಛತಾ ಅಭಿಯಾನ 2018 ಜುಲೈ 28 ರಂದು ಸಂಪನ್ನಗೊಳ್ಳುತ್ತಿದೆ. 4ನೇ ಹಂತದ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಹಮ್ಮಿಕೊಳ್ಳುತ್ತಿರುವ ಪ್ರತಿ ಭಾನುವಾರ ಸ್ವಚ್ಛತೆಗಾಗಿ ಮಂಗಳೂರು ನಗರದಲ್ಲಿ ಶ್ರಮದಾನ, ಪ್ರತಿನಿತ್ಯ ಮನೆ ಭೇಟಿ, ಸ್ವಚ್ಛ ಗ್ರಾಮ ಹಾಗೂ ಶಾಲಾ ವಿದ್ಯಾರ್ಥಿಗಾಗಿ ಸ್ವಚ್ಛ ಮನಸ್ಸು ಎಂಬ ನಾಲ್ಕು ವಿವಿಧ ಆಯಾಮಗಳ ಅಭಿಯಾನಗಳು ಯಶಸ್ವಿಯಾಗಿ ಜರುಗಿ, ಜನಮಾನಸದಲ್ಲಿ ಸ್ವಚ್ಛತೆಯ ಅರಿವನ್ನು ಹಾಗೂ ಸಾಮುದಾಯಿಕ ಜವಾಬ್ದಾರಿಯ ಭಾವವನ್ನು ಜಾಗೃತಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಈ ಅಭಿಯಾನಕ್ಕೆ ಎಮ್. ಆರ್. ಪಿ. ಎಲ್ ಪ್ರಾಯೋಜಕತ್ವ ನೀಡಿ ಪೆÇ್ರೀತ್ಸಾಹಿಸುತ್ತಿದೆ.

ಪ್ರತಿವಾರ ಶ್ರಮದಾನ: ಕಳೆದ ವರ್ಷದ ನವೆಂಬರ್ ನಿಂದ ಹಿಡಿದು ಇಂದಿನತನಕ ನಿರಂತರವಾಗಿ ಸುಮಾರು ನಲವತ್ತು ವಾರಗಳಲ್ಲಿ ನಲವತ್ತು ಸ್ವಚ್ಛತಾ ಶ್ರಮದಾನಗಳು ನಡೆದಿವೆ. ಪ್ರತಿ ಭಾನುವಾರ ಮುಂಜಾನೆ ಏಳು ಗಂಟೆಯಿಂದ ಹತ್ತು ಗಂಟೆಯತನಕ ನಡೆಯುತ್ತಿದ್ದ ಸ್ವಚ್ಛತಾ ಕೈಂಕರ್ಯದಲ್ಲಿ ನೂರರಿಂದ ಇನ್ನೂರು ಕಾರ್ಯಕರ್ತರು ಪಾಲ್ಗೊಂಡು ನಗರದ ಬೇರೆಬೇರೆ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕೈಗೊಂಡಿದ್ದಾರೆ. ಯುವಕ-ಯುವತಿಯರು, ಪ್ರಾಧ್ಯಾಪಕರು, ವೈದ್ಯರು, ಉದ್ಯಮಿಗಳು, ಪುಟಾಣಿಮಕ್ಕಳು, ಹಿರಿಯರು, ವಿಶಿಷ್ಠ ಚೇತನರು, ಸಮಾಜಸೇವಕರು, ವಿದೇಶಿಯರೂ ಸೇರಿದಂತೆ ಯಾವುದೇ ಜಾತಿ ಮತ ಪಂಥಗಳ ಭೇಧಭಾವವಿಲ್ಲದೇ ರಾಜಕೀಯೇತರ ಅಭಿಯಾನವಾಗಿರುವುದು ವಿಶೇಷವಾಗಿದೆ. ಕಸಗುಡಿಸಿ ಹಾದಿಬೀದಿಗಳನ್ನು ಶುಚಿಮಾಡುವುದರ ಜೊತೆ ಪಾರ್ಕ್‍ಗಳ ನಿರ್ಮಾಣ, ನೂತನ ಬಸ್ ತಂಗುದಾಣಗಳ ಅಳವಡಿಕೆ, ನಾಮಫಲಕಗಳ ನವೀಕರಣ, ಅನಧೀಕೃತ ಪೆÇೀಸ್ಟರ್ ತೆರವುಗೊಳಿಸಿ ಗೋಡೆಗಳಿಗೆ ಅಂದವಾದ ಚಿತ್ರ ಬರೆಸಿ ಆಕರ್ಷಕವಾಗಿಸುವುದು ಸೇರಿದಂತೆ ಅನೇಕ ಚಟುವಟಿಕೆಗಳನ್ನು ಭಾನುವಾರದ ಶ್ರಮದಾನದಲ್ಲಿ ಮಾಡಲಾಗಿದೆ. ಪ್ರಮುಖವಾಗಿ ಸುಮಾರು ಮೂವತ್ತು ಅತೀ ತ್ಯಾಜ್ಯ ಬೀಳುತ್ತಿದ್ದ ಸ್ಥಳಗಳನ್ನು ಸ್ವಚ್ಛಗೊಳಿಸಿ, ಜನಜಾಗೃತಿ ಮೂಡಿಸಲಾಗಿದೆ. ಅಲ್ಲದೇ ಅ ಸ್ಥಳಗಳನ್ನು ಹೂಗಿಡಗಳನ್ನಿಟ್ಟು ಸುಂದರಗೊಳಿಸಲಾಗಿದೆ. ವಿಶೇಷವೆಂದರೆ ಆ ಸ್ಥಳಗಳಲ್ಲಿ ಇಂದಿಗೂ ಸ್ವಚ್ಛತೆಯನ್ನು ಕಾಣಬಹುದಾಗಿದೆ. ಉಲ್ಲೇಖಿಸಬಹುದಾದ ಅಂಶವೆಂದರೆ ಅಲ್ಲಲ್ಲಿ ನೇತಾಡಿಸುವ ಅನಧಿಕೃತÀ ಪೆÇೀಸ್ಟರ್ ಬ್ಯಾನರ್ ಹಾವಳಿಯನ್ನು ನಿಯಂತ್ರಸುವಲ್ಲಿ ಸ್ವಯಂಸೇವಕರು ಯಶಸ್ವಿಯಾಗಿರುವುದು.

ನಿತ್ಯಜಾಗೃತಿ: ಶ್ರಮದಾನದ ಜೊತೆಜೊತೆಗೆ ಜಾಗೃತಿ ಕಾರ್ಯವೂ ಮುಖ್ಯ ಎಂಬ ಕಲ್ಪನೆಯಿಂದ ಪ್ರತಿದಿನ ನಗರದ ಸುಮಾರು ನೂರು ಮನೆಗಳಿಗೆ ಭೇಟಿನೀಡಿ ಸಾರ್ವಜನಿಕರಿಗೆ ಶುಚಿತ್ವದ ಮಹತ್ವವನ್ನು ತಿಳಿಸಿಕೊಡಲು ಪ್ರಯತ್ನಿಸಲಾಗಿದೆ. ಸುಮಾರು 170 ಕಾರ್ಯಕ್ರಮಗಳನ್ನು ನಡೆಸಲಾಗಿದ್ದು 20 ಸಾವಿರ ಮನೆಗಳನ್ನು ಖುದ್ದಾಗಿ ಸಂಪರ್ಕಿಸಲಾಗಿದೆ. ಪ್ರತಿದಿನ ಬೇರೆ ಬೇರೆ ತಂಡಗಳಂತೆ ಸುಮಾರು ನಲವತ್ತು ತಂಡಗಳÀ ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಸ್ವಚ್ಛತಾ ಕರಪತ್ರ ನೀಡಿ ಜಾಗೃತಿ, ಹಸಿಕಸ ಒಣಕಸದ ವಿಂಗಡನೆ ಮತ್ತು ನಿರ್ವಹಣೆ, ಮಣ್ಣಿನ ಮಡಕೆ ಗೊಬ್ಬರ ತಯಾರಿಸುವ ಪರಿ, ಬಯೋಬಿನ್ ವಿತರಣೆ, ಒಣಕಸ ಹಾಕಲು ಚೀಲಗಳ ವಿತರಣೆ ಸೇರಿದಂತೆ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.

ಸ್ವಚ್ಛ ಮನಸ್ಸು: ಪ್ರಮುಖವಾಗಿ ಶಾಲಾ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಮಕ್ಕಳಲ್ಲಿ ಸ್ವಚ್ಛತೆಯ ಕುರಿತು ಅರಿವನ್ನುಂಟುಮಾಡಲು ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ 108 ಶಾಲೆಗಳಲ್ಲಿ ಸ್ವಚ್ಛ ಮನಸ್ಸು ಅಭಿಯಾನವನ್ನು ಆಯೋಜನೆ ಮಾಡಲಾಯಿತು. ಪ್ರಥಮದಲ್ಲಿ 10757 ವಿದ್ಯಾರ್ಥಿಗಳನ್ನು ಸ್ವಚ್ಛತಾ ಸೇನಾನಿಗಳೆಂದು ಆಯ್ಕೆ ಮಾಡಲಾಯಿತು. ಸ್ವಚ್ಛತಾ ಚಿಂತನ, ಸ್ವಚ್ಛತಾ ಸ್ಪರ್ಧಾ, ಸ್ವಚ್ಛತಾ ದಿವಸ್, ಸ್ವಚ್ಛತಾ ಮಂಥನ ಹಾಗೂ ಸ್ವಚ್ಛತಾ ದರ್ಶನ ಎಂಬ ಪರಿಕಲ್ಪನೆಯಲ್ಲಿ ಒಟ್ಟು  ಸುಮಾರು 500 ಕಾರ್ಯಕ್ರಮಗಳನ್ನು ನಡೆಸಲಾಗಿದೆ. 60 ಜನ ಸಂಪನ್ಮೂಲ ವ್ಯಕ್ತಿಗಳು ಪ್ರತಿ ತಿಂಗಳು ನಿಗದಿತ ಶಾಲೆಗೆ ತೆರಳಿ ಮಕ್ಕಳಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಈ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಪ್ರತೀಶಾಲೆಯಿಂದ ಐದು ವಿದ್ಯಾರ್ಥಿಗಳಂತೆ 500 ವಿದ್ಯಾರ್ಥಿಗಳನ್ನು  ಸ್ವಚ್ಛ ಮಂಗಳೂರು ರಾಯಭಾರಿಗಳು ಎಂದು ಆಯ್ಕೆ ಮಾಡಿ ವಿಶೇಷ ತರಬೇತಿ ನೀಡಲಾಗಿದೆ. ಮಕ್ಕಳಿಗೆ ವಿಶೇಷ ಆಕರ್ಷಣೆಯಾದ ಜಾದೂವಿನ ಮೂಲಕವೂ ಶುಚಿತ್ವದ ಮಹತ್ವವನ್ನು ತಿಳಿಸುವ ಸಲುವಾಗಿ ಪ್ರಖ್ಯಾತ ಜಾದೂಗಾರ ಶ್ರೀ ಕುದ್ರೋಳಿ ಗಣೇಶ್ ಇವರಿಂದ ಆಯ್ಕೆ ಮಾಡಿದ ಶಾಲೆಗಳಲ್ಲಿ ಉಚಿತವಾಗಿ ಸುಮಾರು 100 ಪ್ರದರ್ಶಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೇ ಸಮಯದಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಛತಾ ಶಪಥವನ್ನೂ ಮಾಡಿಸಲಾಗುತ್ತಿದೆ. ಮೇಲ್ಕಂಡ ಎಲ್ಲ ಕಾರ್ಯಕ್ರಮಗಳು ಚಟುವಟಿಕೆ ಆಧಾರಿತವಾಗಿದ್ದರ ಪರಿಣಾಮ ವಿದ್ಯಾರ್ಥಿಗಳ ಮನಸ್ಸನ್ನು ಮುಟ್ಟಲು ಸಹಾಯಕವಾಗಿವೆ. ಶಾಲಾ ಮುಖ್ಯಸ್ಥರಿಂದ ಹಾಗೂ ಶಾಲಾ ಸಂಯೋಜಕರಿಂದ ಉತ್ತಮ ಅಭಿಪ್ರಾಯ ಕೇಳಿ ಬಂದಿರುವುದು ಇದರ ಯಶಸ್ಸಿಗೆ ಸಾಕ್ಷಿ.

ಸ್ವಚ್ಛ ಗ್ರಾಮ: ಮಂಗಳೂರಿಗೆ ಸೀಮಿತವಾಗಿದ್ದ ಸ್ವಚ್ಛತಾ ಅಭಿಯಾನವನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಬೇಕೆಂಬ ಆಶಯದೊಂದಿಗೆ ನಾಲ್ಕನೇ ಹಂತದ ಅಭಿಯಾನದಲ್ಲಿ ಬಂಟ್ವಾಳ ತಾಲೂಕ ಹಾಗೂ ಮಂಗಳೂರು ತಾಲೂಕಿನ 100 ಗ್ರಾಮಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೆರವಿನೊಂದಿಗೆ ತಿಂಗಳಲ್ಲಿ ಒಂದು ಶ್ರಮದಾನದಂತೆ 700 ಶ್ರಮದಾನಗಳನ್ನು ನಡೆಸಲಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸುಮಾರು 6000 ನೋಂದಾಯಿತ ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಶ್ರಮದನ ನಡೆಸುವ ನೂರು ಗ್ರಾಮಗಳ ಪೈಕಿ ಸುಮಾರು 30 ಗ್ರಾಮಗಳಿಗೆ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ ಅಲ್ಲದೇ ಅವಶ್ಯವಿದ್ದೆÀ್ದಡೆ ಶೌಚಾಲಯಗಳ ದುರಸ್ತಿ, ನಾಮಫಲಕಗಳ ಅಳವಡಿಕೆ, ನೂತನ ವೈಯಕ್ತಿಕ ಶೌಚಾಲಯಗಳ ನಿರ್ಮಾಣದಂತಹ ಕಾರ್ಯಗಳು ಚಾಲ್ತಿಯಲ್ಲಿವೆ.

ಹೀಗೆ ನಾಲ್ಕನೇ ಹಂತದ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಹಮ್ಮಿಕೊಂಡ ನಾಲ್ಕು ವಿವಿಧ ಆಯಾಮಗಳು ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿಯನ್ನುಂಟು ಮಾಡುವಲ್ಲಿ ಸಹಾಯಕವಾಗಿವೆ. ನಾಲ್ಕನೇ ಹಂತದ ಯೋಜನೆಗಳು ಸಮಾಪ್ತಿಯಾಗುವ ಈ ಹೊತ್ತಿನಲ್ಲಿ ಸಮಾರೋಪ ಸಮಾರಂಭವನ್ನು ಇದೇ ಜುಲೈ 28, 2018 ಶನಿವಾರ ಸಾಯಂ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಸಮಾರೋಪ ಸಮಾರಂಭ:

4ನೇ ಹಂತದ ಸಮಾರೋಪ ಕಾರ್ಯಕ್ರವು ನಮ್ಮ ಆಶ್ರಮದ ಸಭಾಭವ£ದಲ್ಲಿ 28 ಜುಲೈ ಸಂಜೆ 4.00 ಕ್ಕೆ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ನಿನ ವಿಶ್ವಸ್ಥರಾದ ಮತ್ತು ಹಿರಿಯ ಯತಿಗಳಾದ ಸ್ವಾಮಿ ದಿವ್ಯಾನಂದಜಿ ಮಹಾರಾಜ್ ಅವರು ವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ನಿಟ್ಟೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಎನ್. ವಿನಯ್ ಹೆಗ್ಡೆ, ಎಮ್. ಆರ್. ಪಿ. ಎಲ್ ನ ನಿರ್ದೇಶಕ(ಹಣಕಾಸು)ರಾದ ಶ್ರೀ ಎ. ಕೆ. ಸಾಹೂ. ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕರಾದ ಶ್ರೀ ವೇದವ್ಯಾಸ ಕಾಮತ್. ಮತ್ತು ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತಕ್ಕೆ ತಮ್ಮ ಅದ್ವಿತೀಯ ಕೊಡುಗೆ ನೀಡಿದ ಇಬ್ಬರು ಸಾಧಕ ಮಹನೀಯರಾದ ಶ್ರೀ ಚಂದ್ರಕಾಂತ ಕುಲಕರ್ಣಿ ಮತ್ತು ಕುಮಾರಿ ಭವ್ಯರಾಣಿ ಇವರನ್ನು ಗೌರವಿಸಲಾಗುವುದು. ಅಲ್ಲದೆ ಸ್ವಚ್ಚತಾ ದರ್ಶನದಲ್ಲಿ ಉತ್ತಮ ಅಂಕ ಗಳೀಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಗುವುದು.

ಸಭಾಕಾರ್ಯಕ್ರಮದ ನಂತರ ಸಂಜೆ 7ಕ್ಕೆ ವಿಶ್ವವಿಜೇತ ಜಾದೂ ಕಲಾವಿದರಾದ ಶ್ರೀ ಕುದ್ರೋಳಿ ಗಣೇಶ್ ಮತ್ತು ತಂಡದವರಿಂದ ಜಾದೂ ಪ್ರದರ್ಶನ ನಡೆಯಲಿದೆ.


Spread the love