ರಾಮಚಂದ್ರ ಹೆಗ್ಡೆಯವರ ಮಡಿಲಿಗೆ ಶಾರ್ಜಾ ಕರ್ನಾಟಕ ಸಂಘದ “ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ – 2019” 

Spread the love

ರಾಮಚಂದ್ರ ಹೆಗ್ಡೆಯವರ ಮಡಿಲಿಗೆ ಶಾರ್ಜಾ ಕರ್ನಾಟಕ ಸಂಘದ “ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ – 2019” 

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ಶಾರ್ಜದಲ್ಲಿ   ಕರ್ನಾಟಕ ರಾಜ್ಯೋತ್ಸವ ಸಮಾರಂಭ, ಮಕ್ಕಳ ದಿನಾಚರಣೆ ಹಾಗೂ ಕರ್ನಾಟಕ ಸಂಘ ಶಾರ್ಜಾದ 17ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ೨೦೧೯ ನವೆಂಬರ್ 15ನೇ ತಾರೀಕು ಶುಕ್ರವಾರ ಸಂಜೆ 4 ಗಂಟೆಯಿ ದ ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಬೃಹತ್ ಸಭಾಂಗಣದಲ್ಲಿ ಅಯೋಜಿಸಲಾಗಿದೆ.

ಅಹ್ವಾನಿತ ಅತಿಥಿಗಳು, ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಕರ್ನಾಟಕ ಸಂಘ ಶಾಜಾ ಪ್ರತಿವರ್ಷ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಗುರುತಿಸಿ ನೀಡಲಾಗುತಿರುವ ಪ್ರತಿಷ್ಠಿತ “ಮಯೂರ ಪ್ರಶಸ್ತಿ” ಈ ಬಾರಿ ದುಬಾಯಿ ಯಲ್ಲಿರುವ ಸ್ಪೆçÃಟೆಕ್ ಕೋಟಿಂಗ್ ಎಲ್.ಎಲ್.ಸಿ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀ ರಾಮಚಂದ್ರ ಹೆಗ್ಡೆಯವರಿಗೆ ರಾಜ್ಯೋತ್ಸವ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನಿಸಲಾಗುವುದು.

ಶ್ರೀ ರಾಮಚಂದ್ರ ಹೆಗ್ಡೆಯವರ ಸಾಧನೆಯ ಹಾದಿ….

ಕರ್ನಾಟಕದ ಕಡಲ ತೀರದ ನಾಡು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪಚ್ಚೆ ಪೈರು, ಹೊಲ ಗದ್ದೆಗಳು, ಗಗನವನ್ನು ಚುಂಬಿಸುತ್ತಿರುವ ತೆಂಗು ಕಂಗು ವೃಕ್ಷರಾಶಿಯ ನಿಸರ್ಗದ ಮಡಿಲಿನ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಶ್ರೀ ಅಚ್ಚು÷್ಯತ ಹೆಗ್ಡೆ ಮತ್ತು ಶ್ರೀಮತಿ ಗೀತಾ ಹೆಗ್ಡೆಯವರ ಮಗನಾಗಿ ೧೯೫೮ ರಲ್ಲಿ ಜನಿಸಿರುವ ಶ್ರೀ ರಾಮಚಂದ್ರ ಹೆಗ್ಡೆ ತಮ್ಮ ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನು ಪಡೆದಿದ್ದಾರೆ.

ತಮ್ಮ ವೃತ್ತಿ ಜೀವನವನ್ನು ಮುಂಬೈಯಲ್ಲಿ ಪ್ರಾರಂಭಿಸಿ ೧೯೮೩ ರಲ್ಲಿ ದುಬಾಯಿಗೆ ಪಾದಾರ್ಪಣೆ ಮಾಡಿ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಉದ್ಯೋಗದಲ್ಲಿ ಅಪಾರ ಅನುಭವವನ್ನು ಪಡೆದು ತಮ್ಮದೇ ಆದ ಸ್ವಂತ ಉದ್ಯಮ ಪ್ರಾರಂಭಿಸುವ ತನ್ನ ಬಹು ದಿನದ ಕನಸು ನನಸಾಗಿಸಿ ಕೊಂಡರು.

ದುಬಾಯಿಯಲ್ಲಿ ಪಾರಂಭಿಸಿದ ಸ್ಪೆçà ಟೆಕ್ ಕಾಂಟ್ರೆಕ್ಟಿAಗ್ ಎಲ್.ಎಲ್.ಸಿ. ಮತ್ತು ಸ್ಪೆçà ಟೆಕ್ ಕೋಟಿಂಗ್ ಎಲ್.ಎಲ್.ಸಿ. ಉಧ್ಯಮ ಸಂಸ್ಥೆಗೆ ನವ್ಯ ತಂತ್ರಜ್ಞಾನದ ಸ್ಪರ್ಶ ನೀಡಿದ ಫಲವಾಗಿ ಅಭಿವೃದ್ಧಿಯ ಪಥದೆಡೆಗೆ ಸಾಗಿಸುವಲ್ಲಿ ಯಶಸ್ಸು ಕಂಡರು.

ಸುಮಾರು ಐನೂರರಿಂದ ಆರುನೂರು ಮಂದಿಗೆ ಉದ್ಯೋಗ ನೀಡಿ ಅನ್ನದಾತರಾಗಿರುವ ರಾಮಚಂದ್ರ ಹೆಗ್ಡೆಯವರು ಸಾವಿರಾರು ಮಂದಿಗೆ ಆಶ್ರಯದಾತರಾಗಿದ್ದಾರೆ.

೧೯೯೨ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಶ್ರೀಮತಿ ಕಲ್ಪನಾ ರವರನ್ನು ತಮ್ಮ ಬಾಳಾ ಸಂಗಾತಿಯನ್ನಾಗಿಸಿ ಕೊಂಡರು. ಇಬ್ಬರು ಪುತ್ರಿಯರು ಕು. ರಚನಾ ಮತ್ತು ಕು. ಐಶ್ವರ್ಯ ರೊಂದಿಗೆ ಸುಖೀ ಸಂಸಾರಿಯಾಗಿದ್ದಾರೆ.

ವೃತ್ತಿಯೊAದಿಗೆ ಪ್ರವೃತ್ತಿಯಲ್ಲಿ ತಮ್ಮನ್ನು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ರಾಮಚಂದ್ರ ಹೆಗ್ಡೆಯವರು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಗೌಡ ಸಾರಸತ್ವ ಸಮಾಜದ ಬಂಧುಗಳ ಸಂಘಟನೆ ಅಮ್ಚಿಗೆಲೆ ಸಮಾಜದ ಅಧ್ಯಕ್ಷರಾಗಿ ಜವಬ್ಧಾರಿ ವಹಿಸಿಕೊಂಡು ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಪವಿತ್ರವಾದ ರಕ್ತದಾನ ಶಿಬಿರವನ್ನು ಆಯೋಜಿಸುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ.

ಅಮ್ಚಿಗೆಲೆ ಸಮಾಜದ ಮಕ್ಕಳಿಂದ ಹಿಡಿದು ವಿವಿಧ ವಯೋಮಿತಿಯವರ ಪ್ರತಿಭೆಗಳಿಗೆ ವಾರ್ಷಿಕ ಮಿಲನದ ವೇದಿಕೆಯಲ್ಲಿ ಅವಕಾಶ ಕಲ್ಪಿಸಿ ಕೊಡುವುದರ ಮೂಲಕ ಆವರ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ವಿಹಾರ ಕೂಟ, ಪೂಜಾ ಕಾರ್ಯಗಳಲ್ಲಿ ಮಹಿಳೆಯರಿಗೆ ಸಂಪೂರ್ಣವಾಗಿ ಭಾಗವಹಿಸುವಂತೆ ಅವಕಾಶ ಕಲ್ಪಿಸಿ ಮಕ್ಕಳ ಪೋಷಕರ ಮೂಲಕ ಸಂಸ್ಕöÈತಿ, ಸಂಪ್ರದಾಯ, ಅಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಸೇತುವೆಯಾಗಿ ಮುಟ್ಟಿಸುವಲ್ಲಿ ರಾಮಚಂದ್ರ ಹೆಗ್ಡೆಯವರ ಪಾತ್ರ ಹಿರಿದಾಗಿದೆ.

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳ ಆಶ್ರಯದಲ್ಲಿ ವಿವಿಧ ಸಾಂಸ್ಕöÈತಿಕ ವೇದಿಕೆಗಳಲ್ಲಿ ನಡೆಯುವ ವಾರ್ಷಿಕ ಮಿಲನ, ನಾಟಕ, ಯಕ್ಷಗಾನ, ಸಂಗೀತ ರಸಮಂಜರಿ, ವಿಹಾರ ಕೂಟ, ಕ್ರೀಡಾಕೂಟ, ಸಾಹಿತ್ಯ ಸಮ್ಮೇಳನಗಳಿಗೆ ರಾಮಚಂದ್ರ ಹೆಗ್ಡೆಯವರು ಸದಾ ಬೆಂಬಲ, ಪ್ರೊತ್ಸಾಹ, ಸಹಾಯ ಹಸ್ತ, ಪ್ರಾಯೊಜಕತ್ವ ನೀಡುತ್ತಾ ಬಂದಿದ್ದಾರೆ. ಯು.ಎ.ಇ.ಯಲ್ಲಿ ಕರ್ನಾಟಕ ಪರ ಭಾಷೆ, ಸಂಸ್ಕöÈತಿ ಸದಾ ಹಸಿರಾಗಿರಿಸಿ ಪೋಷಿಸುತ್ತಾ ಬಂದಿದ್ದಾರೆ.

ತಮ್ಮ ಜನ್ಮಭೂಮಿಯಲ್ಲಿ ನೆಲೆಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ, ಬಡ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಸಹಾಯ ಹಸ್ತನೀಡುತ್ತಾ ಬಂದಿರುವ ರಾಮಚಂದ್ರ ಹೆಗ್ಡೆಯವರ ಮೂರು ನಾಲ್ಕು ದಶಕಗಳ ನಿರಂತರ ಸಮಾಜಸೇವೆ ಹಾಗೂ ತಾಯಿನಾಡಿನ ಸಂಸ್ಕöÈತಿ ಸಂಸ್ಕಾರಗಳನ್ನು ಪೋಷಿಸುತ್ತಾ ಬಂದಿಇದ್ದಾರೆ.

ಕರ್ನಾಟಕ ಸಂಘ ಶಾರ್ಜಾ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವದ ಶುಭ ಸಮಾರಂಭದಲ್ಲಿ ನೀಡಲಾಗುತಿರುವ ಪ್ರತಿಷ್ಠಿತ ೨೦೧೯ ನೇ ಸಾಲಿನ “ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ” ಯನ್ನು ಶ್ರೀ ರಾಮಚಂದ್ರ ಹೆಗ್ಗಡೆಯವರ ಸಾಧನೆಯ ಹಾದಿಯನ್ನು ಗುರುತಿಸಿ ಪ್ರದಾನಿಸಲಾಗುವುದು.

ಯು.ಎ.ಇ. ಯಲ್ಲಿರುವ ಎಲ್ಲಾ ಕರ್ನಾಟಕಪರ ಸಂಘಟನೆಗಳ ಜೊತೆಗೆ ಅತ್ಯುತ್ತಮ ಭಾಂಧವ್ಯ ಹೊಂದಿರುವ ಹಾಗು ಎಲ್ಲಾ ಕರ್ನಾಟಕದವರ ಪ್ರೀತಿಪಾತ್ರರಾಗಿರುವ ಶ್ರೀ ರಾಮಚಂದ್ರ ಹೆಗ್ಗಡೆಯವರಿಗೆ ಸಮಸ್ಥ ಅನಿವಾಸಿ ಕನ್ನಡಿಗರ ಪರವಾಗಿ ಅಭಿನಂದನೆಗಳು.


Spread the love