ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ನಿಂದ ಮ್ಯಾರಥಾನ್

Spread the love

ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ನಿಂದ ಮ್ಯಾರಥಾನ್

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲೆಯ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಗವಾಗಿ ಜನಾರೋಗ್ಯವೇ ರಾಷ್ಟ್ರ ಶಕ್ತಿ ಎಂಬ ಕಾರ್ಯಕ್ರಮವು ಜ್ಯೋತಿಯಿಂದ ಮ್ಯಾರಥಾನ್ ಓಟದೊಂದಿಗೆ ಮಂಗಳೂರು ಜಿಲ್ಲಾದಿಕಾರಿ ಕಛೇರಿ ಮುಂಬಾಗದಲ್ಲಿ ಸಭಾ ಕಾರ್ಯಕ್ರಮ ಮತ್ತು ಯೋಗ ಪ್ರಾತ್ಯಕ್ಷಿತೆ ನಡೆಯಿತು.

ಜ್ಯೋತಿ ಅಂಬೆಡ್ಕರ್ ವೃತ್ತದಿಂದ ಆರಂಭಗೊಂಡ ಆರ್ಕಷಕ ಮ್ಯಾರಥಾನ್ ಓಟಕ್ಕೆ ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ ರವರು ಜಿಲ್ಲಾದ್ಯಕ್ಷರಾದ ನವಾಝ್ ಉಳ್ಳಾಲ ರವರಿಗೆ ದ್ವಜ ಹಸ್ತಾಂತರಿಸುವ ಮೂಲಕ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ ಪ್ರಸ್ಥಾವಿಕ ಮತನಾಡಿದರು. ಫಾದರ್ ಮುಲ್ಲರ್ ಅಸ್ಪತ್ರೆಯ ಫ್ರೊಫೆಸರ್ ಡಾ. ರಘುವೆಂದ್ರ, ಜಿಲ್ಲಾಕಾರ್ಯದರ್ಶಿ ಎಕೆ ಅಶ್ರಫ್ ಜನಾರೋಗ್ಯದ ಕುರಿತು ಮಾಹಿತಿ ನೀಡಿದರು, ಜಿಲ್ಲಾಕಾರ್ಯದರ್ಶಿ ಅಬ್ದುಲ್ ಕಾದರ್ ಕುಲಾಯಿ, ಬಂಟ್ವಾಳ ವಲಯ ಕಾರ್ಯದರ್ಶಿ ಸಲೀಮ್ ಕುಂಪನಮಜಲು ವೇದಿಕೆಯಲ್ಲಿ ಉಪಸ್ಥಿತಿದ್ದರು. ಯೋಗ ಪ್ರಾತ್ಯಕ್ಷಿತೆಯನ್ನು ರಫೀಕ್ ಮಂಗಳೂರು ಮತ್ತು ಬಳಗದವರು ನಡೆಸಿದರು, ಜಿಲ್ಲಾಕಾರ್ಯದರ್ಶಿ ಸಿರಾಜ್ ಕಾವೂರು ಸ್ವಾಗತಿಸಿ ಅಬೂಬಕ್ಕರ್ ಪುತ್ತ ನಿರೂಪಿಸಿದರು.


Spread the love
1 Comment
Inline Feedbacks
View all comments
Lallu
7 years ago

CONSTRUCTIVE THOUGHTS ARE FAR BETTER THAN THE DESTRUCTIVE DEEDS !! GOOD JOB ! MARRY CHRISTMAS TO ALL THE PARTICIPANTS