ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

Spread the love

ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

ಮಂಗಳೂರು : ರಾಷ್ಟ್ರೀಯ ಪಲ್ಸ್ ಪೋಲಿಯೋ 2018-19 ಕಾರ್ಯಕ್ರಮದ ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯು ದ.ಕ ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥಿಲ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಯವರ ಕಛೇರಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ಜಿಲ್ಲಾ  ಆರ್‍ಸಿಎಚ್ ಅಧಿಕಾರಿ ಡಾ.ಅಶೋಕ್  ವಿವರಿಸುತ್ತಾ  ಪೋಲಿಯೋ ನಿರ್ಮೂಲನೆಗಾಗಿ ರಾಜ್ಯಾದ್ಯಂತ 5 ವರ್ಷದೊಳಗಿನ ಮಕ್ಕಳಿಗಾಗಿ ಜನವರಿ 28 ರಂದು ಮೊದಲನೇ ಸುತ್ತು ಹಾಗೂ ಮಾರ್ಚ್ 11 ರಂದು ಎರಡನೇ ಸುತ್ತು  ರಾಷ್ಟ್ರೀಯ ಲಸಿಕಾ ದಿನ (ಪಲ್ಸ್ ಪೋಲಿಯೋ ಕಾರ್ಯಕ್ರಮ) ವನ್ನು ನಡೆಸಲಾಗುವುದು ಹೇಳಿದರು.    ಪಲ್ಸ್ ಪೋಲಿಯೋ ಕಾರ್ಯಕ್ರಮವು ಜಿಲ್ಲೆಯ 0-5 ವರ್ಷದ 1,56,408 ಮಕ್ಕಳಿಗೆ 921 ಬೂತ್ ಗಳೊಂದಿಗೆ ಕಾರ್ಯವರ್ವಹಿಸಲಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಸಹಕಾರದೊಂದಿಗೆ ಅಂಗನವಾಡಿ ಕೇಂದ್ರಗಳಲ್ಲಿ ಬೂತ್‍ಗಳನ್ನು ತೆರೆಯಲು ಅನುವು ಮಾಡಿಕೊಡಬೇಕು. ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳಾದ ಶಿಶು ಅಭಿವೃದ್ಧಿ ಕಾರ್ಯಕ್ರಮ ಅಧಿಕಾರಿ ಮತ್ತು ಮೇಲ್ವಿಚಾರಕರಿಗೆ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುವುದು ಹಾಗೂ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅವಧಿಯಲ್ಲಿ ಎಲ್ಲಾ ಅಂಗನಾವಾಡಿ ಕೇಂದ್ರಗಳ ಮೇಲ್ವಿಚಾರಣೆ ನಡೆಸುವುದು. ಅಂಗನವಾಡಿ ವ್ಯಾಪ್ತಿಯಲ್ಲಿ ಬರುವ ತಾಯಂದಿರಿಗೆ ಅಭಿಯಾನದ ಬಗ್ಗೆ ಮಾಹಿತಿ ನೀಡಬೇಕು.         ಶಿಕ್ಷಣ ಇಲಾಖೆಯ ಸಹಕಾರದಿಂದ ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಅಸ್ಸೆಂಬ್ಲಿಯಲ್ಲಿ ಮಕ್ಕಳಿಗೆ ತಮ್ಮ ಮನೆಯ ಮತ್ತು ಅಕ್ಕ ಪಕ್ಕದ ಮನೆಯವರ ಪೋಷಕರಿಗೆ/ ಹೆತ್ತವರಿಗೆ 0-5 ವರ್ಷದೊಳಗಿನ ಮಕ್ಕಳನ್ನು ಹತ್ತಿರದ ಪೋಲಿಯೋ ಬೂತ್‍ಗೆ ಕರೆದುಕೊಂಡು ಹೋಗಿ ಪೋಲಿಯೋ ಹನಿ ಹಾಕಿಸಿ ತಮ್ಮ ಮಕ್ಕಳನ್ನು ಮಾರಕ ರೋಗದಿಂದ ರಕ್ಷಿಸುವಂತೆ ತಿಳಿಸಬೇಕು ಎಂದು ಅವರು ತಿಳಿಸಿದರು.

ಪಲ್ಸ್ ಪೋಲಿಯೋ ಕಾರ್ಯಕ್ರಮದ ಮುಂಚಿತವಾಗಿ ಜನವರಿ 25 ರಿಂದ ಜನವರಿ 31 ರವರೆಗೆ ವಿದ್ಯುತ್ ಸ್ಥಗಿತಗೊಳಿಸದಂತೆ ಮೆಸ್ಕಾಂ ಇಲಾಖೆಗೆ ಮನವಿ ಮಾಡಲಾಗುವುದು.ಆರ್.ಟಿ.ಓ ಇಲಾಖೆ ಅಧಿಕಾರಿಗಳಿಂದ ವಾಹನದ ವ್ಯವಸ್ಥೆಗಾಗಿ ಮನವಿ ಮಾಡಲಾಗುವುದು ಎಂದರು.

ಗ್ರಾಮೀಣ ಅಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಗ್ರಾಮೀಣ ಮಟ್ಟದಲ್ಲಿ ತಮ್ಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯೊಂದಿಗೆ ಸಮನ್ವಯದಿಂದ ಕ್ಷೇತ್ರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವು ಸಂಪೂರ್ಣ ಯಶಸ್ವಿಯಾಗುವಂತೆ ಸಹಕರಿಸುವುದು ಹಾಗೂ ಈ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಪ್ರಚಾರ ನೀಡಬೇಕು.     ಸಮಾಜ ಕಲ್ಯಾಣ ಇಲಾಖೆ ಮತು ್ತಐಟಿಡಿಪಿ ತಮ್ಮ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆ, ಅನಾಥಶ್ರಮ, ರಿಮೆಂಡ್ ಹೋಂ ಗಳನ್ನೊಳಗೊಂಡು 0-5 ವರ್ಷದೊಳಗಿನ ಮಕ್ಕಳಿಗೆ  ಪೋಲಿಯೋ ಹನಿ ಹಾಕಿಸುವಂತೆ ಕ್ರಮ ವಹಿಸುವುದು ಹಾಗೂ ಈ ಕಾರ್ಯಕ್ರಮದ ಬಗ್ಗೆ ಮೇಲ್ವಿಚಾರಣೆ ಮತ್ತು ಪರಿಶೀಲನೆ ಮಾಡಬೇಕು.       ಕಾರ್ಮಿಕ ಇಲಾಖೆ ತಮ್ಮ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕರಿಗೆ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುವುದು.ಕಾರ್ಮಿಕರ 0-5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವಂತೆ ಕ್ರಮ ವಹಿಸುವುದು ಹಾಗೂ ಈ ಕಾರ್ಯಕ್ರಮದ ಬಗ್ಗೆ ಮೇಲ್ವಿಚಾರಣೆ ಮತ್ತು ಪರಿಶೀಲನೆ ಮಾಡಬೇಕು.

ರೋಟರಿ/ಲಯನ್ಸ್ ಸಂಸ್ಥೆ/ಇಂಡಿಯನ್ ರೆಡ ಕ್ರಾಸ್ ಸೊಸೈಟಿ ಸಾರ್ವಜನಿಕರಿಗೆ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ 0-5 ವರ್ಷದೊಳಗಿನ ಮಕ್ಕಳು ಪೋಲಿಯೋ ಹನಿಯಿಂದ ವಂಚಿತರಾಗದಂತೆ ಪೋಷಕರ ಮನವೊಲಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಡಾ.ಅಶೋಕ್ ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಮಾತನಾಡಿ, ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದ ಹೇಳಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ನ ರಾವ್ ಮತ್ತಿತರರು ಉಪಸ್ಥಿತರಿದ್ದರು.


Spread the love