Home Mangalorean News Kannada News ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಗದಿತ ಲೇನ್ ನಲ್ಲಿ ಸಂಚರಿಸಿ- ಜಿಲ್ಲಾಧಿಕಾರಿ ಜಿ. ಜಗದೀಶ್

ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಗದಿತ ಲೇನ್ ನಲ್ಲಿ ಸಂಚರಿಸಿ- ಜಿಲ್ಲಾಧಿಕಾರಿ ಜಿ. ಜಗದೀಶ್

Spread the love

ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಗದಿತ ಲೇನ್ ನಲ್ಲಿ ಸಂಚರಿಸಿ- ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ : ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 (ಗೋವಾದಿಂದ ಮಂಗಳೂರು ಕಡೆಗೆ) ಹಾಗೂ 169 ಎ (ಉಡುಪಿಯಿಂದ ಆಗುಂಬೆ ಕಡೆಗೆ) ಹಾದುಹೋಗುತ್ತಿದ್ದು, ಅವುಗಳ ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದೆ.

ಸದ್ರಿ ರಸ್ತೆಯಲ್ಲಿ ರಸ್ತೆ ವಿಭಾಜಕ ಅಳವಡಿಸಲಾಗಿದ್ದು, ಅವಶ್ಯಕತೆಗೆ ಅನುಗುಣವಾಗಿ ಒeಜiಚಿಟಿ oಠಿeಟಿiಟಿg (ಯೂ ಟರ್ನ್ ತೆಗೆದುಕೊಳ್ಳಲು ಅನುಕೂಲವಾಗುವಂತೆ) ನೀಡಲಾಗಿದೆ. ಎರಡೂ ದಿಕ್ಕುಗಳಲ್ಲಿ ವಾಹನ ಸಂಚಾರಕ್ಕೆ ಪ್ರತ್ಯೇಕ ದ್ವಿಪಥ ರಸ್ತೆ ಇದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಗಧಿಪಡಿಸಿದ ವೇಗದಲ್ಲಿ ಸಂಚರಿಸುವ ನಾಲ್ಕು ಚಕ್ರಗಳ ಅಥವಾ ಹೆಚ್ಚಿನ ಹೆಚ್ಚಿನ ಚಕ್ರಗಳ ವಾಹನಗಳು ಮೊದಲ ಪಥದಲ್ಲಿ, ಎರಡನೇ ಪಥದಲ್ಲಿ ಸ್ಲೋ ಮೂವಿಂಗ್ ವಾಹನಗಳು ಚಲಿಸಬೇಕು.

ಆದರೆ ರಾಷ್ಟ್ರೀಯ ಹೆದ್ದಾರಿಯ ಮೊದಲನೇ ಪಥದಲ್ಲಿ ದ್ವಿಚಕ್ರ ವಾಹನಗಳನ್ನು ಅತೀ ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಇದರಿಂದಾಗಿ ತೀವ್ರತರವಾದ ಅಪಘಾತಗಳು ಹೆಚ್ಚುತ್ತಿದ್ದು, ಆಗಾಗ್ಗೆ ಮಾನವ ಪ್ರಾಣಹಾನಿಗಳಾಗುತ್ತಿವೆ. ರಸ್ತೆ ಅಪಘಾತದಲ್ಲಿ ಮರಣ ಹೊಂದುತ್ತಿರುವವರ ಸಂಖ್ಯೆ ಅಗಾಧವಾಗಿದ್ದು, ಕುಟುಂಬ ಆಧಾರ ಸ್ತಂಭಗಳನ್ನು ಕಳೆದುಕೊಳ್ಳುವಂತಾಗಿದ್ದು, ಇಂತಹ ಅಪಘಾತಗಳನ್ನು ತಡೆಯುವುದು ಅವಶ್ಯಕವಾಗಿದೆ.

ಈ ನಿಟ್ಟಿನಲ್ಲಿ ದ್ವಿ ಚಕ್ರ ವಾಹನ ಚಾಲಕರು ರಸ್ತೆಯ ಎಡಭಾಗದಲ್ಲಿ ಮಾತ್ರ ತಮ್ಮ ವಾಹನಗಳನ್ನು ಚಲಾಯಿಸತಕ್ಕದ್ದು, ವಾಹನಗಳನ್ನು ರಸ್ತೆ Median opening ಇದ್ದಲ್ಲಿ ಮಾತ್ರ ತಿರುಗಿಸತಕ್ಕದ್ದು, Median opening ದೂರ ಇದೆ ಎಂಬ ಕಾರಣಕ್ಕೆ ವಿರುದ್ಧ ದಿಕ್ಕಿನಲ್ಲಿ ವಾಹನಗಳನ್ನು ಚಲಾಯಿಸಿಕೊಂಡು ಹೋಗುವುದು ಸರಿಯಾದ ಕ್ರಮವಲ್ಲ. ಇಂತಹ ನಿಯಮ ಬಾಹಿರ ಚಾಲನೆಯಿಂದ ಸುಗಮ ಸಂಚಾರಕ್ಕೆ ಅಡೆತಡೆಯಾಗುವುದಲ್ಲದೆ ಅಪಘಾತಕ್ಕೆ ಕಾರಣವಾಗುತ್ತದೆ.

ಆದ್ದರಿಂದ ವಾಹನ ಚಾಲಕರು ನಿಯಮಗಳಿಗನುಸಾರವಾಗಿ ವಾಹನ ಚಲಾವಣೆ ಮಾಡಿ ಅಪಘಾತ ರಹಿತ ಸುಗಮ ಸಂಚಾರಕ್ಕೆ ಸಹಕಾರ ನೀಡುವಂತೆ, ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗದಿತ ಲೇನ್ಗಳಲ್ಲಿ, ನಿಗಧಿತ ವೇಗ ಮಿತಿಯಲ್ಲಿ ಚಲಾಯಿಸುವಂತೆ ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love

Exit mobile version