ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗೆ ಸಂಸದರೇ ಹೊಣೆ: ದೇವಿಪ್ರಸಾದ್ ಶೆಟ್ಟಿ ಆರೋಪ
ಪಡುಬಿದ್ರಿ: ‘ರಾಷ್ಟ್ರೀಯ ಹೆದ್ದಾರಿ 66 ತಲಪಾಡಿಯಿಂದ ಕುಂದಾಪು ರದವರೆಗಿನ ಚತುಷ್ಫತ ರಸ್ತೆ ಅಭಿವೃದ್ಧಿ ಕಾಮಗಾರಿ ಅವ್ಯವಸ್ಥೆಯ ಆಗರವಾಗಿದೆ. ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳ ಮಾತಿಗೆ ಬೆಲೆ ನೀಡದ ಗುತ್ತಿಗೆದಾರರ ದರ್ಪಕ್ಕೆ ಸಂಸದರ ಬೇಜವಾಬ್ದಾರಿಯೇ ಕಾರಣ’ ಎಂದು ಅವಿಭಜಿತ ಜಿಲ್ಲಾ ರಾಷ್ಟ್ರಿಯ ಹೆದ್ದಾರಿ ಹೋರಾಟ ಸಮಿತಿಯ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಬೆಳಪು ಆರೋಪಿಸಿದ್ದಾರೆ.
‘ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭಗೊಂಡ ನಂತರ ಸಾವಿರಕ್ಕೂ ಹೆಚ್ಚು ಅಪಘಾತಗಳಾಗಿ ಹಲವರು ಪ್ರಾಣ ತ್ಯಾಗ ಮಾಡಿದ್ದಾರೆ. ಹಲವರು ಅಂಗಾಂಗಗಳನ್ನು ಕಳೆದುಕೊಂಡಿದ್ದು, ಕೆಲವು ಕುಟುಂಬಗಳು ಬೀದಿ ಪಾಲಾಗಿವೆ. ಅಭಿವೃದ್ಧಿ ಹೆಸರಿನಲ್ಲಿ ಜನರ ಮಾರಣಹೋಮವಾಗಿದೆ. ಹೆದ್ದಾರಿ ಗುತ್ತಿಗೆದಾರರು ತಮಗೆ ಇಷ್ಟ ಬಂದಂತೆ ಅವಧಿ ಮೀರಿದರೂ ನಿಧಾನಗತಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಉಡುಪಿ ಮೇಲುಸೇತುವೆ, ಪಡುಬಿದ್ರಿ ಪೇಟೆ ಹಾಗೂ ಮಂಗಳೂರು ಪಂಪ್‌ವೆಲ್ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದ ಜನರಿಗೆ ತೀರಾ ಅನನುಕೂ ಲವಾಗಿದೆ’ ಎಂದು ಶೆಟ್ಟಿ ತಿಳಿಸಿದ್ದಾರೆ.
25ರಂದು ಸಭೆ: ಒಂದು ತಿಂಗಳ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿ ಸದಿದ್ದಲ್ಲಿ, ಜಿಲ್ಲಾಧಿಕಾರಿಗಳು ಟೋಲ್ ವಸೂಲಿ ಸ್ಥಗಿತಗೊಳಿಸುವ ಸೂಚನೆ ನೀಡಬೇಕು. ತಪ್ಪಿದಲ್ಲಿ ಸಾರ್ವಜನಿ ಕರೊಂದಿಗೆ ಚರ್ಚಿಸಿ ‘ರಾಷ್ಟ್ರೀಯ ಹೆದ್ದಾರಿ ಚಲೋ’ ಕಾರ್ಯ ಕ್ರಮ ಹಮ್ಮಿ ಕೊಳ್ಳಲಾಗುವುದು. ಈ ಬಗ್ಗೆ ಇದೇ 25ರಂದು ಉಭಯ ಜಿಲ್ಲೆಗಳ ಹೋರಾಟ ಸಮಿತಿಯ ಸಭೆ ಕರೆಯಲಾಗುವುದು ಎಂದು ತಿಳಿಸಿದ್ದಾರೆ.