ರಾಷ್ಟ್ರ ನಿರ್ಮಾಣದಲ್ಲಿ ಅನಿವಾಸಿಗಳ ಸೇವೆ ಅನನ್ಯ : ಕೆಸಿಎಫ್ ದುಬೈ ಸ್ನೇಹ ಮಿಲನದಲ್ಲಿ ಐವನ್ ಡಿಸೋಜಾ
ದುಬೈ: ರಾಷ್ಟ್ರ ನಿರ್ಮಾಣದಲ್ಲಿ ಅನಿವಾಸಿಗಳ ಸೇವೆ ಅನನ್ಯವಾಗಿದ್ದು ಆದರೆ ಇಂದು ಅನಿವಾಸಿಗಳು ಹಲವು ಪೀಡನೆಗಳನ್ನು ಅನುಭವಿಸುತ್ತಿರುವುದು ವಿಷಾದನೀಯ, ಈ ನಿಟ್ಟಿನಲ್ಲಿ ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ನನ್ನ ಕಚೇರಿ ಸದಾ ತೆರೆದುಕೊಂಡಿದ್ದು ಅದರ ಸದುಪಯೋಗ ಪಡೆದುಕೊಂಡು ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಲ್ಲಿ ಅದನ್ನು ಈಡೇರಿಸುವಲ್ಲಿ ನಾನು ಸದಾ ಪ್ರಯತ್ನಿಸಿದ್ದು, ಇನ್ನೂ ಸಹ ಅತ್ಯಂತ ಕಾಳಜಿಯಿಂದ ಪರಿಹರಿಸುವದಾಗಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಐವನ್ ಡಿಸೋಜರವರು ಹೇಳಿದ್ದಾರೆ, ಕರ್ನಾಟಕ ಕಲ್ಚರಲ್ ಫೌಂಡೇಶನ್ -ಕೆಸಿಎಫ್ ದುಬೈಸೌತ್ ಹಾಗೂ ನೋರ್ತ್ ಝೋನ್ ಗಳ ಜಂಟಿ ಆಶ್ರಯದಲ್ಲಿ ಭವ್ಯ ಭಾರತದ 71 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದುಬೈ ನಲ್ಲಿ ನಡೆದ ಸರ್ವ ಧರ್ಮೀಯರ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಅನಿವಾಸಿ ಭಾರತೀಯರಿಗೆ ಸರಕಾರದಿಂದ ಲಭಿಸಲಿರುವ ಸವಲತ್ತುಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರಲ್ಲದೆ, ಅನಿವಾಸಿ ಕನ್ನಡಿಗರಿಗೆ ಲಭಿಸಬೇಕಾಗಿರುವ ಸವಲತ್ತುಗಳ ಬಗ್ಗೆ ಸಂಘಟನೆ ನೀಡಿದ ಮನವಿಯನ್ನು ಸ್ವೀಕರಿಸಿದ ಅವರು ಮನವಿಗಳಿಗೆ ಸ್ಪಂದಿಸಿ, ಈಡೇರಿಸುವುದಾಗಿ ಭರವಸೆ ನೀಡಿದರಲ್ಲದೆ ಸಂಘಟನೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಝಾಕ್ ಹಾಜಿ DEWA ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೆಸಿಎಫ್.ಯುಎಇ ರಾಷ್ಟ್ರೀಯ ಸಮೀತಿ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ಉಧ್ಘಾಟನೆ ನೆರವೇರಿಸಿದರು. ಮುನ್ನುಡಿ ಭಾಷಣ ಮಾಡಿದ ಕೆಸಿಎಫ್ ದುಬೈ ಝೋನ್ ನೇತಾರರಾದ ಮೆಹಬೂಬ್ ರಹ್ಮಾನ್ ಸಖಾಫಿ ಕಿನ್ಯ ಅವರು ಸಂಘಟನೆಯ ಕಾರ್ಯಚಟುವಟಿಕೆ ಹಾಗೂ ಅನಿವಾಸಿ ಭಾರತೀಯರಿಗೆ ಸಂಘಟನೆಯು ನೀಡಿದ ಸಹಾಯ ಸಹಕಾರಗಳ ಬಗ್ಗೆ ವಿವರಿಸಿಕೊಟ್ಟರು.
ವಿಶೇಷ ಅತಿಥಿಯಾಗಿ ಆಗಮಿಸಿ ಸ್ವಾತಂತ್ರೋತ್ಸವ ಸಂದೇಶ ಭಾಷಣ ಮಾಡಿದ S.S.F ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ರಾಜ್ಯ ಹಜ್ ಸಮಿತಿ ಸದಸ್ಯರೂ ಆದ ಜನಾಬ್, ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ರವರು ನಿಜವಾದ ದೇಶ ಪ್ರೇಮ ಯಾವುದೆಂದು ಸವಿಸ್ತಾರವಾಗಿ ವಿವರಿಸಿಕೊಟ್ಟರಲ್ಲದೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮುಸ್ಲಿಂ ಹೋರಾಟಗಾರರ ಬಗ್ಗೆ ಸಂಕ್ಷಿಪ್ತವಾಗಿಯಾದರೂ ಅತ್ಯಂತ ಅಚ್ಚುಕಟ್ಟಾಗಿ ವಿವರಿಸಿಕೊಟ್ಟರು, ದೇಶದಲ್ಲಿ ನಡೆಯುವ ಕೋಮು ಗಲಭೆಗಳಿಗೆ ಕಾರಣವನ್ನು ವಿವರಿಸುವುದರೊಂದಿಗೆ, ಸರ್ವ ಧರ್ಮೀಯರೂ ಅವರವರ ಧರ್ಮವನ್ನು ಅಚ್ಚುಕಟ್ಟಾಗಿ ಪಾಲಿಸುವುದರೊಂಗೆ ಮತ್ತೊಂದು ಧರ್ಮವನ್ನು ಗೌರವಾದರದೊಂದಿಗೆ ಕಂಡರೆ ಶಾಂತಿ ಸಹಬಾಳ್ವೆಯಿಂದ ಜೀವಿಸಬಹುದೆಂಬ ಸಂದೇಶವನ್ನಿತ್ತರು.
ದೇಶ ವಿದೇಶಗಳಲ್ಲಿ ವಿವಿಧ ವಿಷಯಗಳಲ್ಲಿ ವಿಷೇಶ ಸಾಧನೆಗೈಯವ ಕನ್ನಡಿಗರನ್ನು ಸದಾ ಸನ್ಮಾನಿಸಿ ಗೌರವಿಸುವ ಕೆಸಿಎಫ್ ಈ ಬಾರಿ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ಅಮೇರಿಕಾದ ಅಲಬಾಮದಲ್ಲಿ, ನಾಸಾ ಯುಎಸ್ ಸ್ಪೇಸ್ ಅಕಾಡೆಮಿ ವಿಂಗ್ಸ್ ಅಧೀನದಲ್ಲಿ ಆಯೋಜಿಸಲ್ಪಟ್ಟ ಯುಎಸ್ SPACE AND ROCKETRY PROGRAMME ತರಬೇತು ಶಿಬಿರದಲ್ಲಿ ವಿಶೇಷ ಅಭ್ಯರ್ಥಿಯಾಗಿ ಪಾಲ್ಗೊಳ್ಳಲು ಯುಎಇ ಯಿಂದ ಆರಿಸಲ್ಪಟ್ಟು ಪ್ರಥಮ ಪದಕ ಪಡೆದ ಮಾಸ್ಟರ್ “ತಸ್ದೀಕ್ ಅಬ್ದುಲ್ ರಝಾಕ್” ರವರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಯು.ಎ.ಇ.ರಾಷ್ಟ್ರೀಯ ಸಮೀತಿ ಗೌರವಾನ್ವಿತ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರ ಮಂಗಲ ಶುಭ ಹಾರೈಸಿ ಮಾತನಾಡಿದರು, ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಕಾಜೂರು ರವರು, ಅನಿವಾಸಿ ಭಾರತೀಯರ ಪರವಾಗಿ ಮುಖ್ಯ ಸಚೇತಕರಾದ ಮಾನ್ಯ ಶ್ರೀ ಐವನ್ ಡಿಸೋಜ ರವರಿಗೆ ನೀಡಿದ ಮನವಿಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಓದಿ ವಿವರಿಸಿದರು.
ಯು.ಎ.ಇ ಯಲ್ಲಿರುವ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ನಾಯಕರಾದ ಪ್ರಭಾಕರ ಅಂಬಲತ್ತರೆ (ಪ್ರಧಾನ ಕಾರ್ಯದರ್ಶಿಗಳು:-ಕರ್ನಾಟಕ ಅನಿವಾಸಿ ಭಾರತೀಯ ಸಮೀತಿ. UAE), ಮಾರ್ಕ್ ಡೆನ್ನಿಸ್ ಡಿಸೋಜ (ಪೋಷಕರು:-ಕರ್ನಾಟಕ ಸಂಘ ಶಾರ್ಜಾ) ಮಲ್ಲಿಕಾರ್ಜುನ ಗೌಡ (ಕನ್ನಡಿಗರು ದುಬೈ) ಶಶಿಧರ ನಾಗರಾಜಪ್ಪ (ಕನ್ನಡ ಪಾಠ ಶಾಲೆ, ದುಬೈ), ಜೇಮ್ಸ್ ಮಂಡೋನ್ಸಾ (ಕೊಂಕನ್ಸ್, ದುಬೈ), ಸುಗಂದರಾಜ್ ಬೇಕಲ್ (ಅಧ್ಯಕ್ಷರು ಕರ್ನಾಟಕ ಸಂಘ ಶಾರ್ಜಾ), ಕೆ ಆರ್ ತಂತ್ರಿ (ಉಪಾಧ್ಯಕ್ಷರು ಕರ್ನಾಟಕ ಸಂಘ ಶಾರ್ಜಾ), ಸತೀಶ್ ಶೆಟ್ಟಿ (ತುಳುಕೂಟ ದುಬೈ) ಸೇರಿದಂತೆ ಯುಎಇ ಯಲ್ಲಿರುವ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು
ಯ.ಎ.ಇ.ಯಲ್ಲಿರುವ ಸಂಘ ಸಂಸ್ಥೆಗಳು ಹಲವಾರು ಉತ್ತಮವಾದ ಕಾರ್ಯಗಳನ್ನು ಸಮೂಹದ ಮುಂದಿಡುತ್ತಿದ್ದರೂ ಕೂಡಾ ಈ ರೀತಿ ಸರ್ವ ಧರ್ಮೀಯರನ್ನು ಸೇರಿಸಿಕೊಂಡು ಗಲ್ಫ್ ನಾಡಿನಲ್ಲಿ ಇಷ್ಟೊಂದು ವಿಜ್ರಂಭಣೆಯಿಂದ ಸ್ವಾತಂತ್ರ್ಯೋತ್ಸವ ಆಚರಿಸಿದ ಮೊದಲ ಸಂಘಟನೆ ಎಂಬ ಕೀರ್ತಿಯನ್ನು ಪಡೆದ ಕೆಸಿಎಫ್ ನ ಪಾಲಿಗೆ ಅತ್ಯಂತ ಸುವರ್ಣಣೀಯ ನಿಮಿಷವಾಗಿ ಮಾರ್ಪಟ್ಟಿದೆ
ಕಾರ್ಯಕ್ರಮದ ಮೊದಲಿಗೆ ಕೆಸಿಎಫ್ ಕಾರ್ಯಕರ್ತರಿಂದ ಭಾರತದ ರಾಷ್ಟ್ರಗೀತೆಯನ್ನು, ಯು.ಎ.ಇ. ಯ ರಾಷ್ಟ್ರ ಗೀತೆಯನ್ನು ಹಾಡಿದರು, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರಿಗೂ ಸಿಹಿ ತಿಂಡಿ ಹಾಗೂ ತಂಪು ಪಾನೀಯಗಳನ್ನು ನೀಡುವುದರ ಮೂಲಕ ಸ್ವಾತಂತ್ರ್ಯೊತ್ಸವದ ಸಂಭ್ರಮವನ್ನು ಪರಸ್ಪರ ಹಂಚಿಕೊಳ್ಳಲಾಯಿತು.
ಅಬುಧಾಬಿ ಝೋನ್ ಕೆಸಿಎಫ್ ಅಧ್ಯಕ್ಷರಾದ ಹಸೈನಾರ್ ಅಮಾನಿ ಅಜ್ಜಾವರ, ಕೆಸಿಪ್ಹ್ ದುಬೈ ನಾರ್ತ್ ಝೋನ್ ಅಧ್ಯಕ್ಷರಾದ ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗೇರು, ಸೌತ್ ಝೋನ್ ಹಂಗಾಮಿ ಅಧ್ಯಕ್ಷರಾದ ಶಾಹುಲ್ ಹಮೀದ್ ಸಖಾಫಿ ಮಾದಾಪುರ, ಕೆಸಿಎಫ್ ನಾಯಕರಾದ ಅಶ್ರಫ್ ಹಾಜಿ ಅಡ್ಯಾರ್, ಶುಕೂರ್ ಮನಿಲಾ, ಸಯ್ಯದ್ ತ್ವಾಹಾ ಬಾಫಖಿ ತಂಘಳ್, ಇಬ್ರಾಹಿಂ ಬ್ರೈಟ್ ಮಾರ್ಬಲ್ ಅಬುಧಾಬಿ, ಅಲ್ ಐನ್ ಕೆಸಿಎಫ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಜಿ ನಾಟೆಕಲ್, ನಝೀರ್ ಹಾಜಿ ಕೆಮ್ಮಾರ, ಇಬ್ರಾಹಿಂ ಹಾಜಿ ಕಿನ್ಯ, ಅರಾಫತ್ ನಾಪೋಕ್ಲು ಸೇರಿದಂತೆ ಹಲವು ನಾಯಕರುಗಳು ಸಾಮಾಜಿಕ ಮುಂದಾಳುಗಳು, ದುಬೈ ಯ ವಿವಿಧ ಉದ್ಯಮಿಗಳು ಭಾಗವಹಿಸಿದ್ದರು.
ಸ್ವಾಗತ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹೀಮ್ ಕೋಡಿ ಸ್ವಾಗತಿಸಿ, ಕೆ.ಸಿ.ಎಫ್ ದುಬೈ, ಸೌತ್ ಝೋನ್ ಪ್ರಧಾನ ಕಾರ್ಯದರ್ಶಿ ರಫೀಕ್ ಕಲ್ಲಡ್ಕ ರವರ ಧನ್ಯವಾದ ನಿರ್ವಹಿಸಿದರು