ರಾಹುಲ್ ಗಾಂಧಿ ಹಿಂದೂಗಳ ತಾಳ್ಮೆ ಪರೀಕ್ಷೆಯ ದುಸ್ಸಾಹಸಕ್ಕೆ ಮುಂದಾಗಬೇಡಿ : ಯಶ್ಪಾಲ್ ಸುವರ್ಣ ಆಕ್ರೋಶ
ಉಡುಪಿ: ಲೋಕಸಭೆಯಲ್ಲಿ ವಿಪಕ್ಷ ನಾಯಕನ ಜವಾಬ್ದಾರಿ ಹುದ್ದೆಯಲ್ಲಿರುವ ರಾಹುಲ್ ಗಾಂಧಿ ಮತೀಯ ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದೂತ್ವ, ರಾಷ್ಟೀಯ ಸ್ವಯಂ ಸೇವಕ ಸಂಘ, ಪ್ರಧಾನಿ ನರೇಂದ್ರ ಮೋದಿಯವರನ್ನು ಅವಹೇಳನ ಮಾಡುವ ಮೂಲಕ ತಮ್ಮ ನೈತಿಕ ಅಧಃಪತನವನ್ನು ಜಗಜ್ಜಾಹೀರು ಮಾಡಿದ್ದು, ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡುವ ದುಸ್ಸಾಹಸಕ್ಕೆ ಮುಂದಾಗಬೇಡಿ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಧರ್ಮಕ್ಕೆ ಪ್ರೀತಿ ಸಹೋದರತೆಯ ಪಾಠ ಮಾಡುವ ಮೊದಲು ಅಂದು 5 ಲಕ್ಷ ಕಾಶ್ಮೀರಿ ಹಿಂದೂಗಳನ್ನು ಓಡಿಸಿದವರು, ಅಮಾಯಕ ಕನಯ್ಯಲಾಲ್ ನನ್ನು ಹತ್ಯೆ ಮಾಡಿದವರು , ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರು, ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ದಲಿತನ ಮನೆ ಪೊಲೀಸ್ ಠಾಣೆಗೆ ಬೆಂಕಿ ಇಟ್ಟವರು, ಪಿಎಫ್ಐ ಜೊತೆ ಸೇರಿ ಭಯೋತ್ಪಾದನೆ ಮಾಡಿ ದೇಶದ್ರೋಹ ಮಾಡಿದವರು ,ಉಡುಪಿ ಶಾಲೆಯಲ್ಲಿ ಹಿಜಾಬ್ ವಿವಾದ ಸೃಷ್ಟಿಸಿ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತಂದವರು ಯಾರೂ ಎಂಬುದನ್ನು ಕೂಡಾ ಲೋಕಸಭೆಯಲ್ಲಿ ಹೇಳುವ ಧೈರ್ಯ ರಾಹುಲ್ ಗಾಂಧಿಗೆ ಇದೆಯೇ ಎಂದು ಹೇಳಿದ್ದಾರೆ.
ಹಿಂದೂ ಧರ್ಮಕ್ಕೆ ಹಿಂಸೆಯ ಬಣ್ಣ ಬಳಿಯುವ ಮೂಲಕ ಸನಾತನ ಹಿಂದೂ ಧರ್ಮಕ್ಕೆ ರಾಹುಲ್ ಗಾಂಧಿ ಅಪಮಾನ ಮಾಡಿದ್ದಾರೆ. 49 ಸೀಟುಗಳು ಕೊಟ್ಟಾಗ ಹಿಂದುತ್ವ ಕೆಟ್ಟದು ಹಿಂದುಗಳು ಒಳ್ಳೆಯವರು ಎಂದಿದ್ದ ಯಾವಾಗ 99 ಸೀಟುಗಳು ಸಿಕ್ಕಿದ ಕೂಡಲೇ ಈಗ ಹಿಂದೂಗಳೇ ಹಿಂಸೆ ಮಾಡುವವರು ಎನ್ನುವ ಮೂಲಕ ತಮ್ಮ ಹಿಂದೂ ವಿರೋಧಿ ನಿಲುವನ್ನು ಪ್ರದರ್ಶಿಸಿದ್ದಾರೆ. ಜಾಗೃತ ಹಿಂದೂ ಸಮಾಜ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರವನ್ನು ನೀಡುವ ಅನಿವಾರ್ಯತೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.