ರಾ.ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಶನಿವಾರ (ನಾಳೆ) ಸಾಸ್ತಾನ ಟೋಲ್ ಗೆ ಮುತ್ತಿಗೆ

Spread the love

ರಾ.ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಶನಿವಾರ (ನಾಳೆ) ಸಾಸ್ತಾನ ಟೋಲ್ ಗೆ ಮುತ್ತಿಗೆ

ಬ್ರಹ್ಮಾವರ: ಸಂಪೂರ್ಣ ಹದಗೆಟ್ಟಿರುವ ಹೊಂಡ ಗುಂಡಿಗಳಿಂದ ತುಂಬಿರುವ ಹೆದ್ದಾರಿ ಟೋಲ್ ರಸ್ತೆ, ಉರಿಯದ ಬೀದಿ ದೀಪಗಳು, ಪಾದಚಾರಿಗಳಿಗೆ ದಾರಿಯ ಸಮಸ್ಯೆ ಹಾಗೂ ಸ್ಥಳೀಯ ವಾಹನಗಳಲ್ಲಿ ಸಂಸ್ಥೆಯ ಹೆಸರಿನಲ್ಲಿ ನೋಂದಾಯಿಸಿರುವ ವಾಹನಗಳಿಗೆ ಟೋಲ್ ಶುಲ್ಕ ವಿಧಿಸುತ್ತಿರುವುದನ್ನು ಖಂಡಿಸಿ ನವೆಂಬರ್ 9 ರಂದು ಶನಿವಾರ ಸಂಜೆ 5 ಗಂಟೆಗೆ ಸಾಸ್ತಾನ ಟೋಲ್ ಗೆ ಮುತ್ತಿಗೆ ಹಾಕಲು ನಿರ್ಧಾರಿಸಲಾಗಿದೆ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನಿರ್ಧರಿಸಿದೆ.

ಸಂಸ್ಥೆಯ ಹೆಸರಿನಲ್ಲಿ ನೋಂದಾಯಿತ ವಾಹನಗಳಿಗೆ ಟೋಲ್ ವಿಧಿಸುವ ನೆಪದಲ್ಲಿ ಸ್ಥಳೀಯ ಶಾಲೆಗಳ ವಾಹನಕ್ಕೆ ಹಾಗೂ ಸ್ಥಳೀಯ ಕೆಲವು ಉದ್ಯಮಗಳ ವಾಹನಗಳಿಗೆ ಟೋಲ್ ವಿಧಿಸುವುದರ ಮೂಲಕ ಟೋಲ್ ಕಟ್ಟೆಯವರು ಒಡೆದು ಅಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ನಂತರ ಇದನ್ನೆ ಮುಂದುವರಿಸಿಕೊಂಡು ಕಮರ್ಷಿಯಲ್ ವಾಹನಗಳಿಗೂ ಟೋಲ್ ವಿಧಿಸಲು ಮುಂದಾಗುವ ಸಾಧ್ಯತೆ ಇದ್ದು ಈ ಷಡ್ಯಂತ್ರದ ವಿರುದ್ದ ದನಿ ಎತ್ತುವ ನಿಟ್ಟಿನಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.


Spread the love