Spread the love
ರಿಪೇರಿ ಮಾಡಿತಂದ ಒಮಿನಿ ಕಾರಿಗೆ ಬೆಂಕಿ
ಮಂಗಳೂರು: ಓಮಿನಿ ವಾಹನವೊಂದು ಬೆಂಕಿಗಾಹುತಿಯಾದ ಘಟನೆ ಲೈಟ್ ಹೌಸ್ ಬಳಿಯಲ್ಲಿ ಮಂಗಳವಾರ ನಡೆದಿದೆ.
ಮಾಹಿತಿಗಳ ಪ್ರಕಾರ ಆಸೀಫ್ ಅವರ ಮಾರುತಿ ಕಾರಿನ ಪೆಟ್ರೋಲ್ ಪೈಪಿನಲ್ಲಿ ಸಮಸ್ಯೆ ಇದ್ದು, ಕಾರನ್ನು ಮಾಂಡವಿ ಮೋಟಾರ್ಸ್ ನಲ್ಲಿ ರಿಪೇರಿಗೆ ಇಡಲಾಗಿತ್ತು. ಮಂಗಳವಾರ ಕಾರನ್ನು ವಾಪಾಸು ಕೊಂಡೊಯ್ದು ರಿಪೇರಿ ಸ್ಥಳದಿಂದ ಕೇವಲ 200 ಮೀಟರ್ ಚಲಾಯಿಸಿಕೊಂಡು ಬಂದಿದ್ದು, ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಕಾರನ್ನು ಎಮ್ ಸಿ ಸಿ ಬ್ಯಾಂಕ್ ಬಳಿ ನಿಲ್ಲಿಸಿದ್ದು, ಮಾಂಡವಿ ಮೋಟಾರ್ಸ್ ಗೆ ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಿದ್ದಾರೆ.
ಬೆಂಕಿಯಿಂದ ಸಮಸ್ಯೆಗೊಳಗಾದ ಕಾರನ್ನು ಮತ್ತೆ ಪುನಃ ಮಾಂಡವಿ ಮೋಟಾರ್ಸ್ ಗೆ ಕಳುಹಿಸಲಾಗಿದೆ.
Spread the love