ರಿಯಾದ್: ಮಲಾಝ್ ಯುನಿಟ್ HVC ಸ್ವಯಂಸೇವಕರಿಗೆ ಸನ್ಮಾನ
ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಆಯೋಜಿಸಿದ್ದ HVC 2019 ರ ಹಜ್ಜ್ ಸ್ವಯಂಸೇವಕರಾಗಿ ರಿಯಾದ್ ಝೋನ್ ಅಧೀನದಲ್ಲಿ ಅಲ್ಲಾಹನ ಅತಿಥಿಗಳ ಸೇವನೆಗೈದ ಮಲಾಝ್ ಯುನಿಟ್ ನ 6 ಮಂದಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವು ತಾ:1-10-2019 ಮಂಗಳವಾರ ರಾತ್ರಿ 10:00 ಗಂಟೆಗೆ ಮಲಾಝ್ ಬಶೀರ್ ಮೆದು ನಿವಾಸದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲಾಝ್ ಯುನಿಟ್ ಸಲಹೆಗಾರರಾದ ಸೈಯದ್ ರಫೀಕ್ ತಂಙಳ್ ಕೊಡಗು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸನಯ್ಯ ಸೆಕ್ಟರ್ ಇದರ ಶಿಕ್ಷಣ ಇಲಾಖೆ ಅಧ್ಯಕ್ಷ ಸುಲೈಮಾನ್ ಸಅದಿ ಉಸ್ತಾದರು ನೆರವೇರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಸನಯ್ಯ ಸೆಕ್ಟರ್ ಅಧ್ಯಕ್ಷ ಹಂಝ ಮುಸ್ಲಿಯಾರ್ ಚೋಕಂಡಲ್ಲಿ ಸಭೆಯನ್ನುದ್ದೇಶಿಸಿ ಬಾಷಣ ಮಾಡಿದರು, ನಂತರ ನಡೆದ ಸಭಾ ಕಾರ್ಯಕ್ರಮದ ಪ್ರಪ್ರಥಮವಾಗಿ ಪ್ರಸಕ್ತ ಸಾಲಿನಲ್ಲಿ ಹಜ್ಜ್ ಕರ್ಮ ನಿರ್ವಹಿಸಿ ಬಂದ ಮಲಾಝ್ ಯುನಿಟ್ ನ ಉಪಾಧ್ಯಕ್ಷರು, ಎಲ್ಲಾ ಸುನ್ನೀ ಸಂಘ ಸಂಸ್ಥೆಗಳ ಹಿತೈಷಿಯೂ, ಹಿರಿಯ ನೇತಾರರೂ ಆದ ಅಬ್ದುಲ್ ಮಜೀದ್ ಕಕ್ಕಿಂಜೆ ಯವರನ್ನು ಕೆ.ಸಿ.ಎಫ್ ಶಾಲು ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಹಜ್ಜ್ ಸ್ವಯಂಸೇವಕರಾಗಿ ಅಲ್ಲಾಹನ ಅತಿಥಿಗಳ ಸೇವನೆಗೈದ ಮಲಾಝ್ ಯುನಿಟ್ ನ ಮುಹಮ್ಮದ್ ಹನೀಫ್ N.S ಕೈರಂಗಳ, ಝಹೀರ್ ಅಬ್ಬಾಸ್ ಉಳ್ಳಾಲ, ಅಬ್ದುಲ್ ಖಾದರ್ ಎಮ್ಮೆಮ್ಮಾಡು, ಯಾಸಿರ್ ಮೊಂಟೆಪದವು, ಶಂಸುದ್ದೀನ್ ಅಸೈಗೋಳಿ, ರೋಶನ್ ಝಮೀರ್ ಬಳ್ಳಾರಿ ರವರನ್ನು ಕೆ.ಸಿ.ಎಫ್ ಶಾಲು ಹಾಗೂ ಸ್ಮರಣಿಕೆ ನೀಡುವ ಮೂಲಕ ಸನ್ಮಾನಿಸಲಾಯಿತು.
ನಂತರ ಸೈಯ್ಯದ್ ರಫೀಕ್ ತಂಙಳ್ ಕೊಡಗು ಅಧ್ಯಕ್ಷತೆ ಭಾಷಣ ಮಾಡಿದರು. ಕೆ.ಸಿ.ಎಫ್ ರಿಯಾದ್ ಝೋನಲ್ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅಬ್ದುಲ್ ಖಾದರ್ ಸಾದಾತ್, ಆಡಳಿತ ಇಲಾಖೆ ಕಾರ್ಯದರ್ಶಿ ಬಶೀರ್ ಮೆದು, ಅನ್ಸಾರ್ ಮುಹಮ್ಮದ್ ಉಳ್ಳಾಲ, ಸನಯ್ಯ ಸೆಕ್ಟರ್ ಸಂಘಟನಾ ಇಲಾಖೆ ಅಧ್ಯಕ್ಷ ಶಂಸುದ್ದೀನ್ ತಕ್ಕಪಳ್ಳಿ, ಪ್ರಕಾಶನ ಇಲಾಖೆ ಅಧ್ಯಕ್ಷ ಜೆ. ಫಾರೂಕ್ ಪಾಣೆಮಂಗಳೂರು, ಮಲಾಝ್ ಯುನಿಟ್ ಖಜಾಂಚಿ ಇಬ್ರಾಹಿಂ ಹಮ್ಮಬ್ಬ ಹಾಗೂ ಇನ್ನಿತರ ನೇತಾರರೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದರು. ಕಾರ್ಯಕ್ರಮದ ಮೊದಲಿಗೆ ಮಲಾಝ್ ಯುನಿಟ್ ಪ್ರ.ಕಾರ್ಯದರ್ಶಿ ಮನ್ಸೂರ್ ಪಡಿಕ್ಕಲ್ ಸ್ವಾಗತ ಬಾಷಣ ಮಾಡಿ, ಕೊನೆಯಲ್ಲಿ ವಂದಿಸಿದರು.