Home Mangalorean News Kannada News ರಿಸೋಲ್ ಟಯರ್ ಕಳ್ಳತನ ಮಾಡಿದ ಮೂವರ ಬಂಧನ

ರಿಸೋಲ್ ಟಯರ್ ಕಳ್ಳತನ ಮಾಡಿದ ಮೂವರ ಬಂಧನ

Spread the love

ರಿಸೋಲ್ ಟಯರ್ ಕಳ್ಳತನ ಮಾಡಿದ ಮೂವರ ಬಂಧನ

ಮಂಗಳೂರು : ಮಂಗಳೂರು ನಗರದ ಪಣಂಬೂರು ಕೆಐಓಸಿಎಲ್ ಜಂಕ್ಷನ್ ಬಳಿ ಬೈಕಂಪಾಡಿ ಕೈಗಾರಿಕ ಪ್ರದೇಶದಲ್ಲಿರುವ ಪಂಚಲಿಂಗೇಶ್ವರ ಟಯರ್ಸ್ ಎಂಬ ಕಂಪೆನಿಗೆ ಸಂಬಂಧಿಸಿದ ರೀಸೋಲ್ ಟಯರ್ ಕಳ್ಳತನ ಮಾಡಿದ ಆರೋಪಿಗಳನ್ನು ಸೊತ್ತು ಸಮೇತ ಪತ್ತೆ ಮಾಡಿ ದಸ್ತಗಿರಿ ಮಾಡುವಲ್ಲಿ ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದಾರೆ.

 

ಬಂಧಿತರನ್ನು ಕಾಟಿಪಳ್ಳ ನಿವಾಸಿ ರಿಯಾಜ್ ಅಹ್ಮದ್ (32), ಸೂರಿಂಜೆ ನಿವಾಸಿ ಮಹ್ಮದ್ ಆಲಿ @ಅಬ್ಬಾಸ್ (33) ಮತ್ತು ಸಂತೋಷ (30) ಎಂದು ಗುರುತಿಸಲಾಗಿದೆ.

ಬಂಧಿತರಿಂದ 20 ರಿಸೋಲ್ಡ್ ಟಯರ್ ಗಳು, ಒಂದು ಕಟ್ಟಿಂಗ್ ಮೆಷಿನ್ ಹಾಗೂ ಟಾಟಾ ಏಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು ಇವುಗಳ ಒಟ್ಟು ಮೌಲ್ಯ ರೂ 5 ಲಕ್ಷ ಆಗಿರುತ್ತದೆ.

ನಗರ ಪೊಲೀಸ್ ಆಯುಕ್ತಾರಾದ ಡಾ|ಹರ್ಷ ಅವರ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಅರುಣಾಂಕ್ಷು ಗಿರಿ, ಅಪರಾಧ ಮತ್ತು ಸಂಚಾರ ವಿಭಾಗ ಡಿಸಿಪಿ ಲಕ್ಷ್ಮೀ ಗಣೇಶ್, ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಗೌಡರವರ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಅಝ್ಮತ್ ಆಲಿ, ಪಣಂಬೂರು ಪೊಲೀಸ್ ಉಪ ನಿರೀಕ್ಷಕರಾದ ಉಮೇಶ್ ಕುಮಾರ್, ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕರು ಕುಮಾರೇಶನ್, ಎಎಸ್ ಐ ಗಿರೀಶ್ ಮತ್ತು ಸಿಬಂದಿಗಳಾದ ಪ್ರೇಮಾನಂದ, ಡೇವಿಡ್ ಡಿಸೋಜಾ, ಪ್ರಮೋದ್, ಜಯರಾಮ್, ಕಮಲಾಕ್ಷ, ವೆಂಕಟೇಶ್, ದಾದಾಸಾಬ್ ಆರೋಪಿಗಳನ್ನು ಸೊತ್ತು ಸಮೇತ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.


Spread the love

Exit mobile version