Home Mangalorean News Kannada News ರೆಡ್ ಕ್ರಾಸ್ ಸಂಸ್ಥೆಯಲ್ಲಿ ಯೋಗ ದಿನಾಚರಣೆ

ರೆಡ್ ಕ್ರಾಸ್ ಸಂಸ್ಥೆಯಲ್ಲಿ ಯೋಗ ದಿನಾಚರಣೆ

Spread the love

ರೆಡ್ ಕ್ರಾಸ್ ಸಂಸ್ಥೆಯಲ್ಲಿ ಯೋಗ ದಿನಾಚರಣೆ

ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ವತಿಯಿಂದ ವಿಶ್ವ ಯೋಗ ದಿನಾಚರಣೆಯು ರೆಡ್ ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್, ಅಜ್ಜರಕಾಡು, ಉಡುಪಿಯಲ್ಲಿ ಗುರುವಾರ ಜರುಗಿತು.

ಕಾರ್ಯಕ್ರಮವನ್ನು ಲಯನ್ ವಿ.ಜಿ. ಶೆಟ್ಟಿ, ಪ್ರಥಮ ವೈಸ್ ಡಿಸ್ಟ್ರಿಕ್ಟ್ ಗವರ್ನರ್, ಲಯನ್ ಜಿಲ್ಲೆ 317ಸಿ ಇವರು ಉದ್ಘಾಟಿಸಿ ಮಾತನಾಡಿ, ಯೋಗವು ವ್ಯಕ್ತಿಯೊಬ್ಬನ ಒಳಗಿನ ಶಕ್ತಿಯನ್ನು ಒಂದು ಸಂತುಲಿತ ರೀತಿಯಲ್ಲಿ ಸುಧಾರಿಸಲು ಅಥವಾ ವೃದ್ಧಿಪಡಿಸಲು ಇರುವ ಒಂದು ವಿಧಾನ. ಅದು ಸಂಪೂರ್ಣ ಸ್ವ-ಸಾಫಲ್ಯ ಪಡೆಯುವ ಒಂದು ಹಾದಿಯನ್ನು ಒದಗಿಸುತ್ತದೆ. ದೇಹವನ್ನು ಆರೋಗ್ಯವಾಗಿಡುವ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಕಾಯಿಲೆ ಹತ್ತಿರ ಸುಳಿಯದಂತೆ ಚೈತನ್ಯ ತುಂಬುವ, ಮನಸ್ಸು ಸುದೃಢಗೊಳಿಸಬಲ್ಲ ಶಕ್ತಿ ಯೋಗಕ್ಕಿದೆ ಎಂದರು.
ಮುಖ್ಯ ಅತಿಥಿಗಳಾದ ಲಯನ್ ಸಾಧನ ಕಿಣಿ ಮಾತನಾಡಿ, ಒತ್ತಡ ರಹಿತ ಜೀವನಕ್ಕೆ ಯೋಗ ಅತೀ ಅಗತ್ಯ. ಯೋಗ ದೇಹ ಮತ್ತು ಮನಸ್ಸನ್ನು ಸದೃಢಗೊಳಿಸುತ್ತದೆ. ಆಧ್ಯಾತ್ಮಿಕತೆಯ ಕಡೆಗೆ ಮನಸ್ಸನ್ನು ಕೊಂಡೊಯ್ಯುವ ಮೂಲಕ ಹೊಸ ಚೈತನ್ಯ ತುಂಬಿ ಆರೋಗ್ಯ ವೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿದ್ದ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಉಮೇಶ್ ಪ್ರಭು ಮಾತನಾಡಿ, ಯೋಗವು ದೇಹದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ನಮ್ಮ ಮೂಳೆ ಸ್ನಾಯುಗಳನ್ನು ಚುರುಕು ಮತ್ತು ಚಟುವಟಿಕೆಗೊಳಿಸಲು ಯೋಗ ಸಹಕಾರಿ. ಯೋಗಭ್ಯಾಸದ ನಿರಂತರತೆಯು ದೇಹಕ್ಕೆ ಶಕ್ತಿಯನ್ನು ನೀಡಿ, ಬಳಲಿಕೆ, ಸುಸ್ತು, ದೂರವಾಗಿ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ ಅಲ್ಲದೆ ಅರೋಗ್ಯಯುತ ಬದುಕಿಗೆ ಯೋಗ ಪೂರಕ. ಯೋಗಭ್ಯಾಸವನ್ನು ನಿತ್ಯ ಜೀವನದ ಒಂದು ಭಾಗವಾಗಿ ಅನುಷ್ಠಾನ ಮಾಡಿದಾಗ ಆರೋಗ್ಯ ಪೂರ್ಣ ಜೀವನ ನಮ್ಮದಾಗುತ್ತದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ರಾಧಿಕಾ ರವಿರಾಜ್, ಡಾ. ಜಿ. ಶಂಕರ್ ಕಾಲೇಜಿನ ವಿದ್ಯಾರ್ಥಿಗಳಿಗೆ ಯೋಗ ತರಬೇತಿಯನ್ನು ನೀಡಿದರು. ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಕೋ-ಆರ್ಡಿನೇಟರ್ ಶೋಭಾ ಎಮ್ ಹೆಗ್ಡೆ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ, ಬಾಲಕೃಷ್ಣ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರುಗಳಾದ ಅಶೋಕ್ ಹೆಗ್ಡೆ, ಇಂದಿರಾ ಹೆಗ್ಡೆ, ಕೆ. ರಾಮಚಂದ್ರ ದೇವಾಡಿಗ, ಮತ್ತು ಜೂನಿಯರ್ ರೆಡ್ ಕ್ರಾಸ್ ಘಟಕದ ಚಯರ್‍ಮ್ಯಾನ್ ಡಾ. ಅರವಿಂದ ನಾಯಕ್ ಅಮ್ಮುಂಜೆ ಉಪಸ್ಥಿತರಿದ್ದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿಯ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ. ಸ್ವಾಗತಿಸಿದರು. ಗೌರವ ಖಜಾಂಚಿ ಟಿ. ಚಂದ್ರಶೇಖರ್‍ರವರು ವಂದಿಸಿದರು. ಜಯರಾಮ್ ಆಚಾರ್ಯ ಸಾಲಿಗ್ರಾಮ, ಯುವ ರೆಡ್ ಕ್ರಾಸ್ ಘಟಕದ ಚಯರ್‍ಮ್ಯಾನ್ ನಿರೂಪಿಸಿದರು.


Spread the love

Exit mobile version