ರೈಲು ಡಿಕ್ಕಿ ಹೊಡೆದು ವೃದ್ದ ಸಾವು
ಉಡುಪಿ: ಪಡುಬಿದ್ರಿ ಪೋಲೀಸ್ ಠಾಣಾ ವ್ಯಾಪ್ತಿಯ ಅದಮಾರು ರೈಲ್ವೇ ಕ್ರಾಸಿಂಗ್ ಬಳಿ ಚಲಿಸುತ್ತಿದ್ದ ರೈಲು ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಎರ್ಮಾಳು ಮೂಡಬೆಟ್ಟು ನಿವಾಸಿ ಶಂಕರ ಪಾಲನ್ (62)ರೈಲ್ವೇ ಹಳಿ ಕ್ರಾಸ್ ಮಾಡುವ ಸಂದರ್ಭ ರೈಲು ಬಡಿದು ದೇಹ ಛಿದ್ರಗೊಂಡು ಮೃತ ಪಟ್ಟಿದ್ದಾರೆ.
ಪಡುಬಿದ್ರಿ ಪೋಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಆಂಬ್ಯುಲೆನ್ಸ್ ಮೂಲಕ ಪಡುಬಿದ್ರಿ ಶವಾಗಾರಕ್ಕೆ ಕೊಂಡೊಯ್ದಿದ್ದಾರೆ.
ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.