ರೋಜರಿ ಕ್ರೆಡೀಟ್ ಸೊಸೈಟಿ ಬಸ್ರೂರು ಶಾಖೆಯ ಸ್ವಂತ ಕಟ್ಟಡಕ್ಕೆ ಶಿಲಾನ್ಯಾಸ
ಕುಂದಾಪುರ : ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಬಸ್ರೂರು ಶಾಖೆಯ ಸ್ವಂತ ಕಟ್ಟಡಕ್ಕೆ ಶಿಲನ್ಯಾಸ ಕಾರ್ಯಕ್ರಮ ಭಾನುವಾರ ಜರುಗಿತು.
ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಬಸ್ರೂರು ಚರ್ಚಿನ ಧರ್ಮಗುರು ವಂ|ಚಾಲ್ರ್ಸ್ ನೊರೊನ್ಹಾ ಜಂಟಿಯಾಗಿ ನೂತನ ಕಟ್ಟಡದ ಭೂಮಿ ಪೂಜೆಯ ಪ್ರಾರ್ಥನಾ ವಿಧಿಗಳನ್ನು ನೆರವೇರಿಸಿದರು.
ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಅಧ್ಯಕ್ಷರಾದ ಜಾನ್ಸನ್ ಡಿ ಆಲ್ಮೆಡಾ, ಉಪಾಧ್ಯಕ್ಷ ಕಿರಣ್ ಲೋಬೊ, ಬಸ್ರೂರು ಶಾಖೆಯ ಉಸ್ತುವಾರಿ, ಸೊಸೈಟಿ ನಿರ್ದೇಶಕ ಫಿಲಿಪ್ ಡಿಕೋಸ್ತಾ, ಶಿಲಾನ್ಯಸ ಗೈದರು. ಈ ಸಂದರ್ಭದಲ್ಲಿ ಸೊಸೈಟಿ ನಿರ್ದೇಶಕರಾದ ವಿನೋದ್ ಕ್ರಾಸ್ಟೊ, ವಿಲ್ಫ್ರೆಡ್ ಮಿನೇಜೆಸ್,ಪ್ರಕಾಶ್ ಲೋಬೊ, ಬ್ಯಾಪ್ಟಿಸ್ಟ್ ಡಾಯಸ್, ಸೊಸೈಟಿಯ ಪ್ರಧಾನ ನಿರ್ವಹಣ ವ್ಯವಸ್ಥಾಪಕ ಪಾಸ್ಕಲ್ ಡಿಸೋಜಾ, ಬಸ್ರೂರು ಚರ್ಚಿನ ಉಪಾಧ್ಯಕ್ಷ ಫ್ಲೈವನ್ ಡಿಸೋಜಾ, ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷೆ ಮೇಬಲ್ ಡಿಸೋಜಾ, ಎಮ್.ಸಿ.ಸಿ.ಬ್ಯಾಂಕಿನ ನಿರ್ದೇಶಕ ಕಿರಣ್ ಕ್ರಾಸ್ತಾ, ರೋಜರಿ ಸೊಸೈಟಿ ಶಾಖಾ ವ್ಯವಸ್ಥಾಪಕರು ಮತ್ತು ಸೊಸೈಟಿ ಸಿಬಂದಿ ವರ್ಗದವರು, ಕಥೊಲಿಕ್ ಸಭಾ ಪದಾಧಿಕಾರಿಗಳು ಮತ್ತು ಇನ್ನಿತರರು ಉಪಸ್ತಿತರಿದ್ದರು. ಸೊಸೈಟಿ ನಿರ್ದೇಶಕ ಜೇಕಬ್ ಡಿಸೋಜಾ ಪ್ರಸ್ತಾವಿಸಿದರು.
ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಬಸ್ರೂರು ಶಾಖೆಯು ಸ್ವಂತ ಕಟ್ಟಡವನ್ನು ಹೊಂದುತ್ತಿರುವ ನಾಲ್ಕನೇ ಶಾಖೆಯಾಗಿದ್ದು ಶೀಘ್ರದಲ್ಲಿ ಬೈಂದೂರು ಶಾಖೆ ಕೂಡ ಸ್ವಂತ ಕಟ್ಟಡವನ್ನು ಹೊಂದಲಿದೆ. ಈಗಾಗಲೇ ಪ್ರಧಾನ ಕಚೇರಿ ಪಡುಕೋಣೆ ಶಾಖೆ ಮತ್ತು ಸಂತೆಕಟ್ಟೆ ಶಾಖೆಗಳು ಸ್ವಂತ ಕಟ್ಟಡವನ್ನು ಹೊಂದಿವೆ.