Spread the love
ರೋಟರಿ ಕ್ಲಬ್ ಶಿರ್ವ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಮೆಲ್ವಿನ್ ಡಿಸೋಜ ಆಯ್ಕೆ
ಉಡುಪಿ: 50ನೇ ವರ್ಷದ ಹೊಸ್ತಿಲಿನಲ್ಲಿರುವ ಶಿರ್ವ ರೋಟರಿ ಕ್ಲಬ್ ಇದರ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಶಿರ್ವ ರೋಟರಿಯ ಮಾಜಿ ಅಧ್ಯಕ್ಷರಾದ ರೋ. ಮೆಲ್ವಿನ್ ಡಿಸೋಜ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಶಿರ್ವ ರೋಟರಿ ಕ್ಲಬ್ ಇದರ ಸಾಪ್ತಾಹಿಕ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು ಸಮಿತಿಯ ಸದಸ್ಯರಾಗಿ ಪುಂಡಲೀಕ ಮರಾಠೆ, ರೊನಾಲ್ಡ್ ಸಿಕ್ವೇರಾ, ಲೂಕಾಸ್ ಡಿಸೋಜ, ರಘುಪತಿ ಐತಾಳ್, ಮೈಕಲ್ ಮಥಾಯಸ್, ಮಥಾಯಸ್ ಲೋಬೊ, ಡಾ|ಎನ್ ಎಸ್ ಶೆಟ್ಟಿ, ಡಾ|ಅರುಣ್ ಹೆಗ್ಡೆ, ಹಸನಬ್ಬ ಶೇಖ್, ದಯಾನಂದ ಶೆಟ್ಟಿ, ಸುನೀಲ್ ಕಾಬ್ರಾಲ್ ನೇಮಕಗೊಂಡಿರುತ್ತಾರೆ ಎಂದು ಶಿರ್ವ ರೋಟರಿ ಕ್ಲಬ್ ಅಧ್ಯಕ್ಷರಾದ ಸುನಿಲ್ ಕಾಬ್ರಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Spread the love