ರೋಹಿಂಗ್ಯ ಮುಸ್ಲಿಂ ನಿರಾಶ್ರಿತರಿಗೆ ಆಶ್ರಯ ನೀಡಿದಲ್ಲಿ ದೇಶದ ಆಂತರಿಕ ಭದ್ರತೆಗೆ ಅಪಾಯ: ಜಗದೀಶ್ ಶೇಣವ
ಮಂಗಳೂರು: ರೋಹಿಂಗ್ಯ ಮುಸ್ಲಿಂ ನಿರಾಶ್ರಿತರಿಗೆ ನೆರವು ನೀಡಲು ಭಾರತ ಇಚ್ಚಿಸಿರುವುದು ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿಯಾಗಿದ್ದು, ಅವರನ್ನು ಕೂಡಲೇ ದೇಶದಿಂದ ಗಡಿಪಾರುಗೊಳಿಸಬೇಕು. ಸಾವಿರಾರು ರೋಹಿಂಗ್ಯ ಮುಸ್ಲಿಂ ನಿರಾಶ್ರಿತರು ಮಯನ್ಮಾರ್ ನಿಂದ ಭಾರತಕ್ಕೆ ನೆರವಿಗಾಗಿ ಆಗಮಸಿದ್ದು ಇದರಿಂದ ದೇಶದ ಭದ್ರತೆಗೆ ಸಮಸ್ಯೆ ಉಂಟಾಗಲಿದೆ ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಅಧ್ಯಕ್ಷ ಜಗದೀಶ್ ಶೇಣವ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಯನ್ಮಾರಿನ ರಾಖಿನ ರಾಜ್ಯದಲ್ಲಿ 82 ಹಿಂದುಗಳನ್ನು ಕೊಂದಿದ್ದಲ್ಲದೆ ಹಲವಾರು ಮಂದಿಯನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ.ಒಂದು ವೇಳೆ ರೋಹಿಂಗ್ಯ ಮುಸ್ಲಿಂ ನಿರಾಶ್ರಿತರಿಗೆ ದೇಶದಲ್ಲಿ ಆಶ್ರಯನೀಡಿದಲ್ಲಿ ಮುಂದಿನ ದಿನಗಳಲ್ಲಿ ಕೋಮು ಗಲಭೇಗೆ ಕಾರಣವಾಗುವುದಲ್ಲದೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಲು ಕೂಡ ಕಾರಣವಾಗಲಿದೆ.
ಈಗಾಗಲೇ ದೇಶದಲ್ಲಿ ಸುಮಾರು 2 ಕೋಟಿಯಷ್ಟು ಅಕ್ರಮ ಬಾಂಗ್ಲಾ ದೇಶಿಯರು ವಾಸಿಸುತ್ತಿದ್ದು ಇದರಿಂದ ಹಲವಾರು ಸಮಸ್ಯೆಗಳನ್ನು ಭಾರತ ಎದುರಿಸುತ್ತಿದೆ. ಭಾರತ ರೋಹಿಂಗ್ಯ ಮುಸ್ಲಿಂ ನಿರಾಶ್ರಿತರಿಗೆ ನೆರವು ನೀಡುವ ಕುರಿತು ಯಾವುದೇ ರೀತಿಯ ಒಪ್ಪಂದವನ್ನು ಮಾಡಿಕೊಂಡಿಲ್ಲ ಆದ್ದರಿಂದ ಅವರಿಗೆ ನೇರವು ನೀಡಬೇಕಾದ ಅಗತ್ಯತೆ ಇಲ್ಲ. ಬೇಕಾದರೆ ಬಾಂಗ್ಲಾ ದೇಶ ಅಥವಾ ಪಾಕಿಸ್ತಾನ ರೋಹಿಂಗ್ಯ ಮುಸ್ಲಿಂ ನಿರಾಶ್ರಿತರಿಗೆ ಆಶ್ರಯ ನೀಡಲಿ. ಈಗಾಗಲೇ ದೇಶ ಹಲವಾರು ರೀತಿಯ ಕೋಮು ಸಂಬಂಧಿತ ಹಿಂಸೆಗಳನ್ನು ಅನುಭವಿಸುತ್ತಿದ್ದು ಒಂದು ವೇಳೆ ರೋಹಿಂಗ್ಯ ಮುಸ್ಲಿಂ ನಿರಾಶ್ರಿತರಿಗೆ ಆಶ್ರಯ ನೀಡಿದಲ್ಲಿ ಅವರಿಂದ ದೇಶದ ಆಂತರಿಕ ಭದ್ರತೆಗೆ ಸಮಸ್ಯೆ ಉಂಟಾಗಲಿದೆ ಎಂದರು.
ಗೋಪಾಲ್ ಕುತ್ತಾರ್, ಪ್ರದೀಪ್ ಪಂಪ್ ವೆಲ್, ಪ್ರವೀಣ್ ಕುತ್ತಾರ್, ರಾಜೇಶ್ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
SEND THEM TO PAKISTAN AND AFGHANISTAN WHERE THEY LIVE HAPPILY WITH THEIR SIMILAR IDEOLOGIES !