ರೋಹಿತ್ ಕೊಲೆ ಪ್ರಕರಣದ ಸಾಕ್ಷಿಗಳ ಕೊರತೆಯಿಂದ ಆರೋಪಿಗಳ ದೋಷ ಮುಕ್ತ
ಮಂಗಳೂರು: ಮಂಗಳೂರಿನ , ಕೆ.ಎಸ್. ಆರ್.ಟಿ .ಸಿ ಬಸ್ ನಿಲ್ದಾಣದ ಬಳಿ ದಿನಾಂಕ 8-05 -2016 ರಂದು ರೋಹಿತ್ ಕೊಲೆ ಹಾಗು ಆತನ ಸ್ನೇಹಿತ ರೋಷನ್ ರೋಚ್ ಕೊಲೆ ಯತ್ನ ಪ್ರಕರಣದ 4 ಜನ ಆರೋಪಿಗಳಾದ ಜಗದೀಶ್ ,ಶಿವಾಜಿ , ಗೌತಮ್ ಚಂದ್ರ , ಮತ್ತು ಯಶವಂತ ಆರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ದಿನಾಂಕ 13 -09 -2019 ರಂದು ಸೂಕ್ತ ಸಾಕ್ಷಿಗಳ ಕೊರತೆಯಿಂದ ದೋಷ ಮುಕ್ತ ಗೊಳಿಸಿ ಬಿಡುಗಡೆಗೆ ಆದೇಶ ನೀಡಿದೆ .
ಘಟನೆ ವಿವರ :- ಮಂಗಳೂರಿನ, ಕೆ.ಎಸ್. ಆರ್.ಟಿ .ಸಿ ಬಸ್ ನಿಲ್ದಾಣದ ಬಳಿ ದಿನಾಂಕ 8-05 -2016 ರಂದು ಸಂಜೆ ಸುಮಾರು 4 .30 ಗಂಟೆಗೆ ತನ್ನ ಸೇಹಿತನ ಜೊತೆ ರೋಹಿತ್ ಏ .ಜೆ ಆಸ್ಪತ್ರೆಗೆ ತೆರಳಲು ಆಟೋ ರಿಕ್ಷಾಗಾಗಿ ಕಾಯುತ್ತಿರುವಾಗ , ಬಿಜೈ ಚರ್ಚ್ ರಸ್ತೆ ಕಡೆಯಿಂದ ಆಟೋ ರಿಕ್ಷಾದಲ್ಲಿ ಬಂದ ಆರೋಪಿಗಳು ಜಗದೀಶ್ ,ಶಿವಾಜಿ , ಗೌತಮ್ ಚಂದ್ರ , ಮತ್ತು ಯಶವಂತ ಚಾಕುವಿನಿಂದ ರೋಹಿತ್ ನ ಹೊಟ್ಟೆಬಾಗಕ್ಕೆ ತಿವಿದು ಹಾಗು ಮರದ ಸೊಂಟೆ ಮತ್ತು ಕಲ್ಲುಗಳಿಂದ ಹೊಡೆದು ಕೊಲೆ ಮಾಡಿರುತ್ತಾರೆ .
ಅದಲ್ಲದೆ ಆತನ ಸ್ನೆಹಿತ ನಾದ ರೋಷನ್ ರೋಚ್ ನಿಗೂ ಮರದ ಸೊಂಟೆ ಮತ್ತು ಕಲ್ಲುಗಳಿಂದ ತೀವ್ರಗಾಯ ಮಾಡಿ ಕೊಲೆ ಪ್ರಯತ್ನ ನಡೆಸಿ ಪರಾರಿಯಾಗಿದ್ದರು . ಈ ಪ್ರಕರಣದ ಸಂಬಂಧ 4 ಜನ ಆರೋಪಿಗಳನ್ನು ಬರ್ಕೆ ಪೊಲೀಸರು ಕಾನೂನಿನ ಪ್ರಕಾರ ಬಂಧಿಸಿ ಐಪಿಸಿ ಕ ಲಂ 302 , 307 ,324 ,34. ರಲ್ಲಿ ಪ್ರಕರಣ ಧಾಖಲಿಸಿದ್ದರು
ನ್ಯಾಯಾಲಯವು ವಾದ ಪ್ರತಿವಾದಗಳನ್ನು ಆಲಿಸಿದ ನಂತರ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಕೊರತೆಯಿಂದ ಅರೂಪಿಗಳನ್ನು ಈ ಪ್ರಕರಣದಿಂದ ಖುಲಾಸೆ ಗೊಳಿಸಲಾಯಿತು .ಆರೋಪಿಗಳ ಪರವಾಗಿ ಮಂಗಳೂರಿನ ಖ್ಯಾತ ವಕೀಲರಾದ , ಶ್ರೀ ರಾಘವೇಂದ್ರ ರಾವ್ , ಶ್ರೀಮತಿ ಕೆ. ಗೌರಿ ಶೆಣೈ , ಸುಪ್ರಿಯಾ ಆಚಾರ್ಯ ವಾದಿಸಿದ್ದರು