Home Mangalorean News Kannada News ರೋಹಿತ್ ಕೊಲೆ ಪ್ರಕರಣದ ಸಾಕ್ಷಿಗಳ ಕೊರತೆಯಿಂದ ಆರೋಪಿಗಳ ದೋಷ ಮುಕ್ತ

ರೋಹಿತ್ ಕೊಲೆ ಪ್ರಕರಣದ ಸಾಕ್ಷಿಗಳ ಕೊರತೆಯಿಂದ ಆರೋಪಿಗಳ ದೋಷ ಮುಕ್ತ

Spread the love

ರೋಹಿತ್ ಕೊಲೆ ಪ್ರಕರಣದ ಸಾಕ್ಷಿಗಳ ಕೊರತೆಯಿಂದ ಆರೋಪಿಗಳ ದೋಷ ಮುಕ್ತ

ಮಂಗಳೂರು:  ಮಂಗಳೂರಿನ , ಕೆ.ಎಸ್. ಆರ್.ಟಿ .ಸಿ ಬಸ್ ನಿಲ್ದಾಣದ ಬಳಿ ದಿನಾಂಕ 8-05 -2016 ರಂದು ರೋಹಿತ್ ಕೊಲೆ ಹಾಗು ಆತನ ಸ್ನೇಹಿತ ರೋಷನ್ ರೋಚ್ ಕೊಲೆ ಯತ್ನ ಪ್ರಕರಣದ 4 ಜನ ಆರೋಪಿಗಳಾದ ಜಗದೀಶ್ ,ಶಿವಾಜಿ , ಗೌತಮ್ ಚಂದ್ರ , ಮತ್ತು ಯಶವಂತ ಆರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ದಿನಾಂಕ 13 -09 -2019 ರಂದು ಸೂಕ್ತ ಸಾಕ್ಷಿಗಳ ಕೊರತೆಯಿಂದ ದೋಷ ಮುಕ್ತ ಗೊಳಿಸಿ ಬಿಡುಗಡೆಗೆ ಆದೇಶ ನೀಡಿದೆ .

ಘಟನೆ ವಿವರ :- ಮಂಗಳೂರಿನ, ಕೆ.ಎಸ್. ಆರ್.ಟಿ .ಸಿ ಬಸ್ ನಿಲ್ದಾಣದ ಬಳಿ ದಿನಾಂಕ 8-05 -2016 ರಂದು ಸಂಜೆ ಸುಮಾರು 4 .30 ಗಂಟೆಗೆ ತನ್ನ ಸೇಹಿತನ ಜೊತೆ ರೋಹಿತ್ ಏ .ಜೆ ಆಸ್ಪತ್ರೆಗೆ ತೆರಳಲು ಆಟೋ ರಿಕ್ಷಾಗಾಗಿ ಕಾಯುತ್ತಿರುವಾಗ , ಬಿಜೈ ಚರ್ಚ್ ರಸ್ತೆ ಕಡೆಯಿಂದ ಆಟೋ ರಿಕ್ಷಾದಲ್ಲಿ ಬಂದ ಆರೋಪಿಗಳು ಜಗದೀಶ್ ,ಶಿವಾಜಿ , ಗೌತಮ್ ಚಂದ್ರ , ಮತ್ತು ಯಶವಂತ ಚಾಕುವಿನಿಂದ ರೋಹಿತ್ ನ ಹೊಟ್ಟೆಬಾಗಕ್ಕೆ ತಿವಿದು ಹಾಗು ಮರದ ಸೊಂಟೆ ಮತ್ತು ಕಲ್ಲುಗಳಿಂದ ಹೊಡೆದು ಕೊಲೆ ಮಾಡಿರುತ್ತಾರೆ .

ಅದಲ್ಲದೆ ಆತನ ಸ್ನೆಹಿತ ನಾದ ರೋಷನ್ ರೋಚ್ ನಿಗೂ ಮರದ ಸೊಂಟೆ ಮತ್ತು ಕಲ್ಲುಗಳಿಂದ ತೀವ್ರಗಾಯ ಮಾಡಿ ಕೊಲೆ ಪ್ರಯತ್ನ ನಡೆಸಿ ಪರಾರಿಯಾಗಿದ್ದರು . ಈ ಪ್ರಕರಣದ ಸಂಬಂಧ 4 ಜನ ಆರೋಪಿಗಳನ್ನು ಬರ್ಕೆ ಪೊಲೀಸರು ಕಾನೂನಿನ ಪ್ರಕಾರ ಬಂಧಿಸಿ ಐಪಿಸಿ ಕ ಲಂ 302 , 307 ,324 ,34. ರಲ್ಲಿ ಪ್ರಕರಣ ಧಾಖಲಿಸಿದ್ದರು

ನ್ಯಾಯಾಲಯವು ವಾದ ಪ್ರತಿವಾದಗಳನ್ನು ಆಲಿಸಿದ ನಂತರ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಕೊರತೆಯಿಂದ ಅರೂಪಿಗಳನ್ನು ಈ ಪ್ರಕರಣದಿಂದ ಖುಲಾಸೆ ಗೊಳಿಸಲಾಯಿತು .ಆರೋಪಿಗಳ ಪರವಾಗಿ ಮಂಗಳೂರಿನ ಖ್ಯಾತ ವಕೀಲರಾದ , ಶ್ರೀ ರಾಘವೇಂದ್ರ ರಾವ್ , ಶ್ರೀಮತಿ ಕೆ. ಗೌರಿ ಶೆಣೈ , ಸುಪ್ರಿಯಾ ಆಚಾರ್ಯ ವಾದಿಸಿದ್ದರು


Spread the love

Exit mobile version