Home Mangalorean News Kannada News ರೌಡಿ ಮಂಕಿ ಸ್ಟ್ಯಾಂಡ್ ವಿಜಯ ಸಹಪಾಠಿ ಮೆಲ್ರಿಕ್ ಡಿಸೋಜಾ ಕೊಲೆ

ರೌಡಿ ಮಂಕಿ ಸ್ಟ್ಯಾಂಡ್ ವಿಜಯ ಸಹಪಾಠಿ ಮೆಲ್ರಿಕ್ ಡಿಸೋಜಾ ಕೊಲೆ

Spread the love

ರೌಡಿ ಮಂಕಿ ಸ್ಟ್ಯಾಂಡ್ ವಿಜಯ ಸಹಪಾಠಿ ಮೆಲ್ರಿಕ್ ಡಿಸೋಜಾ ಕೊಲೆ

ಮಂಗಳೂರು: ಕ್ರಿಮಿನಲ್ ಗ್ಯಾಂಗಿನೊಂದಿಗೆ ಸಂಬಂಧ ಹೊಂದಿದ್ದ 26 ವರ್ಷ ವಯಸ್ಸಿನ ಯುವಕನೋರ್ವನನ್ನು ಕ್ರಿಸ್ಮಸ್ ಹಿಂದಿನ ದಿನ ಭೀಕರವಾಗಿ ಕೊಲೆಗೈದಿದ್ದಾರೆ.

ಮೃತನನ್ನು ಗೋರಿಗುಡ್ಡ ನಿವಾಸಿ ಮೆಲ್ರಿಕ್ ಡಿಸೋಜಾ ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ ಡಿಸೆಂಬರ್ 25 ರ ಮಧ್ಯರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ಮೆಲ್ರಿಕ್ ನನ್ನು ಆತನ ಮನೆಯಾದ ಗೋರಿಗುಡ್ಡದಲ್ಲಿ ಭೀಕರ ಆಯುಧಗಳಿಂದ ಕೊಲೆಗೈಯ್ಯಲಾಗಿದೆ. ಮೃತ ಮೆಲ್ರಿಕ್ ಕ್ರಿಮಿನಲ್ ವ್ಯಕ್ತಿತ್ತದ ಹಿನ್ನಲೆಯುಳ್ಳವರಾಗಿದ್ದು, ರೌಡಿ ಮಂಕಿ ಸ್ಟ್ಯಾಂಡ್ ವಿಜಯ್ ಯಾನೆ ವಿಜಯ ಎಂಬವನೊಂದಿಗೆ ಸಂಬಂಧ ಹೊಂದಿದ್ದ. 2016 ರಲ್ಲಿ ಮಾರ್ನೆಮಿಕಟ್ಟೆಯಲ್ಲಿ ನಡೆದ ಸಂದೀಪ್ ಶೆಟ್ಟಿ ಕೊಲೆಯತ್ನದಲ್ಲಿ ಬಂಧಿಸಲ್ಪಟ್ಟಿದ್ದನು.

ಮೃತ ಶರೀರವನ್ನು ಪೋಸ್ಟ್ ಮಾರ್ಟ್ ಗಾಗಿ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.


Spread the love

Exit mobile version