ಲಂಚ ಸ್ವೀಕಾರ: ವಿಶೇಷ ಭೂಸ್ವಾಧಿನಾಧಿಕಾರಿ ಗಾಯತ್ರಿ ನಾಯಕ್ ಎಸಿಬಿ ಬಲೆಗೆ
ಮಂಗಳೂರು: ಕಚೇರಿಯಲ್ಲಿ ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂಸ್ವಾಧೀನಾಧಿಕಾರಿ ಗಾಯತ್ರಿ ನಾಯಕ್ ಅವರು ಭ್ರಷ್ಟಾಚಾರ ನಿಗ್ರಹ ದಳ ಪೋಲಿಸರಿಂದ ಬಂಧನಕ್ಕೊಳಗಾದ ಘಟನೆ ವರದಿಯಾಗಿದೆ.
ಕಾಸರಗೋಡಿನ ಯೋಗಿಶ್ ಎಂಬವರು ನೀಡಿದ ದೂರಿನಂತೆ ಬುಧವಾರ ನಗರದ ಮಿನಿ ವಿಧಾನಸೌಧದ ಬಳಿಯ ವಿಶೇಷ ಭೂಸ್ವಾಧೀನಾಧಿಕಾಇಯ ಕಚೇರಿಗೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಗಾಯತ್ರಿ ನಾಯಕ್ ಅವರನ್ನು ವಶಕ್ಕೆ ತೆಗೆದುಕೊಂಡರು.
ಯೋಗಿಶ್ ಅವರಿಗೆ ದೊರೆತ ಭೂಪರಿಹಾರದ ಮೊತ್ತದಲ್ಲಿ 16 ಲಕ್ಷ ರೂ ಲಂಚ ನೀಡಬೇಕೆಂದು ಗಾಯತ್ರಿ ನಾಯಕ್ ಬೇಡಿಕೆ ಮುಂದಿಟ್ಟಿದ್ದರು, ಅದರಂತೆ ಈಗಾಗಲೇ 1.30 ಲಕ್ಷ ರೂಗಳನ್ನು ಯೋಗಿಶ್ ನೀಡಿದ್ದರು ಎನ್ನಲಾಗಿದೆ. ಆದರೂ ಗಾಯತ್ರಿ ನಾಯಕ್ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಯೋಗಿಶ್ ಎಸಿಬಿ ಪೋಲಿಸರಿಗೆ ದೂರು ನೀಡಿದ್ದರೆನ್ನಲಾಗಿದೆ.
ದೂರಿನಂತೆ ಭ್ರಷ್ಟಾಚಾರ ನಿಗ್ರಹ ದಳದ ಪೋಲಿಸರು ಬುಧವಾರ ಕಾರ್ಯಾಚರಣೆ ನಡೆಸಿದ್ದು ಗಾಯತ್ರಿ ನಾಯಕ್ ಅವರು ಯೋಗೀಶ್ ಅವರಿಂದ ರೂ 20000 ಲಂಚ ಸ್ವಿಕರೀಸುತ್ತಿದ್ದ ವೇಳೆ ತಂಡ ಧಾಳಿ ನಡೆಸಿ ಗಾಯತ್ರಿ ಅವರನ್ನು ವಶಕ್ಕೆ ಪಡೆದಿದೆ.
ಗಾಯತ್ರಿ ನಾಯಕ್ ಈ ಹಿಂದೆ ಕುಂದಾಪುರ ತಹಶೀಲ್ದಾ ಆಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಅವರನ್ನು ರಾಷ್ಟ್ರೀಯ ಹೆದ್ದಾರಿ 169ರ ವಿಶೇಷ ಭೂಸ್ವಾಧೀನಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು ಅಲ್ಲದೆ ಕೆಲವು ವೇಳೆ ಅವರಿಗೆ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯ ನಿರ್ವಹಣಾಧಿಕಾಇರಯಾಗಿ ಹೆಚ್ಚುವರಿ ಹುದ್ದೆನೀಡಲಾಗಿತ್ತು.