ಲಕ್ಷದೀಪೋತ್ಸವದ ಪ್ರಯುಕ್ತ  ಮನಸೂರೆಗೊಂಡ ನೃತ್ಯ ವೈಭವ  

Spread the love

ಲಕ್ಷದೀಪೋತ್ಸವದ ಪ್ರಯುಕ್ತ  ಮನಸೂರೆಗೊಂಡ ನೃತ್ಯ ವೈಭವ  

ಉಜಿರೆ : ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣವು ವಿವಿಧ ಬಗೆಯ ನೃತ್ಯರೂಪಗಳಿಗೆ ಶುಕ್ರವಾರ ಸಾಕ್ಷಿಯಾಯಿತು. ಲಕ್ಷದೀಪೋತ್ಸವದ ಪ್ರಯುಕ್ತ ಬೆಂಗಳೂರಿನ ಹೆಸರಾಂತ ’ರಾಧಾಕಲ್ಪ ಡ್ಯಾನ್ಸ್’ ಕಂಪನಿಯ ಖ್ಯಾತ ಕಲಾವಿದೆ ರುಕ್ಮಿಣಿ ವಿಜಯಕುಮಾರ್ ಮತ್ತು ತಂಡ ಪ್ರಸ್ತುತಪಡಿಸಿದ ನೃತ್ಯ ಹಲವರ ಮನಸೂರೆಗೊಂಡಿತು.

ಎನ್. ಕೇಶವನ್, ನಂದಕುಮಾರ್, ಪ್ರಸನ್ನಕುಮಾರ್, ಪ್ರಾದೇಶ್ ಆಚಾರ್, ಅನನ್ಯನಾರಾಯಣ್,ನಂದಗೋಕುಲ್ ಕಾರ್ತಿಕ್ ಹಿಮ್ಮೇಳದ ನೆರವಿನೊಂದಿಗಿನ ನೃತ್ಯವೈಖರಿ ಶಿವಭಕ್ತಿಯ ಶಕ್ತಿಯನ್ನು ಪರಿಚಯಿಸುವಲ್ಲಿ ಯಶಸ್ವಿಯಾಯಿತು.

ರುಕ್ಮಿಣಿ ವಿಜಯಕುಮಾರ್ ಅವರೊಂದಿಗೆ ಸಂಧ್ಯಾ ಮುರಳೀಧರನ್, ಕೃತಿಕಾ, ದೃದರ್ಷಿನಿ, ಅನುಷ,  ಅಶೋಕ್ ವರ್ಧಿನಿ, ನಿಧಿ ನೃತ್ಯಸಾಥ್ ನೀಡಿದರು. ಶಿವನ ಶೋಕ್ಲದಿಂದ ಪ್ರಾರಂಭವಾದ ಮನಮೋಹಕ ನೃತ್ಯ ಕೊನೆಗೊಂಡಿದ್ದು, ರಾಮನವಮಿಯಲ್ಲಿ. ಗಣೇಶ ದೇವರ ಶ್ಲೋಕವನ್ನು ನೃತ್ಯದ ರೂಪದಲ್ಲಿ ಪ್ರದರ್ಶಿಸಿದರು.

ಶಂಕರಾಭರಣ ನೃತ್ಯ ರೂಪಕ ಓಂ ನಮಃ ಶಿವಾಯ ಎಂಬ ವಾಕ್ಯದಿಂದ ಭಕ್ತಿಯಿಂದ ಆರಾಧಿಸುವ ನೃತ್ಯರೂಪಕ. ಕೈಗಳನ್ನು ಪಳಗಿಸುವುದು, ದೀಪಗಳನ್ನು ಹಚ್ಚಿ ಶಿವನಿಗೆ ಆರತಿ ಬೆಳಗಿಸಿದ್ದರು. ಪದಗಳನ್ನು ಮುಖದ ಭಾವನೆಯ ಮುಖಾಂತರ ತೋರ್ಪಡಿಸಿದ್ದರು. ಕಥಾನಕಗಳು ದೃಶ್ಯರೂಪಕಗಳಾಗಿ ಕಂಡುಬಂದವು.

ರಾಗಕ್ಕೆ ತಕ್ಕ ತಾಳ, ತಾಳಕ್ಕೆ ತಕ್ಕ ಹೆಜ್ಜೆಯ ಮೋಡಿ ಎಲ್ಲರ ಕಣ್ಮನ ಸೆಳೆಯಿತು. ವೀರಭದ್ರನ ರೌದ್ರಾವತಾರವನ್ನು ನೃತ್ಯರೂಪದಲ್ಲಿ ತೋರ್ಪಡಿಸಿದ್ದರು.. ನೃತ್ಯದಲ್ಲಿ ಹಾಸ್ಯ, ಗಾಂಭೀರ್ಯತೆಗೆ ಜಾಗವಿತ್ತು. ಭಗೀರಥನ ತಪಸ್ಸನ್ನು ಭಂಗಮಾಡುವ ಮನಮೋಹಕ ದೃಶ್ಯ ಜನರ ಗಮನ ಸೆಳೆದವು.  ನವರಸಗಳನ್ನು ನೃತ್ಯರೂಪಕದಲ್ಲಿ ಪ್ರಕಟಮಾಡಿದ್ದರು. ರಾಮೋ ಹೋ ರಾಮ,ದೀಪಾವಳಿ ಸಂದರ್ಭದಲ್ಲಿ ರಾಮನವಮಿಯ ಆಚರಣೆ, ರಾಮನ ಪಟ್ಟಾಭೀಷೇಕದ ದೃಶ್ಯ ನೃತ್ಯಬಂಧದಲ್ಲಿ ರೂಪುಗೊಂಡಿತು. ಇಡೀ ಸಭಾಂಗಣವನ್ನೆ ಬೆಕ್ಕಸ ಬೆರಗಾಗುವಂತೆ ಮಾಡಿತ್ತು ಈ ನೃತ್ಯ ತಂಡ.


Spread the love