ಲಯನ್ಸ್ ಪ್ರಾಂತೀಯ ಸಮ್ಮೇಳನದಲ್ಲಿ ಫ್ಯಾಶನ್ ಶೋ ಪ್ರದರ್ಶನ ನೀಡಿದ ಮಂಗಳಮುಖಿಯರು

Spread the love

ಲಯನ್ಸ್ ಪ್ರಾಂತೀಯ ಸಮ್ಮೇಳನದಲ್ಲಿ ಫ್ಯಾಶನ್ ಶೋ ಪ್ರದರ್ಶನ ನೀಡಿದ ಮಂಗಳಮುಖಿಯರು

ಉಡುಪಿ: ಲಯನ್ಸ್ ಜಿಲ್ಲೆ317ಸಿ ಇದರ ಜಿಲ್ಲಾ ಸಮಾವೇಶ ಶಾಸ್ತ್ರೋಕ್ತ ಸ್ಪರ್ಷ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲಿನಲ್ಲಿ ಶನಿವಾರ ಜರುಗಿತು.

ಸಮಾವೇಶವನ್ನು ಪ್ರಾಂತೀಯ ಅಧ್ಯಕ್ಷರ ತಾಯಿ ಪ್ರೇಮಲತಾ ಹಾಗೂ ಪತ್ನಿ ಶರ್ಮಿಲಾ ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ 12 ಲಯನ್ಸ್ ಕ್ಲಬ್ ಘಟಕಗಳು ತಮ್ಮ ಬ್ಯಾನರ್ ಪ್ರದರ್ಶನ ಮಾಡಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪರಿವರ್ತನ ಟ್ರಾನ್ಸ್ ಕ್ವೀನ್ 2018 ಇದರ ವಿಜೇತೆ ಸಂಜನಾ, ದ್ವಿತೀಯ ಬಹುಮಾನ ವಿಜೇತೆ ಶ್ರೀನಿಧಿ, ರೇಖಾ ಪ್ರೀಯಾ ಮತ್ತು ಸಂದ್ಯಾ ರ್ಯಾಂಪ್ ಮೇಲೆ ನಡೆದು ಪ್ರೇಕ್ಷರನ್ನು ಮುದಗೊಳಿಸಿದರು.

ಈ ವೇಳೆ ಮಾತನಾಡಿದ ಶಶಿಕುಮಾರ್ ಶೆಟ್ಟಿ ಅವರು ಇಂದು ನಾವು ಮಂಗಳೂರಿನಿಂದ ಮಂಗಳಮುಖಿಯರನ್ನು ಕರೆಸಿದ್ದು ಅವರು ಸಹ ನಮ್ಮ ನಿಮ್ಮಂತೆಯೇ ಮಾನವರು . ಅವರಿಗೆ ಇಂತಹ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರಿಗೆ ಸಮಾಜದ ಮುಖ್ಯವಾಹಿನಿಗೆ ತರುವುದರ ಮೂಲಕ ಅವರ ಬದುಕನ್ನು ಹಸನು ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರಲ್ಲಿಯೂ ಸಹ ಹಲವಾರು ಪ್ರತಿಭೆಗಳಿದ್ದು ಅದನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆ ಒದಗಿಸಬೇಕಾಗಿದೆ. ಇಂತಹ ಮಂಗಳಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವುದಕ್ಕಾಗಿ ಪರಿವರ್ತನ ಟ್ರಸ್ಟ್ ಸ್ಥಾಪಿಸಿ ಈ ಮೂಲಕ ಅವರಿಗೊಂದು ಬದುಕು ರೂಪಿಸಲು ಪ್ರಯತ್ನಿಸುತ್ತಿರುವ ವಾಯ್ಲೆಟ್ ಪಿರೇರಾ ಅವರು ನಿಜಕ್ಕೂ ಅಭಿನಂದನಾರ್ಹರು.

ಇದೇ ವೇಳೆ ಮಂಗಳಮುಖಿ ಸಂಜನಾ ತಮ್ಮ ಜೀವನದ ಕಥೆಯನ್ನು ವಿವರಿಸಿದರು. ಗಣರಾಜ್ಯೋತ್ಸವದ ಪ್ರಯುಕ್ತ ಪತ್ರಕರ್ತ ಶ್ರೀಕಾಂತ್ ಶೆಟ್ಟಿ, ಪ್ರಾಧ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ವಿಚಾರ ಮಂಡಿಸಿದರು.

ಈ ವೇಳೆ ಸಾಧಕರಾದ ಜಯಕರ ಶೆಟ್ಟಿ ಇಂದ್ರಾಳಿ, ಮನೋಹರ್ ಶೆಟ್ಟಿ, ತಾರಾನಾಥ ಮೇಸ್ತರನ್ನು ಸನ್ಮಾನಿಸಲಾಯಿತು.


Spread the love