Home Mangalorean News Kannada News ಲವಿ ಗಂಜಿಮಠ ಹಾಗೂ ‘ಆಮ್ಚೆಂ ಶೆತ್’ ಪತ್ರಿಕೆಗೆ ‘ರಾಕ್ಣೊ’ ಪ್ರಶಸ್ತಿಗಳು

ಲವಿ ಗಂಜಿಮಠ ಹಾಗೂ ‘ಆಮ್ಚೆಂ ಶೆತ್’ ಪತ್ರಿಕೆಗೆ ‘ರಾಕ್ಣೊ’ ಪ್ರಶಸ್ತಿಗಳು

Spread the love

ಲವಿ ಗಂಜಿಮಠ ಹಾಗೂ ‘ಆಮ್ಚೆಂ ಶೆತ್’ ಪತ್ರಿಕೆಗೆ ‘ರಾಕ್ಣೊ’ ಪ್ರಶಸ್ತಿಗಳು

ಕೊಂಕಣಿ ಭಾಷೆಯ ಪ್ರಸಿದ್ಧ ಲೇಖಕಿಯಾಗಿರುವ ಲವಿ ಗಂಜಿಮಠ ರವರಿಗೆ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ 2024’ ಹಾಗೂ ‘ಧರ್ಮಕೇಂದ್ರದ ಅತ್ಯುತ್ತಮ ಪತ್ರಿಕೆ 2024’ ವನ್ನು ಬಜ್ಪೆ ಧರ್ಮ ಕೇಂದ್ರದ ಪತ್ರಿಕೆ ‘ಆಮ್ಚೆಂ ಶೆತ್’ ಎಂಬ ಪತ್ರಿಕೆಗೆ ಸೆಪ್ಟೆಂಬರ್ 01 ರಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಂಗಳೂರು ಧರ್ಮಾಧ್ಯಕ್ಷರ ನಿವಾಸದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಕ್ಷೇತ್ರದ ಧರ್ಮಧ್ಯಕ್ಷರಾಗಿರುವ ಅತಿ ವಂದನೀಯ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾರವರು ಪ್ರಶಸ್ತಿ ಪ್ರದಾನ ಮಾಡಿದರು.

‘ರಾಕ್ಣೊ’ ವಾರಪತ್ರಿಕೆಯ ಸಂಪಾದಕರಾಗಿರುವ ವಂದನೀಯ ರೂಪೇಶ್ ಮಾಡ್ತಾರವರು ಪ್ರಶಸ್ತಿಯ ಹಾಗೂ ಸಮಾವೇಶದ ಉದ್ದೇಶಗಳನ್ನು ವಿವರಿಸಿದರು. ‘ಕೊಂಕಣಿ ಭಾಷೆಗೆ ಅದರದ್ದೇ ಆದ ದಿಗಂತವಿದೆ. ಈ ಭಾಷೆಗೆ ಬೆಳೆಯಲು ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿರುವ ‘ರಾಕ್ಣೊ’ ಪತ್ರಿಕೆಗೆ ಸಹಕಾರ ಕೋರುತ್ತೇನೆ. ಪ್ರಶಸ್ತಿ ವಿಜೇತರಿಗೆ ಮತ್ತು ಎಲ್ಲಾ ಸಾಹಿತಿಗಳಿಗೆ ಅಭಿನಂದಿಸುತ್ತೇನೆ ‘ ಎಂದು ಬಿಷಪ್ ಆಶೀರ್ವಚನ ನೀಡಿದರು.

ಡಾ. ಎಡ್ವರ್ಡ್ ನಜ್ರೆತ್ ರವರು ಪ್ರಶಸ್ತಿ ವಿಜೇತರ ಪರಿಚಯ ಮಾಡಿಕೊಟ್ಟರು. ನಂತರ ನಡೆದ ಕೊಂಕಣಿ ಲೇಖಕರ ಸಮಾವೇಶದಲ್ಲಿ ಪ್ರಸಿದ್ಧ ಕೊಂಕಣಿ ಕವಿ ಆಂಡ್ರ‍್ಯೂ ಎಲ್ ಡಿಕೂನ್ಹಾರವರು ಕವಿತೆ ಮತ್ತು ಕಾವ್ಯಾತ್ಮಕ ಬದುಕು ಎಂಬ ಬಗ್ಗೆ, ಲವೀ ಗಂಜಿಮಠರವರು ಪತ್ರಿಕೆಯನ್ನು ಸಂಪಾದಸುವ ಬಗ್ಗೆ ಹಾಗೂ ‘ನಮಾನ್ ಬಾಳಕ್ ಜೆಜು’ ಪತ್ರಿಕೆಯ ಸಂಪಾದಕರಾಗಿರುವ ವಂದನೀಯ ಐವನ್ ಡಿಸೋಜûರವರು ಓದುಗರ ಪತ್ರವನ್ನು ಬರೆಯುವ ಬಗ್ಗೆ ವಿವರಿಸಿದರು. ನಂತರ ವಂದನೀಯ ರೂಪೇಶ್ ಮಾಡ್ತಾರವರು ಸಂವಾದವನ್ನು ನಡೆಸಿಕೊಟ್ಟರು.

ಕಾರ್ಯಕ್ರಮವನ್ನು ಸಂಪಾದಕ ಮಂಡಳಿಯ ಸದಸ್ಯರಾಗಿರುವ ಫ್ರಾನ್ಸಿಸ್ ಡಿ ಕೂನ್ಹಾರವರು ನಿರ್ವಹಿಸಿದರು. ಸಂಪಾದಕ ಮಂಡಳಿಯ ಸದಸ್ಯರಾಗಿರುವ ಪ್ರಮೋದ್ ಹೊಸ್ಪೆಟ್ , ಡಾ. ಎಡ್ವರ್ಡ್ ನಜ್ರೆತ್ ಹಾಗೂ ಲವೀ ಗಂಜಿಮಠ ಇವರು ಸಹಕರಿಸಿದರು. ಹಿರಿಯ ಸಾಹಿತಿಗಳಾದ ವಂದನೀಯ ಅಲ್ಫೋನ್ಸ್ ಡಿಲೀಮಾ, ಡಾಲ್ಫಿ ಕಾಸ್ಸಿಯ, ಹೆಚ್ ಆರ್ ಆಳ್ವ ಅಲ್ಲದೆ 70 ಹೆಸರಾಂತ ಬರಹಗಾರರು ಭಾಗವಹಿಸಿದರು.


Spread the love

Exit mobile version