ಲವ್ ಜೆಹಾದ್ ಭಾಗವಾಗಿ ಕಾರ್ಕಳದಲ್ಲಿ ಪೈಶಾಚಿಕ ಕೃತ್ಯವೆಸಗಿದ ಹಿಜಾಬ್ ಬೆಂಬಲಿತ ಮತಾಂಧ ಶಕ್ತಿಗಳನ್ನು ತಕ್ಷಣ ಬಂಧಿಸಿ : ಯಶ್ಪಾಲ್ ಸುವರ್ಣ  

Spread the love

ಲವ್ ಜೆಹಾದ್ ಭಾಗವಾಗಿ ಕಾರ್ಕಳದಲ್ಲಿ ಪೈಶಾಚಿಕ ಕೃತ್ಯವೆಸಗಿದ ಹಿಜಾಬ್ ಬೆಂಬಲಿತ ಮತಾಂಧ ಶಕ್ತಿಗಳನ್ನು ತಕ್ಷಣ ಬಂಧಿಸಿ : ಯಶ್ಪಾಲ್ ಸುವರ್ಣ  

ಉಡುಪಿ: ಕಾರ್ಕಳದಲ್ಲಿ ಹಿಂದೂ ಯುವತಿಗೆ ಅಮಲು ಪದಾರ್ಥ ನೀಡಿ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರ ಯತ್ನಿಸಿದ ಮತಾಂಧ ಜಿಹಾದಿ ಶಕ್ತಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕರಾವಳಿ ಜಿಲ್ಲೆಯಲ್ಲಿ ಮಾದಕ ದ್ರವ್ಯ ಜಾಲ, ಕೊಲೆ, ಸುಲಿಗೆ , ಅತ್ಯಾಚಾರ ಪ್ರಕರಣದಿಂದ ಜನಸಾಮಾನ್ಯರು ಆತಂಕಕ್ಕೊಳಗಾಗಿದ್ದಾರೆ.

ಕಾಂಗ್ರೆಸ್ ಸರ್ಕಾರದ ಮತೀಯ ಶಕ್ತಿಗಳ ಓಲೈಕೆಯಿಂದ ಲವ್ ಜೆಹಾದ್ ಭಾಗವಾಗಿ ಹಿಂದೂ ಹುಡುಗಿಯರ ಮೇಲೆ ನಿರಂತರ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ರಾಜ್ಯ ಗೃಹ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ.

ಜಿಲ್ಲೆಯಲ್ಲಿ ಹಿಜಾಬ್ ವಿವಾದ ಸೃಷ್ಟಿಸಿದ್ದ ಮತಾಂಧ ಶಕ್ತಿಗಳೇ ಇಂತಹ ಹೇಯ ಕೃತ್ಯಕ್ಕೆ ಪರೋಕ್ಷ ಬೆಂಬಲ ನೀಡುತ್ತಿದೆ. ಈಗಾಗಲೇ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ಉಳಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕಾಣದ ಕೈಗಳನ್ನು ಹುಡುಕಿ ಹೆಡೆಮುರಿ ಕಟ್ಟುವ ಕೆಲಸಕ್ಕೆ ಪೊಲೀಸ್ ಇಲಾಖೆ ಮುಂದಾಗಲಿ ತಪ್ಪಿದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಯಶ್ ಪಾಲ್ ಸುವರ್ಣಎಚ್ಚರಿಕೆ ನೀಡಿದ್ದಾರೆ.


Spread the love