ಲಷ್ಕರೆ ತಯ್ಬಾ ಉಗ್ರರ ನುಸುಳುವಿಕೆ – ಪತ್ತೆಗೆ ಕರ್ನಾಟಕ ಕರಾವಳಿಯಲ್ಲಿ ಅಲರ್ಟ್ ನೋಟೀಸ್
ಉಡುಪಿ: ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಲಷ್ಕರೆ ತಯ್ಬಾದ ಉಗ್ರರು ತಮಿಳುನಾಡು ರಾಜ್ಯದ ಮೂಲಕ ಒಳ ನುಸುಳಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿಯ ಮೇರೆಗೆ ಉಡುಪಿ ಕರಾವಳಿ ಪೊಲೀಸ್ ಪಡೆಯಿಂದ ಹೈ ಅಲರ್ಟ್ ಘೋಷಿಸಲಾಗಿದೆ.
ಲಷ್ಕರೆ ತಯ್ಬಾದ ಆರು ಉಗ್ರರು ತಮಿಳುನಾಡು, ಕೇರಳ ಮೂಲಕ ಪ್ರವೇಶಿಸಿದ್ದಾರೆ. ಆರು ಮಂದಿಯ ಪೈಕಿ ಒಬ್ಬ ಪಾಕಿಸ್ತಾನಿ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು ಆತ ಕರಾವಳಿಯಲ್ಲಿ ಅಡಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು ಶಂಕಿತ ವ್ಯಕ್ತಿಯ ಭಾವಚಿತ್ರ ಬಿಡುಗಡೆ ಮಾಡಿದ್ದು, ಆತನ ಪತ್ತೆಗಾಗಿ ಕರಾವಳಿ ಕಾವಲು ಪಡೆಯ ಪೊಲೀಸರು ಮಲ್ಪೆ ಬಂದರು ಪರಿಸರದಲ್ಲಿ ಹೈ ಅಲರ್ಟ್ ನೋಟಿಸ್ ಜಾರಿ ಮಾಡಿದ್ದಾರೆ.
ಶಂಕಿತ ವ್ಯಕ್ತಿಯನ್ನು ಕಂಡ ಕೂಡಲೇ ಸಾರ್ವಜನಿಕರು ಕರಾವಳಿ ಕಾವಲು ಪೊಲೀಸ್ ಠಾಣೆ 0820-2538299 ಅಥವಾ ಕರಾವಳಿ ಕಾವಲು ಉಡುಪಿ ಇದರ ಉಚಿತ ಸಹಾಯವಾಣಿ ಸಂಖ್ಯೆ ‘1093’ ಕ್ಕೆ ಮಾಹಿತಿ ನೀಡಬೇಕು ಎಂದು ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.