ಲಾಕ್ ಡೌನ್ ಇದ್ದರೂ ಭಾನುವಾರ ವಿವಾಹಗಳಿಗೆ ಅನುಮತಿ ನೀಡಿದ ಸರ್ಕಾರ- ಷರತ್ತುಗಳು ಅನ್ವಯ

Indian wedding ceremony. Weddings in India vary regionally, the religion and per personal preferences of the bride and groom. They are festive occasions in India, and in most cases celebrated with extensive decorations, colors, music, dance, costumes and rituals that depend on the religion of the bride and the groom, as well as their preferences
Spread the love

ಲಾಕ್ ಡೌನ್ ಇದ್ದರೂ ಭಾನುವಾರ ವಿವಾಹಗಳಿಗೆ ಅನುಮತಿ ನೀಡಿದ ಸರ್ಕಾರ- ಷರತ್ತುಗಳು ಅನ್ವಯ

ಬೆಂಗಳೂರು: ಪ್ರತಿ ಭಾನುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಇದ್ದರೂ ಮದುವೆ ಸಮಾರಂಭಗಳಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಅನುಮತಿ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಭಾನುವಾರದಂದು ಪೂರ್ಣ ದಿನದ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಈಗಾಗಲೇ ನಿಗದಿ ಪಡಿಸಿರುವಂತಹ ಮದುವೆ ಸಮಾರಂಭಗಳನ್ನು ನಡೆಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.ಮದುವೆಯಲ್ಲಿ ಗರಿಷ್ಠ ಅತಿಥಿಗಳ ಸಂಖ್ಯೆ 50 ಇರಬೇಕು. ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು. ರಾಷ್ಟ್ರೀಯ ನಿರ್ದೇಶನಗಳನ್ನು ಅನುಸರಿಸಿ ಸರಳ ವಿವಾಹ ನಡೆಸಬಹುದು ಇದಲ್ಲದೆ ಭಾನುವಾರಗಳಂದು ಅತ್ಯವಶ್ಯಕ ಚುಟುವಟಿಕೆಗಳಿಗೂ ಅವಕಾಶ ನೀಡಬಹುದು ಎಂದು ಹೇಳಿದೆ.

ಉಳಿದಂತೆ ಭಾನುವಾರ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಸಂಪೂರ್ಣ ಲಾಕ್ ಡೌನ್ ಇರುತ್ತದೆ. ಎಲ್ಲಾ ರೀತಿಯ ಚಟುವಟಿಕೆಗಳು, ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. 144 ರ ಸೆಕ್ಷನ್ ಅಡಿ ನಿಷೇಧಾಜ್ಞೆ ಇರುತ್ತದೆ ಎಂದು ಸರಕಾರ ಹೇಳಿದೆ.

ಮದುವೆ ಸಮಾರಂಭಕ್ಕೆ ತೆರಳುವವರು ಆಯಾಯ ಜಿಲ್ಲಾಧಿಕಾರಿಗಳಿಗೆ ಗುರುತು ಪತ್ರವನ್ನು ನೀಡಿ ಅನುಮತಿ ಪಡೆದು ಪಾಸ್ ಪಡೆದುಕೊಂಡ ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.


Spread the love