ಲಾಕ್ ಡೌನ್ ನಿಯಮ ಉಲ್ಲಂಘಿಸಿ ಕುಂದಾಪುರದಲ್ಲಿ ಇಸ್ಪೀಟ್ ಆಡುತ್ತಿದ್ದ ಎಂಟು ಮಂದಿ ಬಂಧನ
ಕುಂದಾಪುರ: ಜನ ಗುಂಪಾಗಿ ಸೇರಿದವರ ಕುರಿತು ಪೊಲೀಸರು ಎಷ್ಟೇ ಲಾಠಿ ಚಾರ್ಜ್ ಮಾಡಿದರೂ, ಪುಂಡರು ಮಾತ್ರ ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದ್ದರೆ ಕೆಲವೊಂದು ವ್ಯಕ್ತಿಗಳು ಅಲ್ಲಲ್ಲಿ ಗುಂಪಾಗಿ ಸೇರಿಕೊಂಡು ಇಸ್ಪೀಟ್ ಆಡುವುದರಲ್ಲಿ ನಿರತರಾಗಿದ್ದಾರೆ.
ಕುಂದಾಪುರ ಹೊರವಲಯದ ಕೋಡಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ಜೂಜಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕುಂದಾಪುರ ಕೋಡಿ ಕಸಬಾ ನಿವಾಸಿ ಜಿತೇಂದ್ರ ಪೂಜಾರಿ (30), ಮಣೂರು ಪಡುಕೆರೆ ನಿವಾಸಿ ಕುಮಾರ (34), ಕೋಡಿ ಕಸಬಾ ನಿವಾಸಿ ಪ್ರದೀಪ್ ಶ್ರೀಯಾನ್ (36), ಜಯರಾಜ್ (26), ಶಶಿಧರ (30), ಕಿರಣ (28) ಮತ್ತು ಪ್ರದೀಪ (31) ಎಂದು ಗುರುತಿಸಲಾಗಿದೆ.
ಏಪ್ರಿಲ್ 27ರಂದು ಬೆಳಿಗ್ಗೆ 11 ಗಂಟೆಗೆ ಕುಂದಾಪುರ ಠಾಣಾಧಿಕಾರಿ ಹರೀಶ್ ನಾಯ್ಕ್ ಅವರಿಗೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ಕೋಡಿಯ ಸ್ಮಶಾನದ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಬಂದಿದ್ದು ಅದರಂತೆ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಲು ನ್ಯಾಯಾಲಯದಲ್ಲಿ ಅನುಮತಿಗಾಗಿ ಕೋರಿಕೆ ಪತ್ರವನ್ನು ಸಲ್ಲಿಸಿ ಅನುಮತಿ ಪಡೆದು 11-15 ಗಂಟೆಗೆ ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ ಕಸಬಾ ಗ್ರಾಮದ ಕೋಡಿಯ ಸ್ಮಶಾನದ ಹಿಂಭಾಗದ ಸಾರ್ವಜನಿಕ ಸ್ಥಳಕ್ಕೆ ದಾಳಿ ನಡೆಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಒಟ್ಟು ಸೇರಿ ಗುಂಪುಗೂಡಿ ಕುಳಿತು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ ಇಸ್ಪೀಟು ಜುಗಾರಾಟಕ್ಕೆ ಉಪಯೋಗಿಸಿದ ನಗದು ರೂ. 3300/, ಹಳೆಯ ದೈನಂದಿನ ದಿನಪತ್ರಿಕೆ-1,ಇಸ್ಪೀಟು ಎಲೆಗಳು-52, ಹಾಗು 4 ಮೋಟಾರು ಸೈಕಲ್ಗಳನ್ನು ಸ್ವಾಧೀನಪಡಿಸಿ ಕೊಂಡಿದ್ದಾರೆ.
ಈ ಕುರಿತು ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Yes , Kundapura people are very interested in playing Cards,because in 1993 in one day after noon , I am travelling from belur to hassan to college I obseverved that in that bus some people were playing Cards, becoz in bus there are few little bit passengers, people who are playing cards are from kundapur and they are travelling to bengalore.