ಲಾಕ್ ಡೌನ್ ನೆಪದಲ್ಲಿ ವೃದ್ಧ ವಾಚ್ ಮೆನ್ ಗೆ ಹಲ್ಲೆ ನಡೆಸಿದ ಪೊಲೀಸರು – ಆಸ್ಪತ್ರೆಗೆ ದಾಖಲಿಸಿದ ಖಾದರ್
ಬೆಂಗಳೂರು: ಪೊಲೀಸ್ ಲಾಟಿ ಚಾರ್ಜ್ ನಿಂದ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ವೃದ್ಧ ವ್ಯಾಚ್ ಮ್ಯಾನ್ ನನ್ನು ತಕ್ಷಣ ಖುದ್ದು ಕಾರು ಚಾಲಾಯಿಸಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆಯನ್ನು ಉಳ್ಳಾಲ ಶಾಸಕ ಯು ಟಿ ಖಾದರ್ ಮೆರೆದಿದ್ದಾರೆ.
ಖಾದರ್ ಅವರ ಮನೆಯ ವಾಚ್ ಮೆನ್ ಮಹದೇವಪ್ಪ ಅವರು ಕೆಲಸ ಮುಗಿಸಿ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಪೊಲೀಸರು ಲಾಠಿಯಿಂದ ಹಲ್ಲೆ ನಡೆಸಿದ್ದು ಇದರಿಂದ ಅವರ ಕೈಗೆ ಗಂಭೀರ ಗಾಯವಾಗಿದ್ದು ಅವರನ್ನು ಖಾದರ್ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸುವುದರೊಂದಿಗೆ ಮಾನವೀಯತೆಯನ್ನು ಮೆರೆದಿದ್ದಾರೆ.
ಅಲ್ಲದೆ ಲಾಕ್ ಡೌನ್ ನೆಪದಲ್ಲಿ ಅಮಾನವೀಯವಾಗಿ ವೃದ್ಧ ವಾಚ್ ಮೆನ್ ಮೇಲೆ ಹಲ್ಲೆ ನಡೆಸಿದ ಪೊಲೀಸರು ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಖಾದರ್, ಪೊಲೀಸರ ವಿರುದ್ದ ಡಿಜಿಪಿ ಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಖಾದರ್ ನಮ್ಮ ಮನೆಯ ಇಬ್ಬರೂ ವಾಚ್ ಮೆನ್ ಗಳಿಗೂ ಕೂಡ ಪೊಲೀಸರು ಹಲ್ಲೆ ಮಾಡಿದ್ದು, ಪೊಲೀಸರು ತಮ್ಮ ಕೆಲಸ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ ಪೊಲೀಸರು ಲಾಠಿಯನ್ನು ಉಪಯೋಗಿಸುವ ಸಮಯದಲ್ಲಿ ಬುದ್ದಿಯನ್ನು ಕೂಡ ಉಪಯೋಗಿಸಬೇಕು. ಬಡವರು ಕಾರ್ಮಿಕರಿಗೆ ಅನಾವಶ್ಯಕವಾಗಿ ಲಾಠಿಯಲ್ಲಿ ಹೊಡೆದರೆ ಮುಂದೆ ಅವರ ಮನೆಯಲ್ಲಿ ದುಡಿಯುವ ವ್ಯಕ್ತಿ ಇಲ್ಲದೆ ಸಮಸ್ಯೆ ಅನುಭವಿಸಬೇಕಾದ ಪರಿಸ್ಥಿತಿ ಬರುತ್ತೆ. ಅನಾವಶ್ಯಕವಾಗಿ ತಿರುಗುವವರ ಮೇಲೆ ಲಾಠಿ ಉಪಯೋಗಿಸಿ ಅದನ್ನು ಬಿಟ್ಟು ಬಡವರ ಮೇಲೆ ಈ ರೀತಿ ವರ್ತನೆ ಮಾಡುವುದು ಸರಿಯಲ್ಲ. ನಾನು ಇದನ್ನು ಡಿಜಿ, ಕಮೀಷನರ್ ಹಾಗೂ ಸಚಿವರ ಗಮನಕ್ಕೆ ತರಲಿದ್ದೇನೆ ಎಂದರು.