Home Mangalorean News Kannada News ಲಾಕ್ ಡೌನ್ :ಮುಂಬಯಿ ಜನತೆಯ ಹಸಿವು ನೀಗಿಸುವ ಸೇವೆಯಲ್ಲಿ  ಉದ್ಯಮಿ, ಸಮಾಜ ಸೇವಕ ಇನ್ನಂಜೆ ಶಶಿಧರ...

ಲಾಕ್ ಡೌನ್ :ಮುಂಬಯಿ ಜನತೆಯ ಹಸಿವು ನೀಗಿಸುವ ಸೇವೆಯಲ್ಲಿ  ಉದ್ಯಮಿ, ಸಮಾಜ ಸೇವಕ ಇನ್ನಂಜೆ ಶಶಿಧರ ಕೆ. ಶೆಟ್ಟಿ

Spread the love

ಲಾಕ್ ಡೌನ್ :ಮುಂಬಯಿ ಜನತೆಯ ಹಸಿವು ನೀಗಿಸುವ ಸೇವೆಯಲ್ಲಿ  ಉದ್ಯಮಿ, ಸಮಾಜ ಸೇವಕ ಇನ್ನಂಜೆ ಶಶಿಧರ ಕೆ. ಶೆಟ್ಟಿ

ಮುಂಬಯಿ : ಕೊರೋನಾ ಮಹಾಮಾರಿಯಿಂದಾಗಿ ಲೋಕ್ ಡೌನ್ ನ ಅಂಧಕಾರದಲ್ಲಿ ಮುಂಬಯಿ ಮಹಾನಗರ ಹಾಗೂ ಉಪನಗರಗಳು ಸಂಕಷ್ಟವನ್ನು ಅನುಭವಿಸುತ್ತಿರುವ ಈ ಸಮಯದಲ್ಲಿ ತವರೂರಲ್ಲಿ ಇದ್ದೂ ಮುಂಬಯಿಯಲ್ಲಿರುವ ತುಳು ಕನ್ನಡಿಗರ ಬಗ್ಗೆ ಕಾಳಜಿ ವಹಿಸುತ್ತಿದ್ದವರು ನಲಾಸೋಪಾರದ ಜನಪ್ರಿಯ ಹೋಟೇಲು ಉದ್ಯಮಿ ಇನ್ನಂಜೆ ಶಶಿಧರ ಕೆ. ಶೆಟ್ಟಿ ಇವರು. ಬಂಟರ ಸಂಘ ಮುಂಬಯಿ ವಸಯಿ-ದಹಾಣು ಪ್ರಾದೇಶಿಕ ಸಮಿತಿಯ ಸಂಚಾಲಕರೂ ಆದ ಇನ್ನಂಜೆ ಶಶಿಧರ ಕೆ. ಶೆಟ್ಟಿ ಯವರು ಲಾಕ್ ಡೌನ್ ನಿಂದಾಗಿ ಊರಲ್ಲಿದ್ದು ಮುಂಬಯಿಗೆ ಬರಲು ಅಸಾಧ್ಯವಾದರೂ, ಲಾಕ್ ಡೌನ್ ನಿಂದಾಗಿ ಮುಂಬಯಿಯ ತನ್ನ ಪರಿಸರದ ಜನ ಸಾಮಾನ್ಯರಿಗೆ ತೊಂದರೆ ಉಂಟಾಗಬಹುದೆಂದು ಮೊದಲೇ ಅರಿತು ಆಗಲೇ ಊರಲ್ಲಿ ಇದ್ದುಕೊಂಡೇ ಹತ್ತು ಲಕ್ಷ ರೂಪಾಯಿ ಮೊತ್ತದ ಉತ್ತಮ ದರ್ಜೆಯ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದು, ಜನರಲ್ಲಿ ಇದ್ದ ಆಹಾರ ಸಾಮಾಗ್ರಿಗಳು ಮುಗಿದ ಕೂಡಲೇ ಬಂಟರ ಸಂಘ, ಮುಂಬಯಿ, ವಸಯಿ-ಡಹಾಣು ಪ್ರಾದೇಶಿಕ ಸಮಿತಿ, ಶ್ರೀದೇವಿ ಯಕ್ಷಕಲಾ ನಿಲಯ, ತುಳು ಕೂಟ ಫೌಂಡೇಶನ್ ಇದರ ಮೂಲಕ ನಯ್ಗಾಂವ್ ನಿಂದ ಡಹಾಣು ವರೆಗಿನ ಮುಖ್ಯವಾಗಿ ಲಾಕ್ ಡೌನ್ ನಿಂದ ತೊಂದರೆಗೀಡಾದ ತುಳು ಕನ್ನಡಿಗರಿಗೆ ಆಹಾರ ಸಾಮಾಗ್ರಿಗಳ ಕಿಟ್ ನ್ನು ವಿತರಿಸುವ ಕಾರ್ಯವನ್ನು ಆರಂಭಿಸಿದರು.

ಕರೋನ ಮಹಾಮಾರಿಯಿಂದ ಸಂಪೂರ್ಣ ಜಗತ್ತು ತತ್ತರಿಸಿ ಹೋಗಿದೆ. ಅದರಲ್ಲಿ ನಮ್ಮ ಭಾರತವೂ ಹೊರತು ಪಡಿಸಿಲ್ಲ. ಸರ್ಕಾರ ತೆಗೆದುಕೊಂಡ ಲಾಕ್ ಡೌನ್ ನಿರ್ಧಾರಗಳು ನಮಗೆಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗಳನ್ನು ಎದುರಿಸುವಂತಾಗಿದೆ. ಅಲ್ಲದೇ ಈ ಲಾಕ್ ಡೌನ್ ಮೇ 3 ರಿಂದ ಮೇ 17 ತಾರೀಕಿನವರೆಗೆ ವಿಸ್ತರಿಸಿದ್ದು , ಮುಂಬಯಿ ಮಹಾನಗರದ ತುಳುಕನ್ನಡಿಗರ ಸಂಕಷ್ಟ ಪರಿಸ್ಥಿತಿಯನ್ನು ಮನಗಂಡು ನಮ್ಮ ಪರಿಸರದಲ್ಲಿ ಸಂಕಷ್ಟದಲ್ಲಿರುವ ತುಳು ಕನ್ನಡಿಗರಿಗೆ ಸಹಾಯ ಮಾಡಲು ಮುಂದಾದ ಪರಿಸರದ ಸಂಸ್ಥೆಗಳಾದ ಬಂಟರ ಸಂಘ, ಮುಂಬಯಿ, ವಸಯಿ-ಡಹಾಣು ಪ್ರಾದೇಶಿಕ ಸಮಿತಿ, ತುಳು ಕೂಟ ಫೌಂಡೇಶನ್, ನಲಸೋಪಾರ ಹಾಗೂ ಶ್ರೀದೇವಿ ಯಕ್ಷಕಲಾ ನಿಲಯದ ಪದಾಧಿಕಾರಿಗಳು, ನಯ್ಗಾಂವ್ ನಿಂದ ಡಹಾಣು ವರೆಗಿನ ಸಂಕಷ್ಟದಲ್ಲಿ ಇರುವ ತುಳು ಕನ್ನಡಿಗರಿಗೆ ಸಹಾಯ ಮಾಡಲಾಗಿದೆ.

ಈಗಾಗಲೇ 1285 ಕ್ಕಿಂತಲೂ ಅಧಿಕ ಕುಟುಂಬಗಳಿಗೆ 12 ಲಕ್ಷ ರೂಪಾಯಿ ಹೆಚ್ಚಿನ ಮೊತ್ತದ ಕಿಟ್ಟನ್ನು ವಿತರಿಸಲಾಗಿದ್ದು ತುಳು ಕನ್ನಡಿಗರಲ್ಲದೆ ಅತ್ಯಂತ ಕಷ್ಟದಲ್ಲಿರುವ ಇತರ ಸಮುದಾಯದ ಕೆಲವರಿಗೆ ವಿತರಿಸಲಾಗಿದೆ. ಕೆಲವರಿಗೆ ನಗದು ಹಣವನ್ನೂ ನೀಡಿ ಸಹಕರಿಸಲಾಗಿದೆ ಅದೂ ಅಲ್ಲದೆ ಯವುದೇ ಪ್ರಚಾರವನ್ನು ಬಯಸದೇ ಊರಲ್ಲಿ ಕೂಡಾ ಈ ಸೇವೆಯನ್ನು ಮಾಡುತ್ತಿರುವೆವು ಎಂದು ಊರಲ್ಲಿರುವ ಇನ್ನಂಜೆ ಶಶಿಧರ ಕೆ. ಶೆಟ್ಟಿ ಯವರು ಮಾಧ್ಯಮಗಳಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ನಯ್ಗಾಂವ್ ನಿಂದ ಡಹಾಣು ವರೆಗಿನ ತುಳು ಕನ್ನಡಿಗರಿಗೆ ಕಿಟ್ ನ್ನು ವಿತರಿಸುವ ಈ ಸೇವೆಯಲ್ಲಿ ಇನ್ನಂಜೆ ಶಶಿಧರ ಕೆ. ಶೆಟ್ಟಿ ಯವರ ಗೈರುಹಾಜರಿಯಲ್ಲಿ ತುಳು ಕೂಟ ಫೌಂಡೇಶನ್, ನಲಸೋಪಾರ ಹಾಗೂ ಶ್ರೀದೇವಿ ಯಕ್ಷಕಲಾ ನಿಲಯ, ಬಂಟರ ಸಂಘ, ಮುಂಬಯಿ, ವಸಯಿ-ಡಹಾಣು ಪ್ರಾದೇಶಿಕ ಸಮಿತಿ ಯ ಪರವಾಗಿ ಜಯಂತ ಆರ್ ಪಕ್ಕಳ (ಕಾರ್ಯಾದ್ಯಕ್ಷ – ಬಂಟರ ಸಂಘ, ಮುಂಬಯಿ, ವಸಯಿ-ಡಹಾಣು ಪ್ರಾದೇಶಿಕ ಸಮಿತಿ) ಕಣಂಜಾರು ಪ್ರವೀಣ್ ಶೆಟ್ಟಿ, ಪಳ್ಳಿ ಜಗನ್ನಾಥ ಡಿ. ಶೆಟ್ಟಿ, ಜಯ ಅಶೋಕ್ ಶೆಟ್ಟಿ ನಯ್ಗಾಂವ್- ವಸಯಿ, ನೀರೆ ಸುಪ್ರೀತ್ ಶೆಟ್ಟಿ ನಲಸೋಪಾರ, ಉಮಾ ಸತೀಶ್ ಶೆಟ್ಟಿ ನಲಸೋಪಾರ, ಲ! ಕೃಷ್ಣಯ್ಯ ಎ ಹೆಗ್ಡೆ ಅಡಂದಾಲು ವಿರಾರ್, ಯಶೋದ ಎಸ್ ಕೋಟ್ಯಾನ್ , ಮಲ್ಲಿಕ ಆರ್ ಪೂಜಾರಿ , ಕಾಪು ರಮೇಶ್ ವಿ ಶೆಟ್ಟಿ ಕಾಪು , ಪಳ್ಳಿ ಜಗನ್ನಾಥ ಡಿ ಶೆಟ್ಟಿ ಹೀಗೇ ಅನೇಕರು ಸಹಕರಿಸಿದ್ದಾರೆ.


Spread the love

Exit mobile version