ಲಾಕ್ ಡೌನ್ ಹೊರತಾಗಿ ಮಲ್ಪೆಯಲ್ಲಿ ಮೀನುಗಾರಿಕೆ – ಬಂದರಿಗೆ ಡಿಸಿ ,ಎಸ್ಪಿ ಧಿಡೀರ್ ದಾಳಿ

Spread the love

ಲಾಕ್ ಡೌನ್ ಹೊರತಾಗಿ ಮಲ್ಪೆಯಲ್ಲಿ ಮೀನುಗಾರಿಕೆ – ಬಂದರಿಗೆ ಡಿಸಿ ,ಎಸ್ಪಿ ಧಿಡೀರ್ ದಾಳಿ

ಉಡುಪಿ: ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಮಾ.31ರವರೆಗೆ ರಾಜ್ಯಾದ್ಯಂತ ಲಾಕ್ಡೌನ್ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು ಅದರ ಹೊರತಾಗಿ ಮಲ್ಪೆ ಬಂದರಿನಲ್ಲಿ ಸಾವಿರಾರು ಮಂದಿ ಮೀನುಗಾರಿಕೆಯಲ್ಲಿ ತೊಡಗಿರುವ ಕುರಿತು ದೂರು ಬಂದ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಟಾಧಿಕಾರಿ ದಿಢೀರ್ ದಾಳಿ ನಡೆಸಿದರು.

ಜಿಲ್ಲೆಯ ಜಿಲ್ಲಾಧಿಕಾರಿಗಳು ಲಾಕ್ ಡೌನ್ ಕುರಿತು ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಕೂಡ ಅವರ ಆದೇಶಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಮೀನುಗಾರಿಕ ವ್ಯಾಪಾರ ,ವ್ಯವಹಾರ ಜೋರಾಗಿಯೇ ನಡೆಯುತ್ತಿದ್ದು ಎಂದಿನಂತೆ ಮೀನು ಹಾರಾಜು, ಸಾಗಾಟ, ವಿತರಣೆ ಎಂದಿನಂತೆ ನಡೆಯುತ್ತಿದೆ.ಮಾಮೂಲು ನಂತೆ ಮೀನು ಲೋಡ್ ಅಗಿ ಬೇರೆ ಊರುಗಳಿಗೆ ಸಾಗಾಟ ನಿರಾಂತಕವಾಗಿ ನಡೆಯುತ್ತಿತ್ತು. ಸಾವಿರಾರು ಜನ ಗುಂಪು ಗುಂಪಾಗಿ ಕೆಲಸ ಬಿಜಿಯಾಗಿದ್ರು ಕೊರೊನಾ ಸೋಂಕಿನ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮಗಳು ಕಂಡು ಬಾರದ ಹಿನ್ನಲೆಯಲ್ಲಿ ಬುಧವಾರದಿಂದಲೇ ಮಲ್ಪೆ ಬಂದರನ್ನು ಸಂಪೂರ್ಣ ಬಂದ್ ಮಾಡಲೂ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಜಿ ಜಗದೀಶ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಮೀನುಗಾರಿಕಾ ನಾಯಕರೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ ಮೀನುಗಾರ ಮಹಿಳೆಯರೊಂದಿಗೆ ಜಿಲ್ಲಾಧಿಕಾರಿ ಚರ್ಚೆ ನಡೆಸಿದರಲ್ಲದೆ ಸ್ವಚ್ಚತೆ- ಮುನ್ನೆಚ್ಚರಿಕೆ ಪಾಠ ಮಾಡಿದರು.

ಈಗಾಗಲೇ 15 ದಿನದ ಆಳಸಮುದ್ರ ಬೋಟ್ ಗಳು ಮೀನುಗಾರಿಕೆಗೆ ತೆರಳಿದ್ದು ಹೋದ ಬೋಟ್ ವಾಪಾಸ್ ಬರುವವರೆಗೆ ಕಾನೂನು ಸಡಿಲಿಕೆ ಮಾಡಿದರು. ಅಲ್ಲದೆ ಮೀನು ವ್ಯಾಪಾರ ಸಂದರ್ಭದಲ್ಲಿ ಅಂತರ ಕಾಯುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.


Spread the love