ಲಾರಿ ಚಾಲಕನ ಕೊಲೆ ಪ್ರಕರಣದ ಆರೋಪಿಗಳ ಬಂಧನ ಹಾಗೂ ಸೊತ್ತು ಪತ್ತೆ
ಲಾರಿ ಚಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸರು ಇನ್ನೂ ಇನ್ನೂ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧೀತರನ್ನು ಮಾಗಡಿ ತಾಲೂಕು ಅಸಾದುಲ್ಲಾ ಷರೀಫ್ (50), ಬೆಂಗಳೂರು ಕುಂಬಳಗೋಡು ನಿವಾಸಿ ಅಹ್ಮದ್ ಷರೀಫ್ ಮತ್ತು ಕೆಂಗೇರಿ ನಿವಾಸಿ ನಿಜಾಮುದ್ದೀನ್ ಯಾನೆ ತೌಹಿದ್ ಎಂದು ಗುರುತಿಸಲಾಗಿದೆ.
ದಿನಾಂಕ 28-08-2018ರಂದು ಪಣಂಬೂರು ಠಾಣಾ ವ್ಯಾಪ್ತಿಯ ಬೈಕಂಪಾಡಿಯಲ್ಲಿರುವ ರುಚಿ ಸೋಯ ಇಂಡಸ್ಟ್ರೀಯಿಂದ ಸುಮಾರು 7,50,000 ಮೌಲ್ಯದ 1050 ಬಾಕ್ಷ್ ತಾಳೆ ಎಣ್ಣೆಯನ್ನು ಚಾಲಕ ಅನೀಲ್ ಕುಮಾರ್ ಇವರೊಂದಿಗೆ ಸುಗಮ ಕಂಪನಿಯ ಲಾರಿಯಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟದನ್ನು ತಲುಪಿಸಬೇಕಾದ ಸ್ಥಳಕ್ಕೆ ತಲುಪಿಸದೇ ಮೋಸ ಮಾಡಿರುವ ಬಗ್ಗೆ ಶಿವಗಣೇಶ್ ಟ್ರಾನ್ಸ್ ಪೋರ್ಟ್ ಮಾಲೀಕರು ದಿನಾಂಕ: 30-08-2018ರಂದು ನೀಡಿದ ದೂರಿನಂತೆ ವಂಚನೆ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆಯನ್ನು ಮುಂದುವರಿಸಿ ಆರೋಪಿಯೋರ್ವನನ್ನು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದ ವೇಳೆ ಆರೋಪಿತರು ಸುಲಿಗೆ ಮಾಡುವ ಉದ್ದೇಶದಿಂದ ಲಾರಿ ಚಾಲಕ ಅನಿಲ್ ಕುಮಾರ್ ನನ್ನು ನನ್ನು ಕೊಲೆ ಮಾಡಿ ಶವವನ್ನು ರಾಮನಗರ ಜಿಲ್ಲೆಯ ಕುಂಬಳಗೋಡು ಎಂಬಲ್ಲಿ ಹೂತು ಹಾಕಿ ಲಾರಿಯಲ್ಲಿದ್ದ ಮಾಲನ್ನು ದೋಚಿರುವುದಾಗಿ ತಿಳಿಸಿರುತ್ತಾನೆ. ಅನಿಲ್ ಕುಮಾರ್ ನ ಶವವನ್ನು ಬೆಂಗಳೂರು ದಕ್ಷಿಣ ಉಪ-ವಿಭಾಗಾಧಿಕಾರಿ ಮೂಲಕ ಮಣ್ಣಿನಿಂದ ಹೊರತೆಗೆದು ಶವ ಪರೀಕ್ಷೆ ನಡೆಸಿ ವಾರೀಸುದಾರರಿಗೆ ಹಸ್ತಾಂತರಿಸಲಾಗಿದ್ದು, ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಮುಂದಿನ ತನಿಖೆಯ ಬಗ್ಗೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ತನಿಖೆಯನ್ನು ಮುಂದುವರಿಸಿದ್ದು ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ಅವರಿಂದ ಕೃತ್ಯಕ್ಕೆ ಬಳಸಿದ ಒಂದು 407 ಲಾರಿ, ಒಂದು ಟಾಟಾ ಲಾರಿ, ಒಂದು ಬುಲೆಟ್ ಮತ್ತು ಒಂದು ಡಿಯೋ ಸ್ಕೂಟರನ್ನು ಹಾಗೂ ದೋಚಿದ ಮಾಲು 850 ಬಾಕ್ಸ್ ತಾಳೆ ಎಣ್ಣೆಯನ್ನು ವಶಪಡಿಸಿಕೊಂಡಿರುವುದಾಗಿದೆ.
ಸ್ವಾಧೀನಪಡಿಸಿದ ಸೊತ್ತಿನ ವಿವರ:-*
1) ಟಾಟಾ ಕಂಪನಿಯ KA 01AH 9065ನೇ ನೊಂದಣಿ ಸಂಖ್ಯೆಯ ಕಂದು ಬಣ್ಣದ 06 ಚಕ್ರದ ಲಾರಿ, ಅಂದಾಜು ಮೌಲ್ಯ ರೂ.15,00,000/-
2) ಟಾಟಾ ಕಂಪನಿಯ KA 25 6944ನೇ ನೊಂದಣಿ ಸಂಖ್ಯೆಯ ನೀಲಿ ಮತ್ತು ಹಳದಿ ಬಣ್ಣದ 04 ಚಕ್ರದ 407 ಲಾರಿ, ಅಂದಾಜು ಮೌಲ್ಯ ರೂ.1,00,000/-
3) Royal Enfield ಕಂಪನಿಯ KA 41EL 4578ನೇ ನೊಂದಣಿ ಸಂಖ್ಯೆಯ ಕಪ್ಪು ಬಣ್ಣದ ಬುಲೆಟ್ ದ್ವಿಚಕ್ರ ವಾಹನ, ಅಂದಾಜು ಮೌಲ್ಯ ರೂ.1,25,000/-
4) ಹೋಂಡಾ ಕಂಪನಿಯ KA 41EL 4473ನೇ ನೊಂದಣಿ ಸಂಖ್ಯೆಯ ಕಪ್ಪು ಬಣ್ಣದ ಡಿಯೋ ದ್ವಿಚಕ್ರ ವಾಹನ, ಅಂದಾಜು ಮೌಲ್ಯ ರೂ.40,000/-
5) ರುಚಿ ಗೋಲ್ಡ್ 850 ಬಾಕ್ಸ್ ತಾಳೆ ಎಣ್ಣೆ, ಅಂದಾಜು ಮೌಲ್ಯ ರೂ. 6,00,000/-
ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಮಾನ್ಯ ಪೊಲೀಸು ಆಯುಕ್ತರಾದ ಶ್ರೀ ಟಿ. ಆರ್ ಸುರೇಶ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ-ಆಯುಕ್ತರು ಉಮಾ ಪ್ರಶಾಂತ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ರಾಜೇಂದ್ರ ಡಿ ಎಸ್ ಇವರ ನೇತೃತ್ವ್ವದಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕರಾದ ಶ್ರೀ ರಫೀಕ್.ಕೆ.ಎಮ್, ಪಣಂಬೂರು ಠಾಣಾ ಪಿ.ಎಸ್.ಐ(ಕಾ.ಸು) ಶ್ರೀ ಉಮೇಶ್ ಕುಮಾರ್.ಎಂ.ಎನ್ ಹಾಗೂ ಪಣಂಬೂರು ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂದಿಗಳು ಮತ್ತು ಪಣಂಬೂರು ಪೊಲೀಸ್ ಠಾಣಾ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.