ಲಾರಿ ಡಿಕ್ಕಿ : ಪಾಂಗಾಳದಲ್ಲಿ 3 ಗಂಟೆ ಹೆದ್ದಾರಿ ಬ್ಲಾಕ್; ಜನಾರ್ದನ ಪೂಜಾರಿಗೂ ಬ್ಲಾಕ್ ಅನುಭವ

Spread the love

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳ ಬಳಿ ಶನಿವಾರ ಬೆಳಗ್ಗೆ ಟ್ಯಾಂಕರ್ ಮತ್ತು ಕಂಟೇನರ್ ಲಾರಿಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಿಂದಾಗಿ ಮೂರು ತಾಸಿಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಮಸ್ಯೆ ಉಂಟಾಯಿತು.

ಘಟನೆಯಲ್ಲಿ ಚಾಲಕರಿಬ್ಬರೂ ಯಾವುದೆ ಗಾಯಗಳಿಲ್ಲದೆ ಪಾರಾಗಿದ್ದಾರೆ. ಆದರೆ ಹೆದ್ದಾರಿ ಮದ್ಯೆ ಲಾರಿಗಳು ಸಿಕ್ಕಿ ಹಾಕಿಕೊಂಡ ಕಾರಣ ರಸ್ತೆ ತಡೆ ಉಂಟಾಗಿ ಹೆದ್ದಾರಿಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು.ಉಡುಪಿ ಮಂಗಳೂ ಮಧ್ಯೆ ಓಡಾಡುವ ವೇಗದೂತ ಬಸ್ಸುಗಳ ಸಹಿತ ವಾಹನ ಚಾಲಕರು ಪರ್ಯಾಯ ಮಾರ್ಗಗಳನ್ನು ಬಳಸಿಕೊಂಡು ಸಂಚರಿಸಿದವು.

1-002 3-002 6-001

ಬೆಳಗ್ಗೆ 9 ಗಂಟೆಗೆ ಅಪಘಾತ ಸಂಭವಿಸಿದ್ದರೂ ಲಾರಿಗಳನ್ನು ರಸ್ತೆಯಿಂದ ತೆರವು ಮಾಡುವುದಕ್ಕೆ ಸಂಚಾರದಲ್ಲಿ ವ್ಯತ್ಯಯವಾಯಿತು. 12 ಗಂಟೆ ವೇಳೆಗೆ ಲಾರಿಗಳನ್ನು ರಸ್ತೆಯಿಂದ ತೆರವುಗೊಳಿಸಲಾಯಿತು. ಕಾಪು ಪೋಲೀಸರು ಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಹೆದ್ದಾರಿ ಸಂಚಾರವನ್ನು ಸುಗಮಗೊಳಿಸಲು ಹರಸಾಹಸ ಪಟ್ಟರು.

ಈ ನಡುವೆ ಉಡುಪಿಯಲ್ಲಿ ಪತ್ರಿಕಾಗೋಷ್ಟಿ ನಡೆಸಲು ಆಗಮಿಸುತ್ತಿದ್ದ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಕೂಡ ರಸ್ತೆ ಮಧ್ಯೆ ಸಿಕ್ಕಿ ಹಾಕಿಕೊಂಡು ಒಂದು ಗಂಟೆ ತಡವಾಗಿ ಆಗಮಿಸಿ ಪತ್ರಿಕಾಗೋಷ್ಟಿ ನಡೆಸಿದರು.


Spread the love