Home Mangalorean News Kannada News ಲಿಂಗತ್ವ ಅಲ್ಪಸಂಖ್ಯಾತೆಗೆ ಉದ್ಯೋಗ ನೀಡಿ ಸಾಮಾಜಿಕ ಕಳಕಳಿ ಮೆರೆದ ಸಚಿವೆ ಜಯಮಾಲ

ಲಿಂಗತ್ವ ಅಲ್ಪಸಂಖ್ಯಾತೆಗೆ ಉದ್ಯೋಗ ನೀಡಿ ಸಾಮಾಜಿಕ ಕಳಕಳಿ ಮೆರೆದ ಸಚಿವೆ ಜಯಮಾಲ

Spread the love

ಲಿಂಗತ್ವ ಅಲ್ಪಸಂಖ್ಯಾತೆಗೆ ಉದ್ಯೋಗ ನೀಡಿ ಸಾಮಾಜಿಕ ಕಳಕಳಿ ಮೆರೆದ ಸಚಿವೆ ಜಯಮಾಲ

ಬೆಂಗಳೂರು: ಸಮಾಜದಲ್ಲಿ ಸಾಮಾನ್ಯವಾಗಿ ಲಿಂಗತ್ವ ಅಲ್ಪಸಂಖ್ಯಾತರು ಹಲವು ರೀತಿಯಲ್ಲಿ ನಿರ್ಲಕ್ಷ್ಯಕ್ಕೆ ತುತ್ತಾಗಿ ಸಂಕಷ್ಟ ಅನುಭವಿಸುತ್ತಾರೆ. ಅವರಿಗೆ ಉದ್ಯೋಗ ಕಲ್ಪಿಸಿ ಕೊಡುವುದಕ್ಕೆ ಮುಂದಾಗುವವರು ಕೂಡ ಅಪರೂಪ. ಇಂತಹ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಡಾ| ಜಯಮಾಲ ಅವರು ತಮ್ಮ ವಿಧಾನಸೌಧದ ಕಛೇರಿಯಲ್ಲಿಯೇ ಲಿಂಗತ್ವ ಅಲ್ಪಸಂಖ್ಯಾತರೊಬ್ಬರಿಗೆ ಹೊರಗುತ್ತಿಗೆ ಆಧಾರದ ಮೇರೆಗೆ ಉದ್ಯೋಗ ನೀಡಿ ತಮ್ಮ ಸಾಮಾಜಿಕ ಕಳಕಳಿಯನ್ನು, ಬದ್ಧತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಅವರ ಬದುಕಿಗೆ ಆಸರೆ ಕಲ್ಪಿಸಬೇಕು ಎಂಬುದು ಕೇವಲ ಭಾಷಣದ ವಿಷಯವಾಗಬಾರದು. ಸ್ವತಃ ಈ ಮಾತನ್ನು ಕೃತಿಗೆ ಇಳಿಸಬೇಕು ಎಂಬ ಆದರ್ಶದೊಂದಿಗೆ ಸಚಿವರು ಈ ಕೆಲಸವನ್ನು ತಮ್ಮ ಕಛೇರಿಯಲ್ಲಿಯೇ ಅನುಷ್ಠಾನಗೊಳಿಸಿರುವುದು ವಿಶೇಷ. ಲಿಂಗತ್ವ ಅಲ್ಪಸಂಖ್ಯಾತರಾಗಿರುವ ಪರಿಚಯ ಗೌಡ ಎಂಬವರಿಗೆ ಇಂದಿನಿಂದ ತಮ್ಮ ವಿಧಾನಸೌಧದ ಕಛೇರಿಯಲ್ಲಿಯೇ ಉದ್ಯೋಗ ನೀಡಿದ್ದು, ಆ ಪ್ರಕಾರ ಪರಿಚಯ ಗೌಡ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸಚಿವೆ ಡಾ|ಜಯಮಾಲಾ ಸಮಾಜದಲ್ಲಿ ಸಾಮಾನ್ಯವಾಗಿ ಕಡೆಗಣನೆಗೆ ತುತ್ತಾಗಿ ಪ್ರತಿನಿತ್ಯ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುವಂತಹ ಲಿಂಗತ್ವ ಅಲ್ಪಸಂಖ್ಯಾತರ ಬದುಕಿಗೆ ನೆಲೆ ಕಲ್ಪಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆಯಲ್ಲಿ ನಮ್ಮ ಕಛೇರಿಯಿಂದಲೇ ಈ ಕೆಲಸ ಅಕ್ಷರಶಃ ಜಾರಿಗೆ ತಂದಿರುವುದಕ್ಕೆ ನನಗೆ ಸಂತೋಷವಾಗಿದೆ. ಇದೊಂದು ಉತ್ತಮ ಪ್ರಾರಂಭ ಎಂದು ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಡಾ: ಜಯಮಾಲ ಅವರು ಪ್ರತಿಕ್ರಿಯಿಸಿದ್ದಾರೆ. ಸೂಕ್ತ ಅವಕಾಶ ಸಿಕ್ಕಿದರೆ ಮತ್ತು ಅರ್ಹತೆಯನ್ನು ಕಲ್ಪಿಸಿದರೆ ಲಿಂಗತ್ವ ಅಲ್ಪಸಂಖ್ಯಾತರು ಸಹ ಎಲ್ಲರಂತೆಯೇ ಉತ್ತಮವಾಗಿ ಕೆಲಸ ಮಾಡಬಲ್ಲರು ಎಂಬ ವಿಶ್ವಾಸ ನನಗಿದೆ ಎಂಬುದಾಗಿ ಸಚಿವರು ತಿಳಿಸಿದ್ದಾರೆ.


Spread the love
1 Comment
Inline Feedbacks
View all comments
5 years ago

very good decision

wpDiscuz
Exit mobile version