Home Mangalorean News Kannada News ಲೇ ಔಟ್‍ ಗಳ ನಿರ್ಮಾಣ ತ್ವರಿತಗೊಳಿಸಲು ನಗರಾಭಿವೃದ್ಧಿ ನಗಾರಭಿವೃದ್ಧಿ ಸಚಿವರ ಸೂಚನೆ  

ಲೇ ಔಟ್‍ ಗಳ ನಿರ್ಮಾಣ ತ್ವರಿತಗೊಳಿಸಲು ನಗರಾಭಿವೃದ್ಧಿ ನಗಾರಭಿವೃದ್ಧಿ ಸಚಿವರ ಸೂಚನೆ  

Spread the love

ಲೇ ಔಟ್‍ ಗಳ ನಿರ್ಮಾಣ ತ್ವರಿತಗೊಳಿಸಲು ನಗರಾಭಿವೃದ್ಧಿ ನಗಾರಭಿವೃದ್ಧಿ ಸಚಿವರ ಸೂಚನೆ  

ಮಂಗಳೂರು: ಮಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೆತ್ತಿಕೊಳ್ಳಲಾಗಿರುವ ಬಡಾವಣೆಗಳ ಕಾಮಗಾರಿಗಳನ್ನು ತ್ವರಿತಿಗೊಳಿಸಿ ನಿವೇಶನಗಳನ್ನು ಆದಷ್ಟು ಬೇಗನೆ ಸಾರ್ವಜನಿಕರಿಗೆ ನೀಡಬೇಕು ಎಂದು ನಗಾರಭಿವೃದ್ಧಿ ಸಚಿವ ಬಿ.ಎ. ಬಸವರಾಜ ತಿಳಿಸಿದ್ದಾರೆ.

ಅವರು ಸೋಮವಾರ ನರಗದ ಸಕ್ರ್ಯೂಟ್ ಹೌಸ್‍ನಲ್ಲಿ ಇಲಾಖಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ ಮಂಗಳೂರು ನಗರದಲ್ಲಿ ಪ್ರಾಧಿಕಾರದಿಂದ ಹಲವು ವರ್ಷಗಳಿಂದ ಬಡಾವಣೆ ನಿರ್ಮಾಣ ವಿಳಂಬಗತಿಯಲ್ಲಿ ಸಾಗುತ್ತಿದೆ. ಇದನ್ನು ಶೀಘ್ರಗತಿಯಲ್ಲಿ ನಡೆಸುವಂತೆ ತಿಳಿಸಿದ ಸಚಿವರು, ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾಗುವ ಬಡಾವಣೆಯಲ್ಲಿ ಪತ್ರಕರ್ತರಿಗೆ ಶೇ. 5 ರಷ್ಷು ಮೀಸಲಾತಿಯನ್ನು ಇಡುವಂತೆ ಸೂಚನೆ ನೀಡಲಾಗಿದೆ ಎಂದರು.

60 ಸಾವಿರ ಎಲ್‍ಇಡಿ ದೀಪಗಳ ಅಳವಡಿಕೆಗೆ ಸರಕಾರದಿಂದ ಈಗಾಗಲೇ ಅನುಮತಿ ದೊರೆತಿದ್ದು, ಆದಷ್ಟು ಬೇಗನೆ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು. ಸರಕಾರಿ ಆಸ್ಪತ್ರೆಯಲ್ಲಿ 37 ಐಸಿಯು ಕೊಠಡಿಗಳಿಗೆ ರೂ. 3.40 ಕೋಟಿ ವೆಚ್ಚದಲ್ಲಿ ಎಲ್ಲಾ ಕಾಮಗಾರಿಗಳನ್ನು ಸ್ಮಾರ್ಟ್‍ಸಿಟಿ ವತಿಯಿಂದ ನಡೆಸಲಾಗಿದ್ದು, ಜಿಲ್ಲೆಯಲ್ಲಿ ಸ್ಮಾರ್ಟ್‍ನಿಟಿ ಅಡಿಯಲ್ಲಿ ಉತ್ತಮವಾದ ಕಾಮಗಾರಿಗಳು ನಡೆದಿದೆ ಎಂದು ಹೇಳಿದರು.

ಈ ಹಿಂದೆ ತುಂಬೆ ಡ್ಯಾಂ ಕಾಮಗಾರಿ ಪರಿಶೀಲನೆ ಮಾಡುವ ಸಂದರ್ಭದಲ್ಲಿ ತಡೆಗೋಡೆ ಮತ್ತು ಚೆಕ್ ಡ್ಯಾಂ ನಿರ್ಮಾಣ ಮಾಡಿಕೊಡಿಬೇಕೆಂದು ಶಾಸಕರು ಮತ್ತು ಸಚಿವರು ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಈ ಕಾಮಗಾರಿಗೆ ರೂ. 15 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದರ ಕಾಮಗಾರಿಯನ್ನು ಸ್ಮಾರ್ಟ್‍ನಿಟಿ ಅಡಿಯಲ್ಲಿ ನಡೆಸಲಾಗುತ್ತದೆ ಎಮದು ಸಚಿವ ಬಸವರಾಜ ತಿಳಿಸಿದರು.

ಪಚ್ಚನಾಡಿ ಡಂಪಿಂಗ್ ಯಾರ್ಡ್ ಕುಸಿತದಿಂದ ತೊಂದರೆಯಾದರಿಗೆ ಈಗಾಗಲೇ ರೂ. 1.91 ಲಕ್ಷ ಕೋಟಿ ಪರಿಹಾರ ನೀಡಲಾಗಿದ್ದು, ಉಳಿದವರಿಗೆ ಅದಷ್ಟು ಬೇಗನೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಚೆಕ್ ಡ್ಯಾಂ ನಿರ್ಮಾಣಕ್ಕೆ ರೂ.5 ಕೋಟಿ ಬಿಡುಗಡೆಯಾಗಿದ್ದು ಇದರ ಕಾಮಗಾರಿಯೂ ಶೇ. 80 ರಷ್ಟು ಮುಕ್ತಾಯವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮೂಡುಬಿದಿರೆ ಶಾಸಕ ಉಮನಾಥ್ ಕೋಟ್ಯಾನ್, ಮೇಯರ್ ದಿವಾಕರ್ ಪಾಂಡೇಶ್ವರ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಸ್ಮಾಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್, ವಿವಿಧ ಇಲಾಖೆಯ ಮುಖ್ಯಸ್ಥರು ಉಪಸ್ಥಿತರಿದರು.


Spread the love

Exit mobile version