ಲೈಸನ್ಸ್ ಪಡೆಯದ ಸಂಸ್ಥೆಗೆ ಗುತ್ತಿಗೆ ನೀಡಿದ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕರ ವಿರುದ್ದ ಪ್ರತಿಭಟನಾ ಪ್ರದರ್ಶನ;ಸಮಗ್ರ ತನಿಖೆಗೆ ಒತ್ತಾಯ

Spread the love

ಲೈಸನ್ಸ್ ಪಡೆಯದ ಸಂಸ್ಥೆಗೆ ಗುತ್ತಿಗೆ ನೀಡಿದ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕರ ವಿರುದ್ದ ಪ್ರತಿಭಟನಾ ಪ್ರದರ್ಶನ: ಸಮಗ್ರ ತನಿಖೆಗೆ ಒತ್ತಾಯ

ಲೈಸನ್ಸ್ ಪಡೆಯದ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಅಧೀಕ್ಷಕಿಯಾದ ಡಾ.ರಾಜೇಶ್ವರಿಯವರ ನಡೆಯು ತೀವ್ರ ಸಂಶಯಕ್ಕೆಡೆ ಮಾಡಿದ್ದು, ಇದನ್ನು ಸಮಗ್ರ ತನಿಖೆಗೊಳಪಡಿಸಬೇಕೆಂದು ಒತ್ತಾಯಿಸಿ  CITU ಮಂಗಳೂರು ನಗರ ಸಮಿತಿಯ ನೇತ್ರತ್ವದಲ್ಲಿ ಇಂದು (3-11-2018) ನಗರದ ಮಿನಿ ವಿಧಾನಸೌಧದೆದುರು ಪ್ರತಿಭಟನಾ ಪ್ರದರ್ಶನ ಜರುಗಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ   CITU ಕಾರ್ಯಕರ್ತರು, “ಲೈಸನ್ಸ್ ಪಡೆಯದ ಸಂಸ್ಥೆಗೆ ಗುತ್ತಿಗೆ ನೀಡಿದ್ದು ಯಾತಕ್ಕಾಗಿ, ಬೆಲೆಬಾಳುವ ಔಷಧಿಗಳ  ಹಾಗೂ ಆಹಾರ ಪದಾರ್ಥಗಳ ಕಳ್ಳ ಸಾಗಾಣಿಕೆ ನಿಲ್ಲಲೇಬೇಕು, ವೆನ್ಲಾಕ್ ಆಸ್ಪತ್ರೆಯ ಅವ್ಯವಸ್ಥೆಗಳನ್ನು ಸರಿಪಡಿಸಿರಿ, ಸರ್ವಾಧಿಕಾರಿ ಆಒಔ ತೊಲಗಲೇಬೇಕು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.

ಬಳಿಕ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅIಖಿU ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು,ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಗುತ್ತಿಗೆ ನೆಲೆಯಲ್ಲಿ ದುಡಿಯುತ್ತಿರುವ ಡಿ ಗ್ರೂಫ್ ಪೇಷೆಂಟ್ ಕ್ಯಾರ್ ನೌಕರರು ಸಾಯಿ ಸೆಕ್ಯುರಿಟಿ ಸಂಸ್ಥೆಯ ಮೂಲಕ ಗುತ್ತಿಗೆ ನೌಕರರಾಗಿದ್ದು,ಇಲ್ಲಿಯವರೆಗೆ ಸವಲತ್ತುಗಳನ್ನು ನೀಡದೆ ನೌಕರರನ್ನು ಗುಲಾಮರಂತೆ ದುಡಿಸಿಕೊಳ್ಳಲಾಗಿದೆ. ಇದಕ್ಕೆ ಕುಮ್ಮಕ್ಕು ನೀಡುವಂತೆ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರಾದ ಡಾ.ರಾಜೇಶ್ವರಿಯವರು ನೌಕರರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಸಾಯಿ ಸೆಕ್ಯುರಿಟಿ ಸಂಸ್ಥೆಯೊಂದಿಗೆ ಸೇರಿಕೊಂಡು ಕುತಂತ್ರಗಳನ್ನು ಹೆಣೆಯುತ್ತಿದ್ದಾರೆ. ನೂರಾರು ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಸಾಯಿ ಸೆಕ್ಯುರಿಟಿ ಸಂಸ್ಥೆಯು ಲೈಸನ್ಸ್ ಪಡೆಯದೆ ಕಳೆದ 6-7 ವರ್ಷಗಳಿಂದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಗುತ್ತಿಗೆ ಪಡೆದುಕೊಂಡಿರುವುದು ಹಲವಾರು ಸಂಶಯಕ್ಕೆಡೆ ಮಾಡಿದೆ. ಮೇಲಾಧಿಕಾರಿಗಳಿಂದ ತೀವ್ರ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ಕಳೆದ 8 ತಿಂಗಳ ಹಿಂದೆ ಲೈಸನ್ಸ್ ಪಡೆಯಲಾಗಿದೆ. ಒಟ್ಟಿನಲ್ಲಿ ಜಿಲ್ಲಾ ಅಧೀಕ್ಷಕರು ಹಾಗೂ ಸಾಯಿ ಸೆಕ್ಯುರಿಟಿ ಸಂಸ್ಥೆಯ ಮಧ್ಯೆ ಭಾರೀ ಅವ್ಯವಹಾರಗಳಿದ್ದು, ಅದನ್ನು ಕೂಡಲೇ ಸಮಗ್ರ ತನಿಖೆಗೊಳಪಡಿಸಬೇಕಾಗಿದೆ. ಬಡವರ ಹಾಗೂ ಹಿಂದುಳಿದ ವರ್ಗದವರ ಆಶಾಕಿರಣವಾದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಬೆಲೆಬಾಳುವ ಔಷಧಿಗಳು ಹೊರಗಡೆ ರವಾನೆಯಾಗುತ್ತಿರುವುದು, ಅಲ್ಲಿನ ಆಹಾರ ಪದಾರ್ಥ ಸಾಮಾಗ್ರಿಗಳು ಮಾರಾಟವಾಗುತ್ತಿರುವುದು, ಶವಾಗಾರದ ಅವ್ಯವಸ್ಥೆ, ಆರೋಗ್ಯ ಕಾರ್ಡ್ ಹೆಸರಿನಲ್ಲಿ ಭಾರೀ ಗೋಲ್ ಮಾಲ್, ಲಿಫ್ಟ್ ಸಮಸ್ಯೆ, ಸಿಟಿ ಸ್ಕ್ಯಾನ್ ಸಮಸ್ಯೆ, ರೋಗಿಗಳಿಗೆ ಕಳಪೆ ಆಹಾರ, ಪ್ಯಾರಾ ಮೆಡಿಕಲ್ ಕಾಲೇಜ್ ನ ಅವ್ಯವಸ್ಥೆ ಸೇರಿದಂತೆ ಹಲವಾರು ಸಮಸ್ಯೆಗಳು ಕಂಡು ಬಂದಿದ್ದು, ಅವುಗಳನ್ನು ಕೂಡಲೇ ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CITU ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರುರವರು, ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕಳೆದ ವರ್ಷದಿಂದ ಪ್ಯಾರಾ ಮೆಡಿಕಲ್ ಕಾಲೇಜ್ ಪ್ರಾರಂಭಗೊಂಡಿದ್ದರೂ, ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿಲ್ಲದೆ ವಿಧ್ಯಾರ್ಥಿಗಳನ್ನು ಖಾಸಗೀ ಕಾಲೇಜ್ ಗೆ ವರ್ಗಾಯಿಸಲಾಗಿತ್ತು. ಈ ವರ್ಷ ಅಲ್ಲಿಂದ ಹೊರ ದಬ್ಬಲ್ಪಟ್ಟ ವಿಧ್ಯಾರ್ಥಿಗಳು ವೆನ್ಲಾಕ್ ಆಸ್ಪತ್ರೆಯ ಹೊರಾಂಗಣದಲ್ಲೇ ಕಾಲ ಕಳೆಯುವಂತಾಗಿದೆ. ಒಟ್ಟಿನಲ್ಲಿ ವಿಧ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುವ ಜಿಲ್ಲಾ ಅಧೀಕ್ಷಕರು, ಕಳೆದ 5 ವರ್ಷಗಳಿಂದ ಇಲ್ಲಿಯೇ ಠಿಕಾಣಿ ಹೂಡಿದ್ದು, ವೆನ್ಲಾಕ್ ಆಸ್ಪತ್ರೆಯನ್ನೇ ಸರ್ವನಾಶ ಮಾಡಲು ತಯಾರಾಗಿದ್ದಾರೆ. ಬಡವರ ಆಶಾಕಿರಣವಾದ ಸರಕಾರಿ ವೆನ್ಲಾಕ್ ಆಸ್ಪತ್ರೆಯನ್ನು ಉಳಿಸಲು ನಗರದ ಪ್ರಜ್ಞಾವಂತ ಜನತೆ ಒಂದಾಗುವ ಮೂಲಕ ರಾಜೇಶ್ವರಿ ಹಠಾವೋ ವೆನ್ಲಾಕ್  ಬಚಾವೋ ಆಂದೋಲನಕ್ಕೆ ನಾಂದಿ ಹಾಡಬೇಕಾಗಿದೆ ಎಂದು ಹೇಳಿದರು.

CITU ಮಂಗಳೂರು ನಗರಾಧ್ಯಕ್ಷರಾದ ಜಯಂತಿ. ಬಿ.ಶೆಟ್ಟಿಯವರು ಗುತ್ತಿಗೆ ಕಾರ್ಮಿಕರ ಸಂಕಷ್ಟಗಳನ್ನು ವಿವರಿಸುತ್ತಾ, ಸರ್ವಾಧಿಕಾರಿ ಧೋರಣೆ ಅನುಸರಿಸುವ ಜಿಲ್ಲಾ ಅಧೀಕ್ಷಕರ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿದರು.

ಹೋರಾಟದಲ್ಲಿ CITU ನಾಯಕರಾದ ಜಯಲಕ್ಷ್ಮಿ,ಭಾರತಿ ಬೋಳಾರ, ಸುರೇಶ್ ಬಜಾಲ್, ಅಶೋಕ್ ಸಾಲ್ಯಾನ್, ನಾಗೇಶ್ ಕೋಟ್ಯಾನ್, ಅನ್ವರ್ ಶೇಕ್, ಸಂತೋಷ್ ಖS, ಸಾಮಾಜಿಕ ಚಿಂತಕರಾದ ಡೋಲ್ಫಿ ಡಿಸೋಜ, ಸಿಪ್ರಿಯನ್ ಪಡೀಲ್, ಸುಜಾತ ಸುವರ್ಣ, ಆಙಈI ನಾಯಕರಾದ ಬಿ‌ಕೆ.ಇಮ್ತಿಯಾಜ್, ರಿತೇಶ್ ಬಜಾಲ್, ನಿವೇಶನ ರಹಿತರ ಹೋರಾಟ ಸಮಿತಿಯ ಇಸಾಕ್ ಕಣ್ಣೂರು, ರೋಹಿಣಿ ಬೋಳೂರು, ದಲಿತ ಹಕ್ಕುಗಳ ಸಮಿತಿಯ ತಿಮ್ಮಯ್ಯ ಕೊಂಚಾಡಿ, ಕಿಶೋರ್ ಪೊರ್ಕೋಡಿ, ಕಟ್ಟಡ ಕಾರ್ಮಿಕರ ಸಂಘಟನೆಯ ದಿನೇಶ್ ಶೆಟ್ಟಿ, ಉಮೇಶ್ ಶಕ್ತಿನಗರ, ಸದಾಶಿವ ನಾಯಕ್, ರಿಕ್ಷಾ ಚಾಲಕರ ಸಂಘಟನೆಯ ಕ್ರಷ್ಣಪ್ಪ ಗೌಡ, ಮಹಮ್ಮದ್ ಅನ್ಸಾರ್, ಸ್ಟ್ಯಾನ್ಲಿ ನೊರೊನ್ಹಾ, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಜಾಫರ್, ಮುಂತಾದವರು ಭಾಗವಹಿಸಿದ್ದರು.

ಬಳಿಕ CITUನ ಉನ್ನತ ಮಟ್ಟದ ನಿಯೋಗವೊಂದು ಜಿಲ್ಲಾಧಿಕಾರಿಗಳನ್ನು, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಐವನ್ ಡಿಸೋಜರವರನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿತು.

ಯೋಗೀಶ್ ಜಪ್ಪಿನಮೊಗರು, CITU ನಗರ ಪ್ರಧಾನ ಕಾರ್ಯದರ್ಶಿ


Spread the love