ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ 

Spread the love

ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ 

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ  ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ಸಂಜೆ 6.15ಕ್ಕೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿನೋದ್ ತಾವ್ಡೆ ಸುದ್ದಿಗೋಷ್ಠಿ ನಡೆಸಿದ್ದು, ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಮೊದಲ ಪಟ್ಟಿಯಲ್ಲಿ ಹಲವು ಪ್ರಮುಖರಿಗೆ ಟಿಕೆಟ್ ನೀಡಲಾಗಿದೆ. ಕಳೆದ 1 ದಶಕದಿಂದ ಪ್ರಧಾನಿ ಮೋದಿ ನೇತೃತ್ವದಲ್ಲಿ ಯಶಸ್ವಿ ಆಡಳಿತ ನಡೆಸಿದ್ದೇವೆ. ಈ ಬಾರಿ 400 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹೊಂದಿದ್ದೇವೆ. ಕೇಂದ್ರದಲ್ಲಿ 3ನೇ ಬಾರಿ ಮೋದಿ ನೇತೃತ್ವದಲ್ಲಿ ಬಿಜೆಪಿ ಆಡಳಿತಕ್ಕೆ ಬರಲಿದೆ ಎಂದು ತಾವ್ಡೆ ಹೇಳಿದ್ದಾರೆ.

195 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದ್ದು, 34 ಸಚಿವರು ಈ ಪಟ್ಟಿಯಲ್ಲಿ ಇದ್ದಾರೆ. ಈ ಪೈಕಿ 28 ಮಹಿಳೆಯರು, 2ಮಾಜಿ ಸಿಎಂಗಳು ಇದ್ದಾರೆ 50 ವರ್ಷದ ಕೆಳಗಿನ 47 ಅಭ್ಯರ್ಥಿಗಳು ಇದ್ದಾರೆ. 27 ಮಂದಿ ಎಸ್ ಸಿ ಸಮುದಾಯದವರು ಇದ್ದಾರೆ.

ಮೊದಲ ಪಟ್ಟಿಯಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ?
ಉತ್ತರಪ್ರದೇಶ- 51 ಕ್ಷೇತ್ರಗಳು
ಪಶ್ಚಿಮ ಬಂಗಾಳ- 20
ಪಶ್ಚಿಮ ಬಂಗಾಳ -20
ಗುಜರಾತ್- 15
ರಾಜಸ್ಥಾನ- 15
ಕೇರಳ- 12
ತೆಲಂಗಾಣ -9
ಅಸ್ಸಾಂ -11
ಜಾರ್ಖಂಡ್ -11
ಛತ್ತೀಸಗಡ್- 11
ದೆಹಲಿ -5
ಉತ್ತರಖಂಡ್- 3
ಗೋವಾ- 1
ತ್ರಿಪುರ -1
ಅಂಡಮಾನ್ ನಿಕೋಬರ್- 1

ಮೊದಲ ಪಟ್ಟಿಯಲ್ಲಿರುವ ಪ್ರಮುಖರು ಇವರು
ವಾರಣಾಸಿ- ನರೇಂದ್ರ ಮೋದಿ
ಅರುಣಾಚಲ ವೆಸ್ಟ್- ಕಿರಣ್ ರಿಜಿಜು
ಅಸ್ಸಾಂನ ದಿಬ್ರುಗಡ್-ಸೊರ್ಬನಾಂದ್ ಸೋನಾವಾಲ್
ಚಾಂದನಿ ಚೌಕ್- ಪ್ರವೀಣ್
ನವದೆಹಲಿ-ಸುಷ್ಮಾ ಸ್ವರಾಜ್ ಮಗಳು ಬಾನ್ಸುರಿ ಸ್ವರಾಜ್
ಗಾಂಧಿನಗರ -ಅಮಿತ್ ಶಾ
ರಾಜ್ ಕೋಟ್- ಪುರುಷೋತ್ತಮ್ ರೂಪಾಲ್
ಪೋರ್ ಬಂದರ್- ಮನ್ಸೂಖ್ ಮಾಂಡವೀಯ
ಉಧಮಪುರ-ಜಿತೇಂದ್ರ ಸಿಂಗ್
ಗೊಡ್ಡಾ-ನಿಶಿಕಾಂತ್ ದುಬೆ
ಕಾಸರಗೊಡು- ಅಶ್ವೀನಿ
ಕೊಡರಮಾ-ಅನ್ನಪೂರ್ಣದೇವಿ
ತಿರುವನಂತಪುರಂ-ರಾಜೀವ್ ಚಂದ್ರಶೇಖರ್
ಖುಂಟಿ-ಅರ್ಜುನ್ ಮುಂಡಾ


Spread the love