ಲೋಕ ಕಲ್ಯಾಣಾರ್ಥ ಕೊಂಚಾಡಿಯಲ್ಲಿ ವಿಶೇಷ ವಾಯು ಸ್ತುತಿ , ನರಸಿಂಹ ಸ್ತುತಿ , ಮನ್ಯು ಸೂಕ್ತ ಹವನ
ಮಂಗಳೂರು: ಅಧಿಕ ಮಾಸ ಬಹು ಶ್ರೇಷ್ಠ , ಅಧಿಕ ಮಾಸವೆಂದರೆ ಬಹಳ ವಿಶೇಷವಾದ ಮಾಸಗಳಲ್ಲಿ ಒಂದಾಗಿದೆ. ಅಧಿಕ ಮಾಸವನ್ನು ಮಲಮಾಸ, ಪುರುಷೋತ್ತಮ ಮಾಸವೆಂದು ಕೂಡ ಕರೆಯಲಾಗುತ್ತದೆ. ಭಗವಾನ್ ವಿಷ್ಣುವನ್ನು ಅಧಿಕ ಮಾಸದ ಅಧಿಪತಿಯೆಂದು ಕರೆಯಲಾಗುತ್ತದೆ. ಪುರುಷೋತ್ತಮ ಎನ್ನುವ ಹೆಸರು ಕೂಡ ಭಗವಂತನಾದ ವಿಷ್ಣುವಿನ ಒಂದು ಹೆಸರೇ ಆಗಿದೆ. ಆದ್ದರಿಂದಲೇ ಅಧಿಕ ಮಾಸವನ್ನು ಪುರುಷೋತ್ತಮ ಮಾಸ ಎಂದು ಕೂಡ ಕರೆಯಲಾಗುತ್ತದೆ.
ಕೊಂಚಾಡಿ ಕಾಶಿ ಮಠದಲ್ಲಿ ಮೊಕ್ಕಾಂ ಮಾಡಿರುವ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಆದೇಶ ಪ್ರಕಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು , ಯಜ್ಞ ಹವನಾದಿ ಗಳನ್ನು ಆಯೋಜಿಸಲಾಗಿದೆ . ವಾಯು ಸ್ತುತಿ , ನರಸಿಂಹ ಸ್ತುತಿ , ಮನ್ಯು ಸೂಕ್ತ ಹವನ ಗುರುವಾರ ನೆರವೇರಿತು . ಮುಂದಿನದಿನಗಳಲ್ಲಿ ಹರಿವಂಶ ಪಾರಾಯಣ , ಸಂತಾನ ಗೋಪಾಲ ಹವನ , ಶತಚಂಡಿ ಮಹಾ ಯಾಗ , ಇಂತಹ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ . ಶ್ರೀ ದೇವಳದ ಯಜ್ಞ ಮಂಟಪದಲ್ಲಿ ವಾಯು ಸ್ತುತಿ , ನರಸಿಂಹ ಸ್ತುತಿ , ಮನ್ಯು ಸೂಕ್ತ ಹವನ ಪ್ರಾರಂಭಗೊಂಡು ಶ್ರೀಗಳವರ ಅಮೃತ ಹಸ್ತಗಳಿಂದ ಯಜ್ಞ ಮಂಟಪದಲ್ಲಿ ಮಹಾ ಪೂರ್ಣ ಹುತಿ ನಡೆಯಿತು . ಈ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥ ಮಂಗಳೂರು ದಕ್ಷಿಣ ಶಾಸಕರಾದ ಡಿ . ವೇದವ್ಯಾಸ ಕಾಮತ್ ಈ ಹವನ ಕಾರ್ಯಕ್ರಮದಲ್ಲಿ ಭಾಗವಹಿಸಿದರು, ಬಳಿಕ ಶಾಸಕರಿಂದ ವಟು ಪೂಜೆ . ಕೊಂಚಾಡಿ ಕಾಶಿ ಮಠದ ವ್ಯವಸ್ಥಾಪಕ ಸಮಿತಿಯ ಸದಾಶಿವ್ ಪೈ , ರತ್ನಕರ್ ಕಾಮತ್ , ಊರ್ವಿ ರಾಧಾಕೃಷ್ಣ ಶೆಣೈ , ವಿಜಯೇಂದ್ರ ಪೈ , ಪ್ರಶಾಂತ್ ಪೈ ಉಪಸ್ಥಿತರಿದ್ದರು .
ಚಿತ್ರ : ಮಂಜು ನೀರೇಶ್ವಾಲ್ಯ