ಲೋಕ ಸಭೆ ಜೊತೆ ವಿಧಾನ ಸಭೆ ಚುನಾವಣೆ ನಡೆಸಲು ಹುನ್ನಾರ : ಸುಶೀಲ್ ನೊರೊನ್ಹ
ಮಂಗಳೂರು: ರಾಜ್ಯ ರಾಜಕೀಯದಲ್ಲಿ ಬಿಜೆಪಿ ಪಕ್ಷವು ಅಭದ್ರ ಆಡಳಿತವನ್ನು ಸ್ರಷ್ಟಿಸಿದೆ. ಪಕ್ಷಕ್ಕೆ ಬಹುಮತ ಸಾಬೀತು ಪಡಿಸಲು ಅಸಾಧ್ಯ ವೆಂದು ತಿಳಿದರೂ ಕೂಡ ಕೇಂದ್ರ ಸರಕಾರದ ಅಣತಿಯಂತೆ ರಾಜ್ಯಪಾಲರು ಬಿ.ಎಸ್. ಯಡಿಯೂರಪ್ಪರವರನ್ನು ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಮಾಡಲು ಅವಕಾಶ ಕೊಟ್ಟಿದ್ದಾರೆ ಇದು ಕಾನೂನು ಭಾಹಿರ ಹಾಗೂ ಅಸಂವಿದಾನಿಕ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ಅಭಿಪ್ರಾಯ ಪಟ್ಟಿದ್ದಾರೆ.
ಮುಂದಿನ 15 ದಿನಗಳ ಕಾಲ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸ್ರಷ್ಟಿಸಲು ಅವಕಾಶ ಕಲ್ಪಿಸಿದೆ. ಈ 15 ದಿನಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷದ ಶಾಸಕರನ್ನು ಸೆಳೆಯಲು ಅಮಿಷಗಳನ್ನು ಒಡ್ಡಲು ಹಗಲು ರಾತ್ರಿ ಪ್ರಯತ್ನಿಸುವುದು ಸುಳ್ಳಲ್ಲ ಹೇಗಾದರೂ ಬಹುಮತ ಶಾಬೀತು ಪಡಿಸಿ ಆರು ತಿಂಗಳ ಕಾಲ ಜನ ಸಾಮಾನ್ಯರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಆಶ್ವಾಶನೆಗಳನ್ನು ಪೂರೈಸುವ ತಂತ್ರ ರೂಪಿಸಿ
ಅನಂತರ ಆರು ತಿಂಗಳ ನಂತರ ಬಹುಮತವಿದ್ದಲ್ಲಿ ಮುಂದುವರಿಕೆ ಇಲ್ಲದಿದ್ದಲ್ಲಿ ರಾಷ್ಟ್ರಪತಿ ಆಡಳಿತ ಜ್ಯಾರಿ ಮಾಡಿ ಎಪ್ರಿಲ್ ಮೇ ತಿಂಗಳಲ್ಲಿ ಲೋಕಸಭೆ ಜೊತೆಗೆ ವಿಧಾನ ಸಭೆ ಜೊತೆಜೊತೆಗೆ ಚುನಾವಣೆ ನಡೆಸಿ ಅಧಿಕಾರ ಬರಲು ತಿರುಕನ ಕನಸು ಕಾಣುತಿದೆ. ಆದರಿಂದ ಜಾತ್ಯಾತಿತ ತತ್ವದ ಜನಾದೇಶ ಪಡೆದ ಕಾಂಗ್ರೆಸ್ ಜೆಡಿಎಸ್ ಪಕ್ಷದ ಜನ ಪ್ರತಿನಿದಿಗಳು ಈ ರಾಜ್ಯದ ಹಿತ ಗೋಸ್ಕರ ಹದಿನೈದು ದಿವಸಗಳ ವನವಾಸ ಮಾಡಿ ಈ ರಾಜ್ಯದ ಹಿತ ಗೋಸ್ಕರ ಮಾಡಲಿರುವರು ಹಾಗೂ ರಾಷ್ಟ್ರ ಮಟ್ಟದಲ್ಲಿ ಈ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಪಕ್ಷದ ಜನ ಪ್ರತಿನಿದಿಗಳು ಸ್ವಚ್ಚ ರಾಜಕಾರಣಿಗಳು ಎಂದು ಗುರುತಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ಅಭಿಪ್ರಾಯ ಪಟ್ಟಿದ್ದಾರೆ.