ವಂ| ಜಾನ್ ಫೆರ್ನಾಂಡಿಸ್ ಹಾಗೂ ಅನಿತಾ ಅಲ್ಮೇಡಾ ಗೆ ‘ರುಪ್ಸಾ’ ಪ್ರಶಸ್ತಿ

Spread the love

ವಂ| ಜಾನ್ ಫೆರ್ನಾಂಡಿಸ್ ಹಾಗೂ ಅನಿತಾ ಅಲ್ಮೇಡಾ ಗೆ ‘ರುಪ್ಸಾ’ ಪ್ರಶಸ್ತಿ

ಉಡುಪಿ: ಅನುದಾನರಹಿತ ಶಾಲೆಗಳಲ್ಲಿನ ಅಧ್ಯಾಪಕರು ಹಾಗೂ ಸಂಚಾಲಕರಿಗಾಗಿರುವ ರುಪ್ಸಾ Recognised Unaided Private School’s Association of Karnataka) ಸಂಘಟನೆಯ ಉತ್ತಮ ಆಡಳಿತಗಾರ ಪ್ರಶಸ್ತಿಗೆ ಬ್ರಹ್ಮಾವರ ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ವಂ| ಜಾನ್ ಫೆರ್ನಾಂಡಿಸ್ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿಗೆ ಸಾಸ್ತಾನ ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಅನಿತಾ ಡಿ’ಆಲ್ಮೇಡಾ ಭಾಜನರಾಗಿದ್ದಾರೆ.

ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚಿನ ಧರ್ಮಗುರುಗಳೂ ಆಗಿರುವ ವಂ|ಜಾನ್ ಫೆರ್ನಾಂಡಿಸ್ ಅವರು ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.

ಶಿಕ್ಷಕಿಯಾಗಿ 25 ವರ್ಷಗಳ ಅನುಭವ ಹೊಂದಿದ್ದು, ಕಳೆದ 15 ವರ್ಷಗಳಿಂದ ಸಾಸ್ತಾನ ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಪ್ರಸ್ತುತ ಮುಖ್ಯ ಶಿಕ್ಷಕಿಯಾಗಿರುವ ಅನಿತಾ ಡಿ ಆಲ್ಮೇಡಾ ಅವರು ಪಠ್ಯ ಹಾಗೂ ಪಠ್ಯೇತರ ವಿಚಾರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಉತ್ತಮ ಸೇವೆಯನ್ನು ಸಲ್ಲಿಸಿರುತ್ತಾರೆ.

ಅಕ್ಟೋಬರ್ 21 ರಂದು ಬೆಂಗಳೂರಿನ ಜುಬಿಲಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಇಬ್ಬರಿಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments