ವಕ್ಫ್ ಕಾನೂನು ದೇಶಕ್ಕೆ ಮಾರಕ: ಸಂಸದ ಬ್ರಿಜೇಶ್ ಚೌಟ ಆರೋಪ

Spread the love

ವಕ್ಫ್ ಕಾನೂನು ದೇಶಕ್ಕೆ ಮಾರಕ: ಸಂಸದ ಬ್ರಿಜೇಶ್ ಚೌಟ ಆರೋಪ

ಮಂಗಳೂರು: ವಕ್ಫ್ ಕಾನೂನು ದೇಶಕ್ಕೆ ಮಾರಕವಾಗಿದ್ದು, ರೈತರಿಗೆ, ಹಿಂದೂಗಳಿಗೆ ಭೀತಿ ಹುಟ್ಟಿದೆ. ಒಮ್ಮೆ ವಕ್ಫ್ ಆಸ್ತಿಯೆಂದು ಹಕ್ಕು ಸ್ಥಾಪಿಸಿದರೆ ಅದನ್ನು ಸಾಮಾನ್ಯ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ, ಟ್ರಿಬ್ಯುನಲ್‌ನಲ್ಲೇ ಪ್ರಶ್ನಿಸಬೇಕು. ಹಾಗಾಗಿ ವಕ್ಫ್ ಕಾನೂನು ಸಂವಿಧಾನ ವಿರೋಧಿ ಕಾನೂನು ಆಗಿದೆ ಎಂದು ಸಂಸದ ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರ ವಕ್ಫ್ ಕಾನೂನಿಗೆ ತಿದ್ದುಪಡಿ ಮಾಡಲು ಮುಂದಾಗಿರುವ ಮಧ್ಯೆ ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ರೈತರ ಜಮೀನನ್ನು ಕಬಳಿಸಲು ಅವಕಾಶ ಕೊಡಲಾಗಿದೆ. ವಿಜಯಪುರದ ಕೋಣವಾಡ ಗ್ರಾಮದಲ್ಲಿ 1,200 ರೈತರ ಭೂಮಿಯನ್ನು ವಕ್ಫ್ ಆಸ್ತಿಯೆಂದು ಘೋಷಣೆ ಮಾಡುವ ದುಸ್ಸಾಹಸಕ್ಕೆ ರಾಜ್ಯ ಸರಕಾರ ಕೈ ಹಾಕಿದೆ ಎಂದು ಹೇಳಿದರು.

ಮಂಗಳೂರು ತಾಲೂಕಿನಲ್ಲಿ 37 ಆಸ್ತಿ ವಕ್ಫ್‌ಗೆ ನೋಟಿಫೈ ಆಗಿದೆ. ಇದರಲ್ಲಿ ಸರಕಾರಿ ಭೂಮಿಯೂ ಇದೆ. ಈ ಹಿಂದೆ ಅಲ್ಪಸಂಖ್ಯಾತ ನಿಗಮದ ಅಧಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ನೀಡಿದ ವರದಿಯಲ್ಲಿ ರಾಜ್ಯದಲ್ಲಿ 54 ಸಾವಿರ ಎಕರೆ ಭೂಮಿ ವಕ್ಫ್ ಸುಪರ್ದಿಯಲ್ಲಿದೆ. ಈ ಪೈಕಿ 29 ಸಾವಿರ ಎಕರೆ ಭೂಮಿಯನ್ನು ಅಕ್ರಮ ಪರಭಾರೆ ಮಾಡಲಾಗಿದೆ. ಈ ಹಗರಣದಲ್ಲಿ ಝಮೀರ್ ಅಹ್ಮದ್, ರೋಶನ್ ಬೇಗ್ ಸಹಿತ ಪ್ರಮುಖ ಮುಸ್ಲಿಂ ನಾಯಕರು ಇದ್ದಾರೆಂಬ ಆರೋಪವಿದೆ. ಈ ವರದಿ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಬ್ರಿಜೇಶ್ ಚೌಟ ಒತ್ತಾಯಿಸಿದರು.

ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ವಕ್ಫ್ ಹಗರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನ್ಯಾಯವಾದಿಗಳ ರಚಿಸಲಾಗಿದೆ. ನ.7ರಂದು ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.

ದ.ಕ.ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ ಪ್ರಕಟಿಸುವ ರಾಜ್ಯ ಸರಕಾರದ ನೀತಿಯನ್ನು ಸ್ವಾಗತಿಸುತ್ತೇವೆ. ಈ ನಿಟ್ಟಿನಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಬೆಂಬಲ ನೀಡುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಂಸದ ಬ್ರಿಜೇಶೌ ಚೌಟ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕೋಶಾಧಿಕಾರಿ ಸಂಜಯ್ ಪ್ರಭು, ಮಾಧ್ಯಮ ಸಂಚಾಲಕ ವಸಂತ್ ಪೂಜಾರಿ ಉಪಸ್ಥಿತರಿದ್ದರು.


Spread the love
Subscribe
Notify of

1 Comment
Inline Feedbacks
View all comments
Subhash Kulkarni
1 day ago

MP Brijesh, you are a educated man, don’t stoop such level to critisize the opposition party, because power is not permanent, work for the people without discrimination of caste, creed and religion. People are educated and understand the politicians well.