ವರುಣನ ಅಬ್ಬರಕ್ಕೆ ತತ್ತರಗೊಂಡ ಮುಂಬಯಿ ಮಹಾನಗರಿ

Spread the love

ವರುಣನ ಅಬ್ಬರಕ್ಕೆ ತತ್ತರಗೊಂಡ ಮುಂಬಯಿ ಮಹಾನಗರಿ, ಗುಡುಗು ಸಿಡಿಲು, ಸುಳಿಗಾಳಿ ಅರ್ಭಟಕ್ಕೆ ಬೆಚ್ಚಿಬಿದ್ದ ಮಯಾನಗರಿ ಜನತೆ

ಮುಂಬಯಿ: ವಾಣಿಜ್ಯನಗರಿ ಮುಂಬಯಿ ಇಂದು ಅಕ್ಷರಶಃ ಸಾಗರವಾಗಿ ಪರಿಣಮಿಸಿತ್ತು. ಕಾರಣ ಕಳೆದ ಸೋಮವಾರ ರಾತ್ರಿಯಿಂದಲೇ ಭಾರೀ ಪ್ರಮಾಣದ ಮಳೆ ಸುರಿದ ಪರಿಣಾಮ ರಾಷ್ಟ್ರದ ಆರ್ಥಿಕ ರಾಜಧಾನಿ ಮುಂಬಯಿ ಜನತೆ ನಿರುಪಯೋಗ ಪಡುವಂತಾಯಿತು.

ಇಂದಿಲ್ಲಿ ಮಂಗಳವಾರ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣದಿಂದಾಗಿ ದಿನಪೂರ್ತಿ ಸೂರ್ಯನನ್ನು ಕಾಣದ ಮಯಾನಗರಿಯಲ್ಲಿ ದಿನವಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಮುಂಬಯಿ ಭಾಗಶಃ ಕಡಲಾಗಿ ಮಾರ್ಪಟ್ಟಿತು. ಮಧ್ಯಾಂತರದಲ್ಲಿ ಅಪರೂಪವಾಗಿ ಕಡಿಮೆ ಮಟ್ಟದ ಗುಡುಗು ಸಿಡುಲುಗಳ ನಡುವೆ ಸುರಿದ ಮಳೆಯಿಂದಾಗಿ ಸಂಪೂರ್ಣವಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಸಮುದ್ರದಲ್ಲಿ ಅಲೆಗಳ ಏರುಬ್ಬರವಾಗಿ ಬೋರ್ಗರೆಯುವ ಸಾಗರ ನಾದ, ಚಂಡಮಾರುತದ ಭೀತಿಗೆ ಒಳಗಾಗಿ ನಗರದ ಜನತೆ ಆಗಷ್ಟೇ 2005ರ ಜುಲೈ.26ರ ನೆನಪನ್ನು ಸ್ಮರಿಸಿಕೊಂಡ ಮನೆಸೇರಿದರು.

ಅಪರಾಹ್ನ ಸುಮಾರು ಎರಡುವರೆ ಗಂಟೆಯ ಬಳಿಕ ರಾತ್ರಿಯಂತೆಯೇ ಕತ್ತಲು ಆವರಿಸಿ ಆರಂಭವಾದ ವರುಣನು ಸೂರ್ಯೋಸ್ತಮದ ವೇಳೆಗಷ್ಟೇ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದ್ದರೂ ರಾತ್ರಿ ತನಕವೂ ಎಡೆಬಿಡದೆ ಮುಂದುವರಿಯಿತು. ಮಧಯಾಹ್ನದಿಂದಲೇ ತನ್ನ ಎಂದಿನ ಚಾಳಿಯಂತೆಯೇ ಅಬ್ಬರಯುತವಾಗಿ ಎಡೆಬಿಡದೆ ಸುರಿದ ಮಳೆಗೆ ನಗರದ ಜನತೆ ಪ್ರಯಾಸ ಪಡುವಂತಾಯಿತು. ಬೋರ್ಗರೆದು ಬೀಸಿದ ಅತೀ ವೇಗದಾಯಕ ಗಾಳಿಯ ರಭಸಕ್ಕೆ ನಗರದ ಅನೇಕ ಮನೆ ನಿವಾಸಗಳ ಛಾವಣಿಗಳ ತಗಡು ಸಿಂಮೆಂಟ್ ಸೀಟುಗಳು ಹಾರಲ್ಪಟ್ಟರೆ ನೋಡು ನೋಡುತ್ತಿದ್ದಂತೆಯೇ ಅನೇಕ ಜೋಪಾಡಿಗಳ ಸೂರುಗಳು ಕಣ್ಮರೆಯಾದವು. ನೂರಾರು ವಾಹನಗಳು ನೀರಿನಲ್ಲಿ ಮುಳುಗಿದರೆ ಮತ್ತನೇಕವು ಗಾಳಿಯ ರಭಸಕ್ಕೆ ರಸ್ತೆಗುರುಳಿದವು.

ರೈಲು ನಿಲ್ದಾಣಗಳೂ ಜಲಾವೃತಗೊಂದ ಪರಿಣಾಮ ಮಹಾನಗರದ ಜೀವನಾಡಿಯಾದ ರೈಲು ಯಾನದಲ್ಲೂ ವ್ಯತ್ಯಯ ಕಂಡು ಪಶ್ಚಿಮ, ದಕ್ಷಿಣ ಮತ್ತು ಹರ್ಬರ್‍ಲೈನ್‍ನ ಸ್ಥಳಿಯ ನೂರಾರು ರೈಲುಗಳು ಸೇವೆ ಸ್ಥಗಿತ ಗೊಳಿಸಿದವು. ಮುಂಜಾನೆ ನಾಗ್ಪುರ-ಮುಂಬಾಯಿ ಡೊರಂಟೋ ಎಕ್ಸ್‍ಪ್ರೆಸ್ ಉಪನಗದ ಕರ್ಜತ್‍ನ ಅಸನ್‍ಗಾಂ ಸಮೀಪ ಹಳಿ ಜಾರಿದ ಕಾರಣ ದೂರಕ್ಕೆ ಸಾಗುವ ರೈಲುಗಳ ಸಂಚಾರದಲ್ಲೂ ವ್ಯತ್ಯಾಯವಾಗಿತ್ತು. ಚುನಾಭಟ್ಟಿ ಅಲ್ಲಿನ ರೈಲ್ವೇ ಹಳಿಗೆ ಕಂಪೌಂಡು ಗೋಡೆ ಕುಸಿದುಬಿದ್ದ ಕಾರಣ ರೈಲು ಪ್ರಯಾಣಿಕರು ತುಂಬಾ ಪ್ರಯಾಸ ಪಡುವಂತಾಯಿತು. ಮಜ್‍ಗಾಂ ಫ್ರೀವೇ ಹಾದಿಯಲ್ಲಿ ಕಾರುಗಳ ಢಿಕಿಯಾಗಿದ್ದು ಇಲ್ಲೂ ಸಂಚಾರ ಸ್ಥಗಿತಗೊಂಡರೆ, ಗಿರ್ಗಾಂವ್‍ನಲ್ಲಿ ಕಟ್ಟಡವೊಂದರ ಟೆರೇಸ್ ಕುಸಿದುÉ್ಕಲವೊಂದು ಮಂದಿಗಳೂ ಮಾತ್ರ ಗಾಯಗೊಂಡು ಪ್ರಥಮ ಚಿಕಿತ್ಸೆಗೆ ಒಳಗಾಗಿದ್ದಾರೆ.

ಈ ಬಾರಿ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಸೂಕ್ತವಾಗಿ ಕ್ರಮಗೊಂಡರೂ ನಿರಂತರ ಅತೀವವಾಗಿ ಸುರಿದ ಮಳೆಗೆ ಜನರು ಸಂಕಷ್ಟಕ್ಕೆ ಒಳಪಟ್ಟರು. ಭಾರೀ ಮಳೆಯ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆಯು ಮುನ್ನಚ್ಚರಿಕೆ ನೀಡಿ ಅನಗತ್ಯವಾಗಿ ಮನೆಹೊರಗೆ ಬಾರದಂತೆ ಸೂಚಿಸಿತ್ತು. ಆದರೆ ಇಂದು ಪಂಚದಿನದ ಗಣಪತಿ ವಿಸರ್ಜನಾ ವಿಧಿಯಾಗಿದ್ದರೂ ಶೋಭಯಾತ್ರೆ, ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿ ಸಂತಸ ಪಡಬೇಕಾಗಿದ್ದ ನಗರದ ಲಕ್ಷಾಂತರ ಗಣೇಶ ಭಕ್ತರು ನಿರಾಶದಾಯಕರಾಗಿ ಸದ್ದುಗದ್ದಲ ಇಲ್ಲದೇ ವಿನಾಯಕನ ನ್ನು ವಿಸರ್ಜಿಸಿದರು. ಕೆರೆ, ನದಿ, ಕಡಲ ತೀರದಲ್ಲಿ ಭಾರೀ ಭದ್ರತೆ ಮಾಡಲಾಗಿದ್ದು ಸರಕಾರ ಮತ್ತು ಪೋಲೀಸ್ ಇಲಾಖೆಯು ನಗರದ ಜನತೆಗೆ ಜಾಗರೂಕತೆ ವಹಿಸುವಂತೆ ಮುನ್ನಚ್ಚರಿಕೆ ನೀಡಿತ್ತು. ಇಂದು ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸಿ ಸ್ವತಃ ಬಿಎಂಸಿ ಅಲ್ಲಿನ ಕಂಟ್ರೋಲ್ ರೂಮ್‍ನಲ್ಲಿ ಹಾಜರಾಗಿ ಘಟನೆಗಳನ್ನು ಪರಿಶೀಲಿಸಿದರು.

ಚಿತ್ರ / ವರದಿ: ರೋನ್ಸ್ ಬಂಟ್ವಾಳ್


Spread the love