ವಲಯ ಮಟ್ಟದ ಕರ್ತವ್ಯಕೂಟ 2016 : ಉಡುಪಿ ಜಿಲ್ಲಾ ಪೊಲೀಸ್ ಸರ್ವಾಂಗೀಣ ಪ್ರಶಸ್ತಿ
ಉಡುಪಿ : ಅಗೋಸ್ತ್ 4 ರಿಂದ 5 ರವರೆಗೆ ಮುಡಿಪುವಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ನಡೆದ ಪಶ್ಚಿಮ ವಲಯ ಮತ್ತು ಮಂಗಳೂರು ನಗರ ಪೊಲೀಸ್ ಕರ್ತವ್ಯ ಕೂಟದಲ್ಲಿ ಉಡುಪಿ ಜಿಲ್ಲಾ ಪೊಲೀಸರು ವಿವಿಧ ಸ್ತರದ ಸ್ಪರ್ಧೆಗಳಲ್ಲಿ ಒಟ್ಟು 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚಿನ ಪದಕದೊಂದಿಗೆ ಸರ್ವಾಂಗೀಣ ಪ್ರಶಸ್ತಿಯನ್ನು ಪಡಕೊಂಡಿರುತ್ತಾರೆ.
ಇವರ ಈ ಸಾಧನೆಯನ್ನು ಉಡುಪಿ ಜಿಲ್ಲಾ ಪ್ರಭಾರ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎನ್.ವಿಷ್ಣುವರ್ಧನ ಸಹಿತ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಯವರು ಅಭಿನಂದಿಸಿರುತ್ತಾರೆ. ಶ್ರೀ ರಾಘವೇಂದ್ರ, ಪೊಲೀಸ್ ನಿರೀಕ್ಷಕರು, ಸಶಸ್ತ್ರ ಮೀಸಲು ಪಡೆರವರು ತಂಡದ ವ್ಯವಸ್ಥಾಪಕರಾಗಿರುತ್ತಾರೆ. ಶ್ರೀ ಪ್ರಕಾಶ್, ಜಿಲ್ಲಾ ಪೊಲೀಸ್ ಕಛೇರಿ, ಉಡುಪಿರವರು ತಂಡದ ಕೋಚ್, ಎರಡು ವಿಭಾಗದ ಸ್ಪರ್ಧೆಗಳ ನಿರ್ವಹಣೆಯನ್ನು ನಡೆಸಿರುತ್ತಾರೆ.