Home Mangalorean News Kannada News ವಳಚ್ಚಿಲ್ ಕಾಲೇಜು ಬಳಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಯತ್ನ – ಇಬ್ಬರ ಬಂಧನ

ವಳಚ್ಚಿಲ್ ಕಾಲೇಜು ಬಳಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಯತ್ನ – ಇಬ್ಬರ ಬಂಧನ

Spread the love

ವಳಚ್ಚಿಲ್ ಕಾಲೇಜು ಬಳಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಯತ್ನ – ಇಬ್ಬರ ಬಂಧನ

ಮಂಗಳೂರು: ವಳಚ್ಚಿಲ್ಪದವು, ಶ್ರೀನಿವಾಸ ಕಾಲೇಜು ಬಳಿ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ನೀರುಮಾರ್ಗ ನಿವಾಸಿ ಇಮ್ರಾನ್ (24) ಮತ್ತು ವಳಚ್ಚಿಲ್ ಫರಂಗೀಪೇಟೆ ನಿವಾಸಿ ಇಮ್ತಿಯಾಜ್ ಅಹ್ಮದ್ (33) ಎಂದು ಗುರುತಿಸಲಾಗಿದೆ.

ಮಂಗಳೂರು ತಾಲೂಕು, ಅರ್ಕುಳ ಗ್ರಾಮದ ವಳಚ್ಚಿಲ್ಪದವು, ಶ್ರೀನಿವಾಸ ಕಾಲೇಜು ಬಳಿ ಬಸ್ಸು ತಂಗುದಾಣದ ಬಳಿಯಲ್ಲಿ ಎಫ್ಝೆಡ್ ಮೋಟಾರು ಸೈಕಲ್ನಲ್ಲಿ ಬಂದು ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸು ಉಪ ನಿರೀಕ್ಷಕ ವೆಂಕಟೇಶ್ ಐ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ದಸ್ತಗಿರಿ ಮಾಡಿ ಸದ್ರಿ ಆರೋಪಿಗಳ ವಶದಲ್ಲಿದ್ದ ಸುಮಾರು 1 ಕೆ.ಜಿ. 350 ಗ್ರಾಮ್ ಗಾಂಜಾ, ಗಾಂಜಾ ಮಾರಾಟ ಮಾಡಿ ಬಂದ ನಗದು ಹಣ 15396/- ಎರಡು ಮೊಬೈಲ್ ಪೋನ್ ಮತ್ತು ಒಂದು ಎಪ್ಝೆಡ್ ಮೋಟಾರು ಸೈಕಲ್ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಮಂಗಳೂರು ನಗರದಲ್ಲಿ ಗಾಂಜಾ-ಮಾದಕವಸ್ತುವಿನ ದಂಧೆಯನ್ನು ಮಟ್ಟ ಹಾಕುವರೇ ಮಂಗಳೂರು ನಗರದ ಪೊಲೀಸು ಆಯುಕ್ತರು, ಅಪರಾಧ ಪತ್ತೆ ವಿಭಾಗದ ಪೊಲೀಸು ಉಪಾಯುಕ್ತರು, ಇವರ ಕಟ್ಟುನಿಟ್ಟಿನ ಆದೇಶದ ಮೇರೆಗೆ, ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸು ಆಯುಕ್ತರಾದ ಶ್ರೀ.ರಾಮರಾವ್ ರವರ ಮಾರ್ಗದರ್ಶನದಲ್ಲಿ, ಮಂಗಳೂರು ಗ್ರಾಮಾಂತರ ಪೊಲೀಸು ಠಾಣಾ ಪೊಲೀಸು ನಿರೀಕ್ಷಕರಾದ ಸಿದ್ದಗೌಡ ಹೆಚ್ ಭಜಂತ್ರಿ, ಪೊಲೀಸು ಉಪ ನಿರೀಕ್ಷಕರಾದ ವೆಂಕಟೇಶ್ ಐ,, ದಕ್ಷಿಣ ಉಪವಿಭಾಗದ ರೌಡಿ ನಿಗ್ರಹದಳದ ಸಿಬ್ಬಂದಿಯವರು ಮತ್ತು ಮಂಗಳೂರು ಗ್ರಾಮಾಂತರ ಪೊಲೀಸು ಠಾಣಾ ಸಿಬ್ಬಂದಿಯವರು ಸಹಕರಿಸಿದ್ದರು.


Spread the love

Exit mobile version