ವಾಟ್ಸ್ ಆ್ಯಪ್ ಮೂಲಕ ಚುನಾವಣೆಯ ಪ್ರಚಾರ ; ಜೆಡಿಯು ಜಿಲ್ಲಾಧ್ಯಕ್ಷನ ವಿರುದ್ದ ದೂರು
ಕುಂದಾಪುರ: ವಾಟ್ಸ್ ಆ್ಯಪ್ ಮೂಲಕ ಚುನಾವಣೆಯ ಪ್ರಚಾರ ಮಾಡುವ ಮೂಲಕ ನೀತಿ ಸಂಹಿತ ಉಲ್ಲಂಘಿಸಿರುವ ಸಂಯುಕ್ತ ಜನತಾದಳದ ಜಿಲ್ಲಾಧ್ಯಕ್ಷರ ವಿರುದ್ದ ಕುಂದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಯುಕ್ತ ಜನತಾದಳದ ಜಿಲ್ಲಾಧ್ಯಕ್ಷ ರಾಜೀವ್ ಕೋಟ್ಯಾನ್ ಅವರು ಇವರು ತಮ್ಮ ರಾಕೀಯ ಪಕ್ಷದ ಪ್ರಚಾರಕ್ಕೆ ಸಂಬಂದಿಸಿದಂತೆ Whatsapp application ಮುಖಾಂತರ ಸಂದೇಶಗಳನ್ನು ಪ್ರಸಾರ ಮಾಡುತ್ತಿರುವ ವಿಚಾರ ತಿಳಿದು ಬಂದಿದ್ದು, ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018 ಕ್ಕೆ ಸಂಬಂಧಿಸಿದ ರಾಜ್ಯದಲ್ಲಿ ನೀತಿ ಸಂಹಿತೆ ಜ್ಯಾರಿಯಲ್ಲಿರುತ್ತದೆ. ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ Whatsapp application ಮುಖಾಂತರ ಪಕ್ಷದ ಚುನಾವಣಾ ಪ್ರಚಾರ ಮಾಡಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿರುತ್ತಾರೆ ಎಂದು ಮಂಜುನಾಥ ಹೆಗ್ಡೆ, ನೀತಿ ಸಂಹಿತೆಯ ನೋಡಲ್ ಅಧಿಕಾರಿ, 119 ಕುಂದಾಪುರ ವಿಧಾನಸಭಾ ಕ್ಷೇತ್ರ ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಕುಂದಾಪುರ ಇವರು ಕುಂದಾಪುರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಕುರಿತು ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2018 ಕಲಂ: REPRESENTATION OF PEOPLE ACT, 1950,1951,1989 (U/s-123(3),127A); & IPC 1860 (U/s-171F,171G) ರಂತೆ ಪ್ರಕರಣ ದಾಖಲಾಗಿರುತ್ತದೆ.